alex Certify ಭಾರತೀಯ ಸ್ಮಾರ್ಟ್​ಫೋನ್​ ಮಾರುಕಟ್ಟೆಯಲ್ಲಿ ಅತೀ ಬೇಡಿಕೆಯ ಮೊಬೈಲ್​ ಕಂಪನಿ ಯಾವುದು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯ ಸ್ಮಾರ್ಟ್​ಫೋನ್​ ಮಾರುಕಟ್ಟೆಯಲ್ಲಿ ಅತೀ ಬೇಡಿಕೆಯ ಮೊಬೈಲ್​ ಕಂಪನಿ ಯಾವುದು ಗೊತ್ತಾ….?

ಭಾರತೀಯ ಸ್ಮಾರ್ಟ್​ಫೋನ್​ ಮಾರುಕಟ್ಟೆಯಲ್ಲಿ ಮುಂಚೂಣಿ ಸ್ಥಾನವನ್ನ ಕಾಯ್ದುಕೊಳ್ಳುವಲ್ಲಿ ಚೀನಾ ಕಂಪನಿಗಳು ಎಂದಿಗೂ ವಿಫಲವಾಗೋದೇ ಇಲ್ಲ. 79 ಪ್ರತಿಶತ ಚೀನಾ ಮೊಬೈಲ್​ ಕಂಪನಿಗಳು ಭಾರತೀಯ ಮಾರುಕಟ್ಟೆಯಲ್ಲಿ ಭದ್ರವಾಗಿ ತಳವೂರಿವೆ. ಭಾರತದಲ್ಲಿ ವ್ಯಾಪಕವಾಗಿ ಮಾರಾಟವಾಗುವ ಟಾಪ್​ 10 ಸ್ಮಾರ್ಟ್​ ಫೋನ್​ಗಳಲ್ಲಿ 8 ಮೊಬೈಲ್​ಗಳು ಚೀನಾ ಕಂಪನಿಯಿಂದ ಬಂದಿವೆ.

ಕೌಂಟರ್​ಪಾಯಿಂಟ್ಸ್​​ ನೀಡಿರುವ ಇತ್ತೀಚಿನ ವರದಿಯ ಪ್ರಕಾರ ಕ್ಸಿಯೋಮಿ ಕಂಪನಿಯು ಭಾರತದ ಸ್ಮಾರ್ಟ್​ಪೋನ್ ಮಾರುಕಟ್ಟೆಯಲ್ಲಿ ಮೊದಲ ಸ್ಥಾನವನ್ನು ಪಡೆದಿದೆ. ಇದಾದ ಬಳಿಕ ದಕ್ಷಿಣ ಕೋರಿಯಾದ ಸ್ಯಾಮಸಂಗ್​ ಎರಡನೇ ಸ್ಥಾನದಲ್ಲಿದೆ.

ಚೀನಾದ ಕ್ಸಿಯೋಮಿ ಕಂಪನಿಯು ಭಾರತದ ಸ್ಮಾರ್ಟ್​ಫೋನ್​ ಮಾರುಕಟ್ಟೆಯಲ್ಲಿ 28.4 ಪ್ರತಿಶತ ಪಾಲನ್ನು ಹೊಂದಿದೆ. ಇದಾದ ಬಳಿಕ ಸ್ಯಾಮಸಂಗ್​ ಕಂಪನಿ 17.7 ಪ್ರತಿಶತ, ವೀವೋ 15.1 ಪ್ರತಿಶತ ಹಾಗೂ ರಿಯಲ್​ ಮೀ 14.6 ಪ್ರತಿಶಯ ಮತ್ತು ಒಪ್ಪೋ ಕಂಪನಿಯು 10.4 ಪ್ರತಿಶತ ಮಾರ್ಕೆಟ್​ ಶೇರ್​ ಹೊಂದಿವೆ.

ಇನ್ನು 5ಜಿ ಸ್ಮಾರ್ಟ್​ಫೋನ್​ಗಳ ಬಗ್ಗೆ ಮಾತನಾಡೋದಾದ್ರೆ, ಇಂತಹ ಫೋನ್​ಗಳಿಗೆ ಭಾರತದಲ್ಲಿ ಗಣನೀಯ ಪ್ರಮಾಣದಲ್ಲಿ ಬೇಡಿಕೆ ಕೇಳಿ ಬರ್ತಿದೆ. ಈ ವಿಭಾಗದಲ್ಲಿ ರಿಯಲ್​ ಮಿ ಕಂಪನಿ ಮೊದಲ ಸ್ಥಾನವನ್ನ ಸಂಪಾದಿಸಿದೆ. ಇದಾದ ಬಳಿಕ ವನ್​ ಪ್ಲಸ್​ ಕಂಪನಿ 2ನೇ ಸ್ಥಾನದಲ್ಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...