alex Certify Big News: ತಮಿಳುನಾಡಿನ ವಿಧುರಗಿರೀಶ್ವರ ದೇವಸ್ಥಾನದ ಮೇಲಿದ್ದ ಕಲಶ ನಾಪತ್ತೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Big News: ತಮಿಳುನಾಡಿನ ವಿಧುರಗಿರೀಶ್ವರ ದೇವಸ್ಥಾನದ ಮೇಲಿದ್ದ ಕಲಶ ನಾಪತ್ತೆ…!

ತಮಿಳುನಾಡಿ‌ನ ಕಡಲೂರು ಜಿಲ್ಲೆಯ ವಿರುಧಗಿರೀಶ್ವರ ದೇವಸ್ಥಾನದ ಗೋಪುರದ ಮೇಲಿದ್ದ ಮೂರು ಕಲಶಗಳು ಕಾಣೆಯಾಗಿವೆ.‌ ಇದರಿಂದ ಇಡೀ ಭಕ್ತ ಸಮೂಹ ಆತಂಕದಲ್ಲಿದ್ದು, ಕಲಶಗಳನ್ನು ಕಳವು ಮಾಡಿದ್ಯಾರು ಎಂಬ ಆಕ್ರೋಶದಲ್ಲಿದೆ.

ವರದಿಗಳ ಪ್ರಕಾರ, ಗೋಪುರದ ಮೇಲಿದ್ದ ಮೂರು ಕಲಶಗಳಿಗೆ 400 ಗ್ರಾಂ ತೂಕದ ಚಿನ್ನದ ಲೇಪನ ಮಾಡಲಾಗಿದೆ. ವಿರುಧಾಚಲಂನಲ್ಲಿರುವ ವಿರುಧಗಿರೀಶ್ವರ ದೇವಾಲಯವು ಸುಮಾರು 1500 ವರ್ಷಗಳಷ್ಟು ಹಳೆಯದಾಗಿದ್ದು, ಇದನ್ನು ಚೋಳರು ನಿರ್ಮಿಸಿದ್ದಾರೆ. ಪವಿತ್ರ ಭೂಮಿ ಕಾಶಿಗೆ ಭೇಟಿ ನೀಡುವ ಭಕ್ತರಿಗೆ ಈ ದೇವಾಲಯವನ್ನು ಮಂಗಳಕರವೆಂದು ಪರಿಗಣಿಸಲಾಗಿದೆ.

ಈ ದೇವಾಲಯಕ್ಕೆ ಶೈವ ಕುಲದ ಸಂತ ಕವಿಗಳಾದ ತಿರುಜ್ಞಾನಸ್ಬಂದರ್, ಸುಂದರಂ ಮತ್ತು ತಿರುವಾಸಾಗರರ ಇತಿಹಾಸವಿದೆ. ಅವರು ಈ ದೇವಾಲಯದಲ್ಲಿ ಸ್ತೋತ್ರಗಳನ್ನು ಹಾಡಿದ್ದಾರೆಂಬ ಪ್ರತೀತಿಯಿದೆ. ಕಳೆದ ಫೆಬ್ರವರಿ 6 ರಂದು ದೇವಸ್ಥಾನದಲ್ಲಿ ಕುಂಭಾಭಿಷೇಕ ಕಾರ್ಯಕ್ರಮಗಳು ಅದ್ಧೂರಿಯಾಗಿ ನೆರವೇರಿದ್ದವು ಎಂದು ದೇವಸ್ಥಾನದ ಮಂಡಳಿ ತಿಳಿಸಿದೆ.‌

ʼಹವಾಮಾನʼ ವೈಪರೀತ್ಯ ಕುರಿತು ಐಪಿಸಿಸಿ ರಿಪೋರ್ಟ್ ನಲ್ಲಿ ಮಹತ್ವದ ಮಾಹಿತಿ

ಮಂಗಳವಾರ ಬೆಳಗ್ಗೆ ದೇವಸ್ಥಾನದ ಬಳಿಗೆ ಬಂದ ಭಕ್ತರು, ಕಲಶಗಳು ನಾಪತ್ತೆಯಾಗಿರುವುದನ್ನು ಗಮನಿಸಿ ಬೆಚ್ಚಿಬಿದ್ದಿದ್ದಾರೆ. ಕೂಡಲೇ ಭಕ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.‌ ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕಾಗಮಿಸಿದ ಸುತ್ತಮುತ್ತಲಿನ ಸಿಸಿ ಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿ ತನಿಖೆ ಆರಂಭಿಸಿದ್ದಾರೆ.

ಕಲಶಗಳ ಮೇಲೆ 400 ಗ್ರಾಂ ಚಿನ್ನದ ಲೇಪನವಿದೆ. ಭಾರತದಿಂದ ಅಕ್ರಮವಾಗಿ ಸಾಗಿಸಲು ಅಥವಾ ಕಾಳಸಂತೆಯಲ್ಲಿ ಮಾರಾಟ ಮಾಡಲು ಕಳ್ಳತನ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...