alex Certify BIG BREAKING: ನಂದಿಬೆಟ್ಟದಲ್ಲಿ ಅವಘಡ; ಟ್ರೆಕ್ಕಿಂಗ್ ಹೋಗಿ ಜಾರಿಬಿದ್ದ ಯುವಕ; ರಕ್ಷಣೆಗಾಗಿ ಮೊರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ನಂದಿಬೆಟ್ಟದಲ್ಲಿ ಅವಘಡ; ಟ್ರೆಕ್ಕಿಂಗ್ ಹೋಗಿ ಜಾರಿಬಿದ್ದ ಯುವಕ; ರಕ್ಷಣೆಗಾಗಿ ಮೊರೆ

ಬೆಂಗಳೂರು: ಪ್ರಸಿದ್ದ ಪ್ರವಾಸಿ ತಾಣ ನಂದಿಬೆಟ್ಟದಲ್ಲಿ ಅವಘಡವೊಂದು ಸಂಭವಿಸಿದ್ದು, ಸ್ನೇಹಿತರೊಂದಿಗೆ ಟ್ರೆಕ್ಕಿಂಗ್ ಗೆ ಹೋದ ಯುವಕನೊಬ್ಬ ಕಾಲುಜಾರಿ ಬಿದ್ದಿದ್ದು ರಕ್ಷಣೆಗಾಗಿ ಮೊರೆ ಇಟ್ಟ ಘಟನೆ ನಡೆದಿದೆ.

ನಾಲ್ವರು ಸ್ನೇಹಿತರೊಂದಿಗೆ ಟ್ರೆಕ್ಕಿಂಗ್ ಗೆ ತೆರಳಿದ್ದ ನಿಶಾಂತ್ ಗುಲ್ಲಾ ಎಂಬ ಯುವಕ ಟ್ರೆಕಿಂಗ್ ವೇಳೆ ಕಾಲು ಜಾರಿ ನಿರ್ಜನ ಪ್ರದೇಶದಲ್ಲಿ ಬಿದ್ದಿದ್ದಾನೆ ಎನ್ನಲಾಗಿದೆ. ಬೆಟ್ಟದಲ್ಲಿ ಸಿಲುಕಿಕೊಂಡಿರುವ ಯುವಕ ತನ್ನ ಸ್ನೇಹಿತರಿಗೆ ಕರೆ ಮಾಡಿ ತಾನು ಜಾರಿ ಬಿದ್ದಿರುವುದಾಗಿ ಹಾಗೂ ತನ್ನನ್ನು ರಕ್ಷಣೆ ಮಾಡುವಂತೆ ತಿಳಿಸಿದ್ದಾನೆ.

BIG NEWS: ಹಿಜಾಬ್-ಕೇಸರಿ ಶಾಲು ಸಂಘರ್ಷದ ಮಧ್ಯೆ ಮತ್ತೊಂದು ಅಭಿಯಾನ; ಹೊಸದಾಗಿ ಆರಂಭವಾದ ಕುಂಕುಮ ಚಳುವಳಿ

ತಕ್ಷಣ ನಿಶಾಂತ್ ಸ್ನೇಹಿತರು ನಂದಿಗಿರಿಧಾಮ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ನಂದಿಬೆಟ್ಟದಲ್ಲಿ ಯುವಕನ ರಕ್ಷಣೆಗಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಯುವಕನ ಫೋನ್ ಸ್ವಿಚ್ಡ್ ಆಫ್ ಆಗಿದ್ದು, ಆತ ಬೆಟ್ಟದ ಯಾವ ಭಾಗದಲ್ಲಿ ಸಿಲುಕಿಕೊಂಡಿದ್ದಾನೆ ಎಂಬುದು ಗೊತ್ತಾಗದೆ ಪೊಲೀಸರು ಹರಸಾಹಸ ಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...