alex Certify Shocking: ಸಿನಿಮಾದಲ್ಲಿನ ರೊಮ್ಯಾಂಟಿಕ್​ ದೃಶ್ಯ ನೋಡಿದ ಯುವಕನಿಂದ ಮಾನಗೇಡಿ ಕೆಲಸ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking: ಸಿನಿಮಾದಲ್ಲಿನ ರೊಮ್ಯಾಂಟಿಕ್​ ದೃಶ್ಯ ನೋಡಿದ ಯುವಕನಿಂದ ಮಾನಗೇಡಿ ಕೆಲಸ..!

ಸಿನಿಮಾಗಳು ಅಂದಮೇಲೆ ಅದರಲ್ಲಿ ರೊಮ್ಯಾಂಟಿಕ್​​ ದೃಶ್ಯಗಳು ಇರೋದು ಸರ್ವೇ ಸಾಮಾನ್ಯ. ಆದರೆ ಇಂತಹ ದೃಶ್ಯಗಳನ್ನು ನೋಡುವ ಮುನ್ನ ಭಾವನೆಗಳನ್ನು ನಿಯಂತ್ರಿಸಿಕೊಳ್ಳಬೇಕು. ಇಲ್ಲವಾದರಲ್ಲಿ ನೀವು ಬಹುದೊಡ್ಡ ಯಡವಟ್ಟು ಮಾಡಿಕೊಳ್ಳುವ ಸಾಧ್ಯತೆ ಇದೆ.

ಇದೇ ರೀತಿಯ ಘಟನೆಯೊಂದು ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಹಾಗೂ ನಟಿ ಕತ್ರಿನಾ ಕೈಫ್​ ಅಭಿನಯದ ಸೂರ್ಯವಂಶಿ ಸಿನಿಮಾ ವೀಕ್ಷಣೆ ಸಂಭವಿಸಿದೆ. ಭೂಪಾಲ್​​ನ ಸಂಗಮ್​ ಕಾಂಪ್ಲೆಕ್ಸ್​ನಲ್ಲಿ ಸಿನಿಮಾ ವೀಕ್ಷಿಸುತ್ತಿದ್ದ ವೇಳೆ ಯುವಕನೊಬ್ಬ ರೊಮ್ಯಾಂಟಿಕ್​ ದೃಶ್ಯವನ್ನು ನೋಡಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ .ಈ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

ಮಹಿಳೆ ಹಾಗೂ ಇತರೆ ಪ್ರೇಕ್ಷಕರು ಯುವಕನನ್ನು ತರಾಟೆಗೆ ತೆಗೆದುಕೊಂಡ ಬಳಿಕ ಆತ ಘಟನೆ ಸಂಬಂಧ ಕ್ಷಮೆಯಾಚಿಸಿದ್ದಾನೆ. ಈ ಘಟನೆ ಸಂಬಂಧ ಈವರೆಗೆ ಯಾವುದೇ ಪೊಲೀಸ್​ ದೂರು ದಾಖಲಾಗಿಲ್ಲ.

ಮಹಿಳೆಯ ಮುಂದೆ ಕೂತಿದ್ದ ಯುವಕ ರೊಮ್ಯಾಂಟಿಕ್​ ದೃಶ್ಯವನ್ನು ನೋಡಿದ ಬಳಿಕ ಮಹಿಳೆಯ ಕಡೆ ಮುಖಮಾಡಿ ಅಶ್ಲೀಲವಾಗಿ ಮಾತನಾಡಿದ್ದಾನೆ ಎನ್ನಲಾಗಿದೆ. ಮೊದಲು ಇದನ್ನು ಮಹಿಳೆ ಕಡೆಗಣಿಸಿದ್ದಾರೆ. ಆದರೆ ಯುವಕ ಮತ್ತೆ ಮತ್ತೆ ಅಶ್ಲೀಲತೆ ತೋರುತ್ತಿದ್ದಂತೆಯೇ ಆತನ ವಿರುದ್ಧ ಧ್ವನಿ ಎತ್ತಿದ್ದಾಳೆ.

ಮಹಿಳೆ ವಿರೋಧಿಸಿದ ಬಳಿಕವೂ ಯುವಕ ಅಶ್ಲೀಲವಾಗಿ ಮಾತನಾಡುವುದನ್ನು ಮುಂದುವರಿಸಿದ್ದ. ತನ್ನ ಸೀಟಿನಿಂದ ಎದ್ದು ನಿಂತ ಮಹಿಳೆ ಚಪ್ಪಲಿಯಿಂದ ಆತನಿಗೆ ಬಾರಿಸಿದ್ದಾಳೆ. ಕೂಡಲೇ ಇತರೆ ಪ್ರೇಕ್ಷಕರು ಮಹಿಳೆಗೆ ಸಾಥ್​ ನೀಡಿದ್ದು ಯುವಕನಿಗೆ ನಿಂದಿಸಿದ್ದಾರೆ. ಬಳಿಕ ಆತನನ್ನು ಸಿನಿಮಾ ಹಾಲ್​ನಿಂದ ಹೊರ ಹಾಕಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...