alex Certify ಮಸೀದಿ ಮೇಲೆ ಭಗವಾಧ್ವಜ ಹಾರಿಸಿದ ನಾಲ್ವರು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಸೀದಿ ಮೇಲೆ ಭಗವಾಧ್ವಜ ಹಾರಿಸಿದ ನಾಲ್ವರು ಅರೆಸ್ಟ್

ಬೀದರ್: ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಧನ್ನೂರ(ಕೆ) ಗ್ರಾಮದ ಜಾಮಾ ಮಸೀದಿ ಮೇಲೆ ಭಗವಾಧ್ವಜ ಹಾರಿಸಿದ ಆರೋಪದ ಹಿನ್ನೆಲೆಯಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಗ್ರಾಮದ ವೀರೇಶ್(20), ಕಲ್ಯಾಣಿ ರಾಜಕುಮಾರ್(20) ಸುಶೀಲ ಶಿವಕುಮಾರ್ ಬಿರಾದಾರ(19), ಅಭಿಷೇಕ್(19) ಬಂಧಿತ ಯುವಕರು. ಸೆಪ್ಟೆಂಬರ್ 20 ರಂದು ರಾತ್ರಿ ಮದ್ಯ ಸೇವಿಸಿದ ನಾಲ್ವರು ಯುವಕರು ಗ್ರಾಮದಲ್ಲಿನ ಹನುಮಾನ್ ದೇವಸ್ಥಾನದ ಮೇಲಿನ ಭಗವಾಧ್ವಜ ತೆಗೆದು ಜಾಮಾ ಮಸೀದಿ ಮೇಲೆ ಕಟ್ಟಿದ್ದಾರೆ. ಈ ಕುರಿತಾಗಿ ಮಸೀದಿಯ ಚಾಂದಸಾಬ್ ದೂರು ನೀಡಿದ್ದು, ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸೆಪ್ಟಂಬರ್ 21ರಂದು ಕೇಸು ದಾಖಲಿಸಲಾಗಿತ್ತು. ತನಿಖೆ ನಡೆಸಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಗ್ರಾಮದಲ್ಲಿ ಶಾಂತಿ ಸಭೆ ನಡೆಸಿ ಶಾಂತಿ ಕಾಪಾಡುವಂತೆ ಗ್ರಾಮಸ್ಥರಿಗೆ ಮನವಿ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...