alex Certify ಭೀಮ್‌-ಯುಪಿಐಗೆ ಶಕ್ತಿ ತುಂಬಲು 1,300 ಕೋಟಿ ರೂ.ಗಳ ಪ್ರೋತ್ಸಾಹ ಧನದ ಯೋಜನೆಗೆ ಸಂಪುಟ ಅಸ್ತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭೀಮ್‌-ಯುಪಿಐಗೆ ಶಕ್ತಿ ತುಂಬಲು 1,300 ಕೋಟಿ ರೂ.ಗಳ ಪ್ರೋತ್ಸಾಹ ಧನದ ಯೋಜನೆಗೆ ಸಂಪುಟ ಅಸ್ತು

ಡಿಜಿಟಲ್ ಪಾವತಿಗಳಿಗೆ ಉತ್ತೇಜನ ನೀಡಲು ಮುಂದಾಗಿರುವ ಕೇಂದ್ರ ಸಂಪುಟ, ಯುಪಿಐ ಮತ್ತು ರುಪೇ ಡೆಬಿಟ್ ಕಾರ್ಡ್‌ಗಳ ಮೂಲಕ ಮಾಡುವ ವ್ಯವಹಾರಗಳಿಗೆ ಪ್ರೋತ್ಸಾಹ ಧನ ನೀಡಲೆಂದು 1,300 ಕೋಟಿ ರೂಪಾಯಿಯ ಯೋಜನೆಯೊಂದಕ್ಕೆ ಚಾಲನೆ ನೀಡಿದೆ.

2021-22ರ ಕೇಂದ್ರ ಬಜೆಟ್ ಮಂಡನೆ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಾಡಿದ್ದ ಘೋಷಣೆಯಂತೆ ಹೊಸದಾಗಿ ಬಂದ ಈ ಯೋಜನೆಯನ್ನು ರೂಪಿಸಲಾಗಿದೆ.

“ಯೋಜನೆಯಡಿ, ರುಪೇ ಡೆಬಿಟ್ ಕಾರ್ಡ್‌ಗಳು ಮತ್ತು ಭೀಮ್‌-ಯುಪಿಐ ಮೂಲಕ ಮಾಡುವ ಕಡಿಮೆ ಮೌಲ್ಯದ ಪಾವತಿಗಳಿಗೆ ವಹಿವಾಟಿನ ಮೌಲ್ಯದ ಪ್ರತಿಶತ (ಪಿ2ಎಂ) ಪಾವತಿ ಮೂಲಕ ಬ್ಯಾಂಕುಗಳಿಗೆ ಪ್ರೋತ್ಸಾಹ ಧನ ನೀಡಲಾಗುವುದು. ಏಪ್ರಿಲ್ 1, 2021ರಿಂದ ಅನ್ವಯವಾಗುವ ಈ ಯೋಜನೆಗೆ 1,300 ಕೋಟಿ ರೂ.ಗಳನ್ನು ಎತ್ತಿಡಲಾಗಿದೆ” ಎಂದು ಅಧಿಕೃತ ಪ್ರಕಟಣೆಯೊಂದು ತಿಳಿಸಿದೆ.

ಈ ಯೋಜನೆ ಮೂಲಕ ಡಿಜಿಟಲ್ ಪಾವತಿಗೆಂದು ಪರಿಣಾಮಕಾರಿ ವಾತಾವರಣ ನಿರ್ಮಿಸಿ, ಎಲ್ಲಾ ಕ್ಷೇತ್ರಗಳು ಹಾಗೂ ವರ್ಗಗಳ ಜನರಿಗೆ ರುಪೇ ಡೆಬಿಟ್ ಕಾರ್ಡ್ ಮತ್ತು ಭೀಮ್‌-ಯುಪಿಐ ಡಿಜಿಟಲ್ ಪಾವತಿಗಳಿಗೆ ಮುಂದಾಗುವಂತೆ ಉತ್ತೇಜನ ನೀಡಲು ಈ ಯೋಜನೆ ರೂಪಿಸಲಾಗಿದೆ ಎಂದು ಪ್ರಕಟಣೆ ವಿವರಿಸುತ್ತದೆ.

ರುಪೇ ಕಾರ್ಡ್ ಮತ್ತು ಭೀಮ್-ಯುಪಿಐ ಮೂಲಕ 2,000 ರೂ.ಗಳವರೆಗೂ ಮಾಡುವ ಡಿಜಿಟಲ್ ಪಾವತಿಗಳಿಗೆ ಯೋಜನೆ ಮೂಲಕ ಬ್ಯಾಂಕುಗಳಿಗೆ ಪಿ2ಎಂ ವೆಚ್ಚದ ಮರುಪಾವತಿ ಮಾಡಲಾಗುವುದು.

ನವೆಂಬರ್‌ ತಿಂಗಳೊಂದರಲ್ಲೇ ದೇಶದಲ್ಲಿ 423 ಕೋಟಿ ಡಿಜಿಟಲ್ ವಹಿವಾಟುಗಳ ಮೂಲಕ 7.56 ಲಕ್ಷ ಕೋಟಿ ರೂಪಾಯಿ ಮೌಲ್ಯದ ವ್ಯವಹಾರ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...