alex Certify ಸಿನಿಮಾದಿಂದ ಪ್ರೇರಣೆ ಪಡೆದು ದುಷ್ಕರ್ಮಿಗಳಿಂದ ರೈಲಿನಲ್ಲಿ ದರೋಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿನಿಮಾದಿಂದ ಪ್ರೇರಣೆ ಪಡೆದು ದುಷ್ಕರ್ಮಿಗಳಿಂದ ರೈಲಿನಲ್ಲಿ ದರೋಡೆ

ಸಿನಿಮಾದಿಂದ ಪ್ರೇರಿತರಾದ ಇಬ್ಬರು ದುಷ್ಕರ್ಮಿಗಳು ನಕಲಿ ಗನ್​​ ಬಳಸಿ ರೈಲಿನಲ್ಲಿ ಪ್ರಯಾಣಿಕರ ಬಳಿ ದರೋಡೆ ಮಾಡಿದ್ದಾರೆ. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಬೆಂಗಳೂರು ನಗರ ರೈಲ್ವೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಬಿಹಾರದ ರವಿ ಸಿಂಗ್​ ಹಾಗೂ ಉತ್ತರ ಪ್ರದೇಶ ಮೂಲದ ಸಂದೀಪ್​ ಎಂದು ಗುರುತಿಸಲಾಗಿದೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಸಿಂಗ್​ ದಶಕಗಳಿಂದಲೂ ಬೆಂಗಳೂರಿನಲ್ಲಿಯೇ ವಾಸವಿದ್ದ. ಹೀಗಾಗಿ ಈತನಿಗೆ ನಿರರ್ಗಳವಾಗಿ ಕನ್ನಡ ಮಾತನಾಡಲು ಬರುತ್ತಿತ್ತು ಎಂದು ತಿಳಿದು ಬಂದಿದೆ.

ಸಿಂಗ್​ ದರೋಡೆ ದೃಶ್ಯವನ್ನು ಹೊಂದಿದ್ದ ಸಿನಿಮಾವನ್ನು ನೋಡಿ ಪ್ರೇರಣೆ ಪಡೆದುಕೊಂಡಿದ್ದ. ಹೀಗಾಗಿ ನಕಲಿ ಪಿಸ್ತೂಲ್​ ಹಿಡಿದು ರೈಲು ಏರಿ ದುಷ್ಕರ್ಮಿಗಳು ಮಹಿಳೆಯರನ್ನೇ ಟಾರ್ಗೆಟ್​ ಮಾಡುವ ಪ್ಲಾನ್​ ಮಾಡಿದ್ದರು.

ಅದರಂತೆಯೇ ರಾತ್ರಿ ರೈಲ್ವೆ ಕ್ರಾಸಿಂಗ್​ನಲ್ಲಿ ನಿಂತಿದ್ದ ರೈಲನ್ನು ಏರಿ ಪ್ರಯಾಣಿಕರಿಂದ ಹಣ, ಚಿನ್ನ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕಸಿದುಕೊಂಡಿದ್ದಾರೆ. ನಕಲಿ ಪಿಸ್ತೂಲ್​ ಹಿಡಿದೇ ಇವರು ಪ್ರಯಾಣಿಕರನ್ನು ಬೆದರಿಸಿದ್ದರು ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...