alex Certify ಭರ್ಜರಿ ಗಂಡು ಚಿತ್ರದ ‘ಹುಯ್ಯೋ ಹುಯ್ಯೋ ಮಳೆರಾಯ’ ಹಾಡು ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭರ್ಜರಿ ಗಂಡು ಚಿತ್ರದ ‘ಹುಯ್ಯೋ ಹುಯ್ಯೋ ಮಳೆರಾಯ’ ಹಾಡು ರಿಲೀಸ್

ಪ್ರಸಿದ್ಧ್ ನಿರ್ದೇಶನದ ಕಿರಣ್ ರಾಜ್ ನಟನೆಯ ಭರ್ಜರಿ ಗಂಡು ಚಿತ್ರದ ‘ಹುಯ್ಯೋ ಹುಯ್ಯೋ ಮಳೆರಾಯ’ ಎಂಬ ವಿಡಿಯೋ ಹಾಡು ನಿನ್ನೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ಗಾನಪ್ರಿಯರ ಗಮನ ಸೆಳೆದಿದೆ. ರಘು ದೀಕ್ಷಿತ್ ಧ್ವನಿಯಲ್ಲಿ ಮೂಡಿ ಬಂದಿರುವ ಈ ಹಾಡಿಗೆ ಗುಮ್ಮಿನೇನಿ ವಿಜಯ್ ಸಂಗೀತ ಸಂಯೋಜನೆ ನೀಡಿದ್ದು, ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ.

ಈ ಚಿತ್ರವನ್ನು ಪ್ರಸಿದ್ಧ್ ಸಿನಿಮಾಸ್ ಕ್ಯಾಂಪ್ ಬ್ಯಾನರ್ ನಲ್ಲಿ ಪ್ರಸಿದ್ಧ್, ಮದನ್ ಗೌಡ,  ಮತ್ತು ಅನಿಲ್ ಕುಮಾರ್ ನಿರ್ಮಾಣ ಮಾಡಿದ್ದು, ಕಿರಣ್ ರಾಜ್ ಮತ್ತು ಯಶ ಶಿವಕುಮಾರ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ವೆಂಕಿ ಸಂಕಲನವಿದ್ದು, ಕಿಟ್ಟಿ ಕೌಶಿಕ್ ಛಾಯಾಗ್ರಹಣ, ಗುಮ್ಮಿನೇನಿ ವಿಜಯ್ ಸಂಗೀತವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...