alex Certify ಇಲ್ಲಿದೆ 20,000 ರೂ. ಒಳಗಿನ ಬೆಸ್ಟ್‌ ಸ್ಮಾರ್ಟ್‌ ಫೋನ್‌ ಗಳ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ 20,000 ರೂ. ಒಳಗಿನ ಬೆಸ್ಟ್‌ ಸ್ಮಾರ್ಟ್‌ ಫೋನ್‌ ಗಳ ಪಟ್ಟಿ

ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಬಳಸುವ ಗ್ಯಾಜೆಟ್ ಆಗಿರುವ ಸ್ಮಾರ್ಟ್‌ಫೋನ್‌ಗಳು ಬಹುದೊಡ್ಡ ಮಾರುಕಟ್ಟೆ ಹೊಂದಿವೆ. ಅದರಲ್ಲೂ ಮಧ್ಯಮ ವರ್ಗದವರೇ ಹೆಚ್ಚಾಗಿರುವ ಭಾರತದಲ್ಲಿ 20,000 ರೂಪಾಯಿಗಳ ಒಳಗಿನ ಮಾಡೆಲ್‌ಗಳು ಬಹಳ ಬೇಡಿಕೆ ಹೊಂದಿವೆ.

ಸದ್ಯದ ಮಟ್ಟಿಗೆ ಇದೇ ರೇಂಜ್‌ನಲ್ಲಿರುವ ಟಾಪ್ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಇಂತಿದೆ.

1. ಪೋಕೋ ಎಕ್ಸ್‌3 ಪ್ರೋ: ಚೀನಾ ನಿರ್ಮಿತ ಈ ಸ್ಮಾರ್ಟ್‌ಫೋನ್ ಬ್ರಾಂಡ್‌ನ ಉತ್ಪನ್ನವು 18,999 ರೂಪಾಯಿಗೆ ಲಭ್ಯ ಇದ್ದು, ಭಾರತದಲ್ಲಿ ಫ್ಲಿಪ್‌ಕಾರ್ಟ್ ಮೂಲಕ ಖರೀದಿಸಬಹುದಾಗಿದೆ. 6.67 ಇಂಚು ಎಫ್‌ಎಚ್‌ಡಿ+ ಡಿಸ್‌ಪ್ಲೇ ಹೊಂದಿರುವ ಈ ಸ್ಮಾರ್ಟ್‌ಫೋನ್‌ 120ಹರ್ಟ್ಸ್ ರಿಫ್ರೆಶ್‌ ದರ ಹೊಂದಿದೆ. ಈ ಫೋನ್‌ನಲ್ಲಿ ಕ್ವಾಲ್ಕಾಂನ ಸ್ನಾಪ್‌ಡ್ರಾಗನ್ 732ಜಿ ಚಿಪ್‌ಸೆಟ್ ಇದ್ದು, 8ಜಿಬಿ ರ‍್ಯಾಮ್ ಹಾಗೂ 128 ಜಿಬಿ ಆಂತರಿಕ ಸ್ಟೋರೇಜ್ ಹೊಂದಿದೆ. 6000 ಎಂಎಎಚ್‌ ಬ್ಯಾಟರಿ ಹೊಂದಿರುವ ಈ ಫೋನ್‌ 33 ವ್ಯಾಟ್‌ ತ್ವರಿತ ಚಾರ್ಜಿಂಗ್‌ ವ್ಯವಸ್ಥೆ ಹೊಂದಿದೆ. 64 ಮೆಗಾಪಿಕ್ಸೆಲ್ ಪ್ರೈಮರಿ ಶೂಟರ್‌ ಇರುವ ಕ್ವಾಡ್ ಕ್ಯಾಮೆರಾವನ್ನು ಹಿಂದಿನ ಭಾಗದಲ್ಲಿ ಈ ಫೋನ್‌ ಹೊಂದಿದೆ.

2. ಐಕೂ ಜ಼ಡ್‌3: ಐಕೂ ಜ಼ಡ್‌3 5ಜಿ ಫೋನ್‌‌ನ ಬೇಸಿಕ್ ವರ್ಶನ್‌ ಭಾರತದಲ್ಲಿ 19,990 ರೂಪಾಯಿ ಇದೆ. ಈ ಸ್ಮಾರ್ಟ್‌ಫೋನ್‌ 6.58 ಇಂಚು ಎಫ್‌ಎಚ್‌ಡಿ ಡಿಸ್ಪ್ಲೇ ಹೊಂದಿದ್ದು, 120 ಹರ್ಟ್ಸ್ ರಿಫ್ರೆಶ್ ದರ ಹೊಂದಿದೆ. ಕ್ವಾಲ್ಕಾಂ ಸ್ನಾಪ್‌ಡ್ರಾಗನ್ 768 ಚಿಪ್‌ಸೆಟ್ ಹೊಂದಿರುವ ಈ ಸ್ಮಾರ್ಟ್‌ಫೋನ್‌ ನಲ್ಲಿ 8ಜಿಬಿ ರ‍್ಯಾಮ್‌ ಜೊತೆಗೆ 256 ಜಿಬಿ ಆಂತರಿಕ ಸ್ಮರಣಾಶಕ್ತಿ ಹೊಂದಿದೆ. 4,400 ಎಂಎಎಚ್‌ ಬ್ಯಾಟರಿ ಹೊಂದಿರುವ ಈ ಫೋನ್‌ 55 ವ್ಯಾಟ್‌ ತ್ವರಿತ ಚಾರ್ಜಿಂಗ್ ಸೌಲಭ್ಯ ಹೊಂದಿದೆ. 64 ಎಂಪಿ ತ್ರಿವಳಿ ಹಿಂಬದಿ ಕ್ಯಾಮೆರಾ ಹೊಂದಿದೆ.

3. ರೆಡ್ಮಿ ನೋಟ್ 10 ಪ್ರೋ ಮ್ಯಾಕ್ಸ್: 19,999 ಮೇಲ್ಪಟ್ಟ ರೆಡ್ಮಿ ನೋಟ್ 10 ಪ್ರೋ ಮ್ಯಾಕ್ಸ್ ಶಿಯೋಮಿಯ ಉತ್ಪನ್ನವಾಗಿದ್ದು, 6.67 ಇಂಚು ಸೂಪರ್‌ ಅಮೋಲ್ಡ್‌ ಪರದೆ ಹೊಂದಿದೆ. ಕ್ವಾಲ್ಕಾಂ ಸ್ನಾಪ್‌ಡ್ರಾಗನ್ 732ಜಿ ಚಿಪ್‌ಸೆಟ್‌ ಜೊತೆಗೆ 8ಜಿಬಿ 128 ಜಿಬಿ ಸ್ಟೋರೇಜ್ ಹೊಂದಿದೆ. 5,020 ಎಂಎಎಚ್‌ ಬ್ಯಾಟರಿ ಹೊಂದಿರುವ ರೆಡ್ಮಿ ನೋಟ್ 10 ಪ್ರೋ 33 ವ್ಯಾಟ್‌ ವೇಗದಲ್ಲಿ ಚಾರ್ಜ್ ಆಗಬಲ್ಲದು. 108 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹೊಂದಿರುವ ಈ ಸ್ಮಾರ್ಟ್‌ಫೋನ್‌ ನಾಲ್ಕು ಕ್ಯಾಮೆರಾಗಳನ್ನು ಹೊಂದಿವೆ.

4. ರಿಯಲ್ಮಿ ನಾರ್ಜ಼ೋ 30 ಪ್ರೋ: 15,999 ರೂಪಾಯಿ ಬೆಲೆಯ ಈ ಫೋನ್‌ 6.5 ಇಂಚು ಎಫ್‌ಎಚ್‌ಡಿ+ ಪರದೆ ಹೊಂದಿದ್ದು, ಮೀಡಿಯಾಟೆಕ್ ಡೈಮೆನ್ಸಿಟಿ 800ಯು 5ಜಿ ಪ್ರೊಸೆಸರ್‌ ಹೊಂದಿದೆ. 8ಜಿಬಿ ರ‍್ಯಾಮ್ ಜೊತೆಗೆ 128 ಜಿಬಿ ಆಂತರಿಕ ಸ್ಟೋರೇಜ್ ಹೊಂದಿರುವ ಈ ಫೋನ್, 48 ಮೆಗಾಪಿಕ್ಸೆಲ್ ಪ್ರೈಮರಿ ಶೂಟರ್‌ ಜೊತೆಗೆ ತ್ರಿವಳಿ ಕ್ಯಾಮೆರಾಗಳನ್ನು ಹೊಂದಿದೆ.

5. ಸ್ಯಾಮ್ಸಂಗ್ ಗ್ಯಾಲಾಕ್ಸಿ ಎಫ್‌62: 19,999 ರೂಪಾಯಿ ಬೆಲೆಯ ಈ ಫೋನ್‌‌ 6.6 ಇಂಚು ಸೂಪರ್‌ ಅಮೋಲ್ಡ್ ಪರದೆ ಹೊಂದಿದ್ದು, ಸ್ಯಾಮ್ಸಂಗ್ನ ಎಕ್ಸಿನೋಸ್ 9825 ಸೋಸಿ ಪ್ರೊಸೆಸರ್‌ ಜೊತೆಗೆ 6ಜಿಬಿ 128 ಜಿಬಿ ಆಂತರಿಕ ಸ್ಟೋರೇಜ್ ಹೊಂದಿದ್ದು, 1ಟಿಬಿ ವರೆಗೂ ವ್ಯಾಪಿಸಬಹುದಾಗಿದೆ. ರಿವರ್ಸ್ ಚಾರ್ಜಿಂಗ್‌ ಜೊತೆಗೆ 7000 ಎಂಎಎಚ್‌ ಬ್ಯಾಟರಿಯನ್ನೂ ಹೊಂದಿರುವ ಗ್ಯಾಲಾಕ್ಸಿ ಎಫ್‌62ಗೆ 64 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ.

6. ರಿಯಲ್ಮಿ 8 ಪ್ರೋ: 17,999 ರೂ. ಮೇಲ್ಪಟ್ಟ ಬೆಲೆಯ ಈ ಸ್ಮಾರ್ಟ್‌ಫೋನ್ 6.4 ಅಮೋಲ್ಡ್‌ ಪರದೆ ಹೊಂದಿದೆ. ಸ್ನಾಪ್‌ಡ್ರಾಗನ್ 720ಜಿ ಚಿಪ್‌ಸೆಟ್‌ ಜೊತೆಗೆ 8ಜಿಬಿ ರ‍್ಯಾಮ್‌ ಹಾಗು 128 ಜಿಬಿ ಆಂತರಿಕ ಸ್ಟೋರೇಜ್ ಹೊಂದಿದೆ. 4,500 ಎಂಎಎಚ್‌ ಬ್ಯಾಟರಿ ಇದ್ದು, 65 ವ್ಯಾಟ್‌ ವೇಗದಲ್ಲಿ ಚಾರ್ಜ್ ಆಗಬಲ್ಲದು. 108 ಮೆಗಾಪಿಕ್ಸೆಲ್ ಕ್ಯಾಮೆರಾ ಇರುವ ರಿಯಾಲ್ಮಿ ಪ್ರೋಗೆ ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾಗಳಿವೆ.

7. ಪೋಕೋ ಎಕ್ಸ್‌3: 16,999 ರೂಪಾಯಿ ಬೆಲೆಯ ಈ ಸ್ಮಾರ್ಟ್‌ಫೋನ್‌ 6.67 ಇಂಚು ಎಫ್‌ಎಚ್‌ಡಿ+ ಪರದೆ ಹೊಂದಿದೆ. ಕ್ವಾಲ್ಕಾಂ ಸ್ನಾಪ್‌ಡ್ರಾಗನ್‌ನ 732ಜಿ ಚಿಪ್‌ಸೆಟ್ ಜೊತೆಗೆ 8ಜಿಬಿ ರ‍್ಯಾಮ್ ಹಾಗೂ 128 ಜಿಬಿ ಆಂತರಿಕ ಸ್ಟೋರೇಜ್ ಹೊಂದಿರುವ ಈ ಫೋನ್‌ನಲ್ಲಿ 6,000 ಎಂಎಎಚ್‌ ಬ್ಯಾಟರಿ ಇದ್ದು, 33 ವ್ಯಾಟ್ ವೇಗದಲ್ಲಿ ಚಾರ್ಜ್ ಆಗಬಲ್ಲದು. 64 ಮೆಗಾಪಿಕ್ಸೆಲ್ ಕ್ವಾಡ್ ಕ್ಯಾಮೆರಾ ಈ ಫೋನ್‌ನ ಹಿಂಬದಿಯಲ್ಲಿದೆ.

8. ಸ್ಯಾಮ್ಸಂಗ್ ಗ್ಯಾಲಾಕ್ಸಿ ಎಂ31ಎಸ್: 19,499 ರೂಪಾಯಿ ಬೆಲೆ ಬಾಳುವ ಈ ಸ್ಮಾರ್ಟ್‌ಫೋನ್‌ 6.5 ಇಂಚು ಸೂಪರ್‌ ಅಮೋಲ್ಡ್ ಪರದೆ ಹೊಂದಿದೆ. ಸ್ಯಾಮ್ಸಂಗ್ ಎಕ್ಸಿನೋಸ್ 9611 ಚಿಪ್‌ಸೆಟ್‌ ಜೊತೆಗೆ 8ಜಿಬಿ-128 ಜಿಬಿ ಕಾನ್ಫಿಗರೇಷನ್‌ನ ಮೆಮೋರಿ ಹೊಂದಿರುವ ಈ ಫೋನ್‌ನಲ್ಲಿ 6000 ಎಂ‌ಎಎಚ್‌ ಬ್ಯಾಟರಿ ಇದ್ದು, 25 ವ್ಯಾಟ್ ವೇಗದಲ್ಲಿ ಚಾರ್ಜಿಂಗ್ ಆಗುತ್ತದೆ. ಸ್ಯಾಮ್ಸಂಗ್ ಗ್ಯಾಲಾಕ್ಸಿ ಎಂ31ಎಸ್‌ನಲ್ಲಿ 64 ಮೆಗಾಪಿಕ್ಸೆಲ್ ಪ್ರೈಮರಿ ಹಾಗೂ ಕ್ಯಾಡ್ ಕ್ಯಾಮೆರಾಗಳಿವೆ.

9. ರಿಯಲ್ಮಿ ಎಕ್ಸ್‌7: 18,999 ರೂಪಾಯಿ ಬೆಲೆ ಬಾಳುವ ಈ ಫೋನ್‌ 6.4 ಇಂಚು ಸೂಪರ್‌ ಅಮೋಲ್ಡ್ ಪರದೆ ಹೊಂದಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 800ಯು ಚಿಪ್‌ಸೆಟ್ ಹೊಂದಿರುವ ಈ ಫೋನ್‌ನಲ್ಲಿ 8ಜಿಬಿ-128ಜಿಬಿ ಮೆಮೋರಿ ಕಾನ್ಫಿಗರೇಷನ್ ಇದೆ. 4,310 ಎಂಎಎಚ್‌ ಬ್ಯಾಟರಿ ಹೊಂದಿರುವ ಈ ಫೋನ್‌ 65 ವ್ಯಾಟ್‌ ವೇಗದಲ್ಲಿ ಚಾರ್ಜಿಂಗ್‌‌ ಅನ್ನು ಬೆಂಬಲಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...