ಪೊಲೀಸರ ಬಳಿ ಸೀಜ್ ಆದ ಕಾರನ್ನು ಖರೀದಿ ಮಾಡಲು ಹೋಗಿ ಬೆಂಗಳೂರಿನ ವ್ಯಕ್ತಿಯೊಬ್ಬ 80 ಸಾವಿರ ರೂಪಾಯಿ ಪಂಗನಾಮ ಹಾಕಿಸಿಕೊಂಡಿದ್ದಾರೆ.
ಈ ರೀತಿ ಮೋಸ ಹೋದ ವ್ಯಕ್ತಿಯನ್ನು ನಾಗರಾಜು ವೈ ಎಂದು ಗುರುತಿಸಲಾಗಿದೆ. ಇವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
BIG NEWS: ರೇವ್ ಪಾರ್ಟಿ ಮೇಲೆ ರೇಡ್, ಸೂಪರ್ ಸ್ಟಾರ್ ಪುತ್ರ ಅರೆಸ್ಟ್ –ಡ್ರಗ್ಸ್ ವಶಕ್ಕೆ
ಕೆಲ ತಿಂಗಳ ಹಿಂದೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಪೆಟ್ರೋಲ್ ಬಂಕ್ನ ಸಮೀಪ ಅಪರಿಚಿತ ವ್ಯಕ್ತಿಯನ್ನು ಭೇಟಿಯಾಗಿದ್ದರು. ಆ ವ್ಯಕ್ತಿಯು ತನ್ನನ್ನು ತಾನು ಪೊಲೀಸ್ ಎಂದು ಪರಿಚಯಿಸಿಕೊಂಡು ನಾಗರಾಜು ಬಳಿ ವಾಹನದ ದಾಖಲೆಯನ್ನು ಕೇಳಿದ್ದಾರೆ.
ನಕಲಿ ಪೊಲೀಸ್ ಅಧಿಕಾರಿಯು ತನ್ನನ್ನು ತಾನು ಹರೀಶ್ ಎಂದು ಪರಿಚಯ ಮಾಡಿಕೊಂಡಿದ್ದ. ಇಬ್ಬರೂ ಫೋನ್ ನಂಬರ್ ಎಕ್ಸ್ಚೇಂಜ್ ಮಾಡಿಕೊಂಡಿದ್ದರು.
ಸಂತೋಷದ ಜೀವನ ನಡೆಸಬೇಕೆಂದ್ರೆ ಈ ಕೆಲಸ ಮಾಡುವ ಮೊದಲು 100 ಬಾರಿ ಯೋಚಿಸಿ…..!
ಹರೀಶ್ನ ಕೆಟ್ಟ ಉದ್ದೇಶದ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ನಾಗರಾಜು ಈ ವ್ಯಕ್ತಿಯನ್ನು ಹರಳೂರಿನಲ್ಲಿ ಭೇಟಿಯಾಗಿದ್ದರು. ಅಲ್ಲದೇ ತನಗೆ ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡುವ ಆಸೆಯಿದೆ ಎಂದೂ ಹೇಳಿಕೊಂಡಿದ್ದರು. ಮೊದಲೇ ಪೊಲೀಸ್ ಎಂದು ಗುರುತಿಸಿಕೊಂಡಿದ್ದ ಹರೀಶ್ 80 ಸಾವಿರ ರೂಪಾಯಿಗೆ ಸೀಜ್ ಮಾಡಿರುವ ಕಾರನ್ನು ಖರೀದಿಸಿಕೊಡುವುದಾಗಿ ಹೇಳಿದ್ದಾರೆ.
ಹೇಗೋ ಸೆಕೆಂಡ್ ಹ್ಯಾಂಡ್ ಕಾರು ಸಿಗುತ್ತೆ ಎಂಬ ಖುಷಿಯಲ್ಲಿದ್ದ ನಾಗರಾಜು, ಹರೀಶ್ನನ್ನು ನಂಬಿ 80 ಸಾವಿರ ರೂಪಾಯಿ ನೀಡಿದ್ದಾರೆ. ಬಳಿಕ ಕ್ವಾರ್ಟರ್ಸ್ನ ಸಮೀಪ ಕಾರು ಪಾರ್ಕ್ ಆಗಿದೆ ಎಂದು ಹರೀಶ್ ಹೇಳಿದ್ದಾರೆ.
ಗಾಂಧಿ ಪ್ರತಿಮೆ ಬಳಿ ಬಿಕ್ಕಿ ಬಿಕ್ಕಿ ಅತ್ತ SP ನಾಯಕ: ವಿಡಿಯೋ ವೈರಲ್
ಇದನ್ನು ನಂಬಿ ನಾಗರಾಜು ಸ್ಥಳಕ್ಕೆ ತೆರಳಿದ್ದರೆ ಅಲ್ಲಿ ಕಾರು ಇರಲೇ ಇಲ್ಲ. ನಾಗರಾಜು, ಹರೀಶ್ಗೆ ಕರೆ ಮಾಡುವಷ್ಟರಲ್ಲಿ ಆತ ಸಂಪರ್ಕಕ್ಕೆ ಸಿಗಲಿಲ್ಲ. ಈ ಸಂಬಂಧ ನಾಗರಾಜು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.