alex Certify BREAKING: ಎರಡೇ ದಿನದಲ್ಲಿ ಐಟಿ ಮತ್ತೊಂದು ಭರ್ಜರಿ ಬೇಟೆ: ಬಿಲ್ಡರ್ ಮನೆಯಲ್ಲಿ ಮಾಜಿ ಶಾಸಕನಿಗೆ ಸೇರಿದ 40 ಕೋಟಿ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಎರಡೇ ದಿನದಲ್ಲಿ ಐಟಿ ಮತ್ತೊಂದು ಭರ್ಜರಿ ಬೇಟೆ: ಬಿಲ್ಡರ್ ಮನೆಯಲ್ಲಿ ಮಾಜಿ ಶಾಸಕನಿಗೆ ಸೇರಿದ 40 ಕೋಟಿ ಪತ್ತೆ

ಬೆಂಗಳೂರು: ಗುತ್ತಿಗೆದಾರ ಅಂಬಿಕಾಪತಿ ಮನೆಯಲ್ಲಿ 42 ಕೋಟಿ ನಗದು ಪತ್ತೆ ಮಾಡಿದ್ದ ಐಟಿ ಅಧಿಕಾರಿಗಳು ಎರಡೇ ದಿನದಲ್ಲಿ ಮತ್ತೊಂದು ಭರ್ಜರಿ ಬೇಟೆಯಾಡಿದ್ದಾರೆ.

ಎರಡೇ ದಿನದಲ್ಲಿ ಐಟಿ ಅಧಿಕಾರಿಗಳು ಮತ್ತೊಂದು ಮೆಗಾ ಆಪರೇಷನ್ ಮಾಡಿದ್ದಾರೆ. ಗುತ್ತಿಗೆದಾರನ ಮನೆಯಲ್ಲಿ 40 ಕೋಟಿ ನಗದು ಪತ್ತೆಯಾದ ನಂತರ ಈಗ ಬಿಲ್ಡರ್ ಸಂತೋಷ್ ಮನೆಯಲ್ಲಿ ದಾಳಿ ಮಾಡಿ 40 ಕೋಟಿ ನಗದು ಪತ್ತೆ ಮಾಡಲಾಗಿದೆ.

ಈ ಮೂಲಕ ಬೆಂಗಳೂರಿನಲ್ಲಿ ಮತ್ತೊಂದು ಭರ್ಜರಿ ಬೇಟೆ ನಡೆಸಲಾಗಿದೆ. ರಾಜಾಜಿನಗರ ಕೇತಮಾರನಹಳ್ಳಿ ಅಪಾರ್ಟ್ ಮೆಂಟ್ ನಲ್ಲಿರುವ ಫ್ಲ್ಯಾಟ್ ನಲ್ಲಿ 40 ಕೋಟಿ ರೂ. ಪತ್ತೆಯಾಗಿದೆ. ಬಿಲ್ಡರ್ ಸಂತೋಷ್ ಮನೆಯಲ್ಲಿ 40 ಕೋಟಿ ರೂ. ಪತ್ತೆಯಾಗಿದ್ದು, ಇದು ವಿಧಾನ ಪರಿಷತ್ ಮಾಜಿ ಸದಸ್ಯರೊಬ್ಬರಿಗೆ ಸೇರಿದ ಹಣ ಎನ್ನಲಾಗಿದೆ. ಐಟಿ ಅಧಿಕಾರಿಗಳು ಉದ್ಯಮಿ ಸಂತೋಷ್ ವಿಚಾರಣೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...