alex Certify BIG BOSS: 11 ಮಂದಿ ತಲೆ ಮೇಲೂ ನಾಮಿನೇಷನ್ ತೂಗುಗತ್ತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BOSS: 11 ಮಂದಿ ತಲೆ ಮೇಲೂ ನಾಮಿನೇಷನ್ ತೂಗುಗತ್ತಿ..!

ಬಿಗ್ ಬಾಸ್ ಮನೆ ದಿನದಿಂದ ದಿನಕ್ಕೆ ಸ್ಪರ್ಧಿಗಳಿಗೆ ಕಠಿಣ ಆಗ್ತಾ ಇದೆ. ಕಳೆದ ವಾರ ಪ್ರಬಲ ಸ್ಪರ್ಧಿ ದೀಪಿಕಾ ದಾಸ್ ಎಲಿಮಿನೇಡ್ ಆಗಿದ್ದರು. ಇದಾದ ಬಳಿಕ ಮನೆಯವರಿಗೆ ಒಂದು ರೀತಿಯ ಟೆನ್ಷನ್ ಶುರುವಾಗಿರೋದಂತೂ ನಿಜ. ಇದೀಗ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಬಲಾಬಲ ತಿಳಿಯಲು ಬಿಗ್ ಬಾಸ್ ದೊಡ್ಡ ಪರೀಕ್ಷೆ ನೀಡಿದ್ದಾರೆ.

ಹೌದು, ಈ ಬಾರಿ ಮನೆಯ 11 ಮಂದಿಯೂ ನಾಮಿನೇಟ್ ಆಗಿದ್ದಾರೆ. ಇಷ್ಟು ದಿನ ನಾಮಿನೇಡ್ ಆಗದೇ ಇದ್ದ ಸದಸ್ಯರೂ ನಾಮಿನೇಟ್ ಆಗಿದ್ದಾರೆ. ತಮ್ಮನ್ನ ತಾವು ಉಳಿಸಿಕೊಳ್ಳಲು ಆಟ ಆಡಲೇ ಬೇಕಾಗಿದೆ. ಜೊತೆಗೆ ಪ್ರೇಕ್ಷಕರ ಮತಗಳ ಆಧಾರದ ಮೇಲೆ ಸ್ಪರ್ಧಿಗಳು ಸೇಫ್ ಆಗಲಿದ್ದಾರೆ. ಹೀಗಾಗಿ ಈ ವಾರದ ಆಟ ಅತ್ಯಂತ ಕ್ಲಿಷ್ಟಕರವಾಗಿರಲಿದೆ.

ಇನ್ನು ಮೂರು ವಾರದಿಂದ ಸೇವ್ ಆಗಿದ್ದ ಕಾವ್ಯ ಶ್ರೀ ಅವರೂ ಕೂಡ ನಾಮಿನೇಟ್ ಆಗಿದ್ದಾರೆ. ಇನ್ನು ಈ ವಾರ ವೈಲ್ಡ್ ಕಾರ್ಡ್ ಎಂಟ್ರಿ ಇರೋದರ ಬಗ್ಗೆ ಬಿಗ್ ಬಾಸ್ ಮಾಹಿತಿ ನೀಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...