alex Certify ಮಹಾಮಳೆಗೆ ಮೊದಲೇ ತತ್ತರಿಸಿದ್ದ ಬೆಂಗಳೂರು ಜನತೆಗೆ ಮತ್ತೆ ಬಿಗ್ ಶಾಕ್: ಮುಂದಿನ 12 ಗಂಟೆ ಭಾರಿ ಮಳೆ ಮುನ್ಸೂಚನೆ; ಯೆಲ್ಲೋ ಅಲರ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಾಮಳೆಗೆ ಮೊದಲೇ ತತ್ತರಿಸಿದ್ದ ಬೆಂಗಳೂರು ಜನತೆಗೆ ಮತ್ತೆ ಬಿಗ್ ಶಾಕ್: ಮುಂದಿನ 12 ಗಂಟೆ ಭಾರಿ ಮಳೆ ಮುನ್ಸೂಚನೆ; ಯೆಲ್ಲೋ ಅಲರ್ಟ್

ಬೆಂಗಳೂರು: ಭಾರಿ ಮಳೆಯಿಂದ ಮೊದಲೇ ತತ್ತರಿಸಿ ಹೋಗಿರುವ ಬೆಂಗಳೂರಿನ ಜನತೆಗೆ ಮತ್ತೆ ಮಳೆರಾಯ ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ.  ಈಗಾಗಲೇ ಅನೇಕ ಬಡಾವಣೆಗಳಲ್ಲಿ ಮನೆ, ಮಳಿಗೆಗಳು ಜಲಾವೃತಗೊಂಡು, ನೀರಿನಲ್ಲಿ ಮುಳುಗಡೆಯಾಗಿವೆ. ರಸ್ತೆಗಳಲ್ಲಿಯೂ ನೀರು ನಿಂತು ವಾಹನ ಸವಾರರು ಪರದಾಡುವಂತಾಗಿದೆ. ಹೀಗಿರುವಾಗಲೇ ಮತ್ತೆ ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ.

ನಾಳೆಯವರೆಗೂ ಬೆಂಗಳೂರು ನಗರದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನ 8 ವಲಯಗಳಲ್ಲೂ ಭಾರಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ 12 ಗಂಟೆಗಳ ಅವಧಿಯಲ್ಲಿ ಬೆಂಗಳೂರಿನಲ್ಲಿ ಭಾರಿ ಮಳೆಯಾಗಲಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದಿಂದ ಮಾಹಿತಿ ನೀಡಲಾಗಿದ್ದು, ನಾಳೆಯವರೆಗೂ ಬೆಂಗಳೂರಿನಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...