alex Certify BIG NEWS: ಫೆ. 26 ರಂದು ಭಾರತ್ ಬಂದ್ ಗೆ ಕರೆ – AITWA ಬೆಂಬಲ, ಚಕ್ಕಾ ಜಾಮ್ ಗೆ ನಿರ್ಧಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಫೆ. 26 ರಂದು ಭಾರತ್ ಬಂದ್ ಗೆ ಕರೆ – AITWA ಬೆಂಬಲ, ಚಕ್ಕಾ ಜಾಮ್ ಗೆ ನಿರ್ಧಾರ

ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ವಿರುದ್ಧ ಕಾನ್ಫಿಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ಈ ತಿಂಗಳ 26 ರಂದು ಕರೆ ನೀಡಿರುವ ಭಾರತ ಬಂದ್‍ಗೆ ಭಾರತದ ರಸ್ತೆ ಸಾರಿಗೆ ವಲಯದ ಅತ್ಯುನ್ನತ ಸಂಸ್ಥೆಗಳಲ್ಲೊಂದಾದ ಆಲ್ ಇಂಡಿಯಾ ಟ್ರಾನ್ಸ್ಪೋರ್ಟರ್ಸ್ ವೆಲ್ಫೇರ್ ಅಸೋಸಿಯೇಶನ್ (ಎಐಟಿಡಬ್ಲ್ಯುಎ) ಬೆಂಬಲ ಫೋಷಿಸಿದೆ. ಅದೇ ದಿನ ಛಕ್ಕಾ ಜಾಮ್ ಅಥವಾ ರಸ್ತೆ ತಡೆ ನಡೆಸಲು ನಿರ್ಧರಿಸಲಾಗಿದೆ.

ಇಂಧನ ದರ ಏರಿಕೆ ಮತ್ತು ಭಾರತ ಸರ್ಕಾರ ಜಾರಿಗೆ ತಂದಿರುವ ಹೊಸ ಇ-ವೇ ಬಿಲ್ ಕಾನೂನುಗಳ ವಿರುದ್ಧ  ಎಐಟಿಡಬ್ಲ್ಯುಎ ಕರೆ ನೀಡಿರುವ ಒಂದು ದಿನದ ಸಾರಿಗೆ ಅಸಹಕಾರಕ್ಕೆ ಎಲ್ಲ ರಾಜ್ಯಮಟ್ಟದ ಸಾರಿಗೆ ಸಂಘಗಳು ಬೆಂಬಲ ದೃಢಪಡಿಸಿವೆ.

ಪ್ರತಿಭಟನೆಯ ಸ್ವರೂಪ ಎಲ್ಲ ಬುಕ್ಕಿಂಗ್ ತಿರಸ್ಕರಿಸುವುದು ಮತ್ತು ಇ-ಬಿಲ್ ಕೇಂದ್ರಿತ ಸರಕುಗಳ ಸಾಗಾಣಿಕೆಯನ್ನು ಒಂದು ದಿನ ತಿರಸ್ಕರಿಸುವುದ್ದಾಗಿರುತ್ತದೆ. ಎಲ್ಲ ಸಾರಿಗೆ ಕಂಪನಿಗಳು ಸಾಂಕೇತಿಕ ಪ್ರತಿಭಟನಾರ್ಥವಾಗಿ ಬೆಳಿಗ್ಗೆ 6 ರಿಂದ ರಾತ್ರಿ 8 ರವರೆಗೆ ಟ್ರಕ್‍ಗಳನ್ನು ನಿಲ್ಲಿಸಲು ಕೋರಲಾಗಿದೆ. ಎಲ್ಲ ಸಾರಿಗೆ ಗೋದಾಮುಗಳು ಪ್ರತಿಭಟನೆ ಬ್ಯಾನರ್‍ಗಳನ್ನು ಪ್ರದರ್ಶಿಸಲಿವೆ.

2021ರ ಫೆಬ್ರುವರಿ 26 ರಂದು ಯಾವುದೇ ಸರಕು ಸಾಗಾಣಿಕೆ ಬುಕ್ಕಿಂಗ್ ಮಾಡದಂತೆ ಅಥವಾ ಲೋಡ್ ಮಾಡದಂತೆ ಎಲ್ಲ ಗ್ರಾಹಕರಿಗೆ ಸಾರಿಗೆ ಕಂಪನಿಗಳು ಮನವಿ ಮಾಡಿಕೊಳ್ಳಲಿವೆ ಎಂದು ಎಐಟಿಡಬ್ಲ್ಯುಎ ರಾಷ್ಟ್ರೀಯ ಅಧ್ಯಕ್ಷ ಮಹೇಂದ್ರ ಆರ್ಯ ಹೇಳಿದ್ದಾರೆ.

ದೇಶಾದ್ಯಂತ ಸರಕು ಸಾಗಾಣಿಕೆದಾರರು ಇತ್ತೀಚೆಗೆ ತಿದ್ದುಪಡಿ ತಂದಿರುವ ಜಿಎಸ್‍ಟಿ ಕಾನೂನುಗಳನ್ನು ಬಳಸುತ್ತಾ ಬಂದಿದ್ದಾರೆ. ಇದು ಅಂತರ ರಾಜ್ಯ ಮತ್ತು ರಾಜ್ಯದೊಳಗೆ ಸರಕು ಸಾಗಾಣಿಕೆಗೆ ಇರುವ ಇ-ವೇ ಬಿಲ್‍ಗಳ ಮಾನ್ಯತೆಯನ್ನು ದಿನಕ್ಕೆ 200 ಕಿಲೋಮೀಟರ್‍ಗಳಿಂದ 100 ಕಿಲೋಮೀಟರ್‍ಗೆ ಅರ್ಧ ಮಾಡಿದೆ. ಸಿಜಿಎಸ್‍ಟಿ ಕಾಯ್ದೆ-2017ರ ಸೆಕ್ಷನ್ 129 ರ ಅನ್ವಯ ಅವಧಿ ಮೀರಿದ ಇ-ವೇ ಬಿಲ್‍ಗಳನ್ನು ಹೊಂದಿ, ಸರಕು ಸಾಗಾಣಿಕೆ ಮಾಡುವ ಟ್ರಕ್‍ಗಳಿಗೆ ವಿಧಿಸುವ ದಂಡ ಅಥವಾ ದೋಷಪೂರಿತ ಇ-ವೇ ಬಿಲ್ ಮೊತ್ತವಿರುವ ಪ್ರಕರಣಗಳಲ್ಲಿ ವಿಧಿಸುವ ದಂಡವನ್ನು ತೆರಿಗೆ ಮೊತ್ತದ ಪ್ರತಿಶತ 200 ಅಥವಾ ಇನ್‍ವೈಸ್ ಮೌಲ್ಯದ ಶೇಕಡ 100 ರಷ್ಟು ಆಗಿರುತ್ತದೆ.

ಸಣ್ಣ ಹಾಗೂ ಮಧ್ಯಮ ಪ್ರಮಾಣದ ಸಾರಿಗೆದಾರರು ಅದರಲ್ಲೂ ಮುಖ್ಯವಾಗಿ ಸರಕುಗಳ ಭಾಗಶಃ ಲೋಡ್ ಸಾಗಾಣಿಕೆ ಮಾಡುವ ಸಾಗಾಣಿಕೆದಾರರು ಅಥವಾ ಚಿಲ್ಲರೆ ಸಾಗಾಣಿಕೆದಾರರು ಹೊಸ ನಿಯಮಾವಳಿಗೆ ಬದ್ಧರಾದಲ್ಲಿ, ಅವರ ಮೇಲಿನ ಬದ್ಧತೆಯ ಹೊರೆ ಅಧಿಕ ಹಾಗೂ ದುಬಾರಿಯಾಗಲಿದೆ. ಪರಿಸ್ಥಿತಿಗೆ ಅನುಗುಣವಾದ ವಿಳಂಬಕ್ಕೆ ಲಕ್ಷಾಂತರ ರೂಪಾಯಿ ದಂಡ ಪಾವತಿಸಬೇಕಾಗುತ್ತದೆ. ಇದು ಇಡೀ ವಹಿವಾಟು ಮುಚ್ಚಲು ಕಾರಣವಾಗಲಿದೆ.

ಸಾರಿಗೆ ಉದ್ಯಮದ ವಿವಿಧ ಸಮಸ್ಯೆಗಳ ವಿಚಾರದಲ್ಲಿ ಎಐಟಿಡಬ್ಲ್ಯುಎ ಭಾರತ ಸರ್ಕಾರಕ್ಕೆ ಪತ್ರಗಳನ್ನು ಬರೆದಿದೆ. ಮುಖ್ಯವಾಗಿ ಜಿಎಸ್‍ಟಿಯಡಿಯಲ್ಲಿ ಕಾರ್ಯಸಾಧುವಲ್ಲದ ಇ-ವೇ ಬಿಲ್ ಮತ್ತು ಡೀಸೆಲ್ ಬೆಲೆ ನೀತಿಯ ವಿರುದ್ಧ ಧ್ವನಿ ಎತ್ತಿದೆ. “ಜಿಎಸ್‍ಟಿಯಡಿ ಇ-ವೇ ಬಿಇಲ್ ನಿಯಮವಳಿಯನ್ನು ರದ್ದುಪಡಿಸುವಂತೆ ಎಐಟಿಡಬ್ಲ್ಯುಎ ಆಗ್ರಹಿಸುತ್ತದೆ. ಏಕೆಂದರೆ ಹೊಸದಾಗಿ ಜಾರಿಗೆ ತಂದಿರುವ ಇ-ಇನ್‍ವೈಸ್, ತೆರಿಗೆ ಕಳ್ಳತನವನ್ನು ತಪ್ಪಿಸಲು ಸಕಾಗುತ್ತದೆ. ಫಾಸ್ಟ್ಯಾಗ್ ಸಂಪರ್ಕವನ್ನು ಇ-ಇನ್‍ವೈಸ್ ಜತೆಗೆ ಜೋಡಿಸುವ ಮೂಲಕ ಸರ್ಕಾರ ವಾಹನಗಳ ಚಲನೆಯ ಮೇಲೆ ನಿಗಾ ಇಡಬಹುದು. ಆವುದೇ ಸಮಯ ಆಧರಿತ ಬದ್ಧತೆ ಗುರಿಗಳ ವಿಚಾರದಲ್ಲಿ ಸರ್ಕಾರದ ದಂಡಗಳಿಗೆ ಸಾಗಾಣಿಕೆದಾರರು ಗುರಿಯಾಗಬಾರದು. ಡೀಸೆಲ್ ಬೆಲೆಗಳನ್ನು ಉಳಿಸಬೇಕು ಹಾಗೂ ಇದಕ್ಕೆ ಅಗತ್ಯವಾದ ಕಾರ್ಯವಿಧಾನವನ್ನು ಚರ್ಚಿಸಬೇಕು. ಭವಿಷ್ಯದ ನಿಯಂತ್ರಣಕ್ಕಾಗಿ ಸಾರಿಗೆ ಉದ್ಯಮದ ಜತೆ ಚರ್ಚಿಸಿ ನೀತಿ ರೂಪಿಸಬೇಕು. ದೇಶದ ಉದ್ದಗಲಕ್ಕೂ ಏಕರೂಪದ ಡೀಸೆಲ್ ಬೆಲೆ ನಿಗದಿಪಡಿಸಬೇಕು” ಎಂದು ಎಐಟಿಡಬ್ಲ್ಯುಎ ರಾಷ್ಟ್ರೀಯ ಅಧ್ಯಕ್ಷ ಮಹೇಂದ್ರ ಆರ್ಯ ಒತ್ತಾಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...