alex Certify ಫ್ಲೈಓವರ್ ನಲ್ಲಿ ಕಾರು ನಿಲ್ಲಿಸಿ ಹಾಸ್ಯ ನಟನ ಡಾನ್ಸ್: ವಿಡಿಯೋ ವೈರಲ್ ಬಳಿಕ ನೋಟಿಸ್ ನೀಡಿದ ಖಾಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫ್ಲೈಓವರ್ ನಲ್ಲಿ ಕಾರು ನಿಲ್ಲಿಸಿ ಹಾಸ್ಯ ನಟನ ಡಾನ್ಸ್: ವಿಡಿಯೋ ವೈರಲ್ ಬಳಿಕ ನೋಟಿಸ್ ನೀಡಿದ ಖಾಕಿ

ಇಂದೋರ್‌ನಲ್ಲಿ ಇನ್‌ಸ್ಟಾಗ್ರಾಮ್ ಪ್ರಭಾವಶಾಲಿಯೊಬ್ಬರು ರಸ್ತೆಯಲ್ಲಿ ನೃತ್ಯ ಮಾಡಲು ಹೋಗಿ ತೊಂದರೆಗೆ ಸಿಲುಕಿದ ನಂತರ, ಕೋಲ್ಕತ್ತಾದಲ್ಲಿ ಇದೇ ರೀತಿಯ ಘಟನೆ ಬೆಳಕಿಗೆ ಬಂದಿದೆ. ಆದರೆ ಈ ಬಾರಿ, ಬಂಗಾಳಿ ಸಾಮಾಜಿಕ ಕಾರ್ಯಕರ್ತ, ಹಾಸ್ಯ ನಟರೊಬ್ಬರು ಫ್ಲೈಓವರ್ ನಲ್ಲಿ ಸ್ಟೆಪ್ಸ್ ಹಾಕಿದ್ದಾರೆ.

ಸೆಪ್ಟೆಂಬರ್ 13 ರಂದು ಸ್ಯಾಂಡಿ ಸಹಾ ಫ್ಲೈಓವರ್ ನಲ್ಲಿ ಪ್ರಯಾಣಿಸುತ್ತಿದ್ದಾಗ, ಕಾರು ನಿಲ್ಲಿಸಿ ನೃತ್ಯ ಮಾಡಿದ್ದಾರೆ. ‘ಮೈನ್ ಆಯಿ ಹನ್ ಯುಪಿ ಬಿಹಾರ್ ಲುಟ್ನೆ’ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಮಾತ್ರವಲ್ಲ, ಆತ ಹಲವಾರು ಬಾರಿ ಬಿಡುವಿಲ್ಲದ ರಸ್ತೆಯನ್ನು ದಾಟುತ್ತಿರುವುದನ್ನು ಸಹ ವಿಡಿಯೋದಲ್ಲಿ ಕಾಣಬಹುದು.

30 ವರ್ಷಗಳ ಕಾಲ ತಲೆ ಮರೆಸಿಕೊಂಡಿದ್ದ ಮೋಸ್ಟ್ ವಾಂಟೆಡ್ ಅಪರಾಧಿ ಮಾಡಿದ್ದೇನು ಗೊತ್ತಾ….?

ಸ್ಯಾಂಡಿ ಅವರು ಯೂಟ್ಯೂಬ್ ಚಾನೆಲ್ ಅನ್ನು ಹೊಂದಿದ್ದು, ಈ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಭಾರಿ ವೈರಲ್ ಆಗಿದ್ದು, ಕೆಲವು ಬಳಕೆದಾರರು ಅವರ ವಿಡಿಯೋವನ್ನು ಮೆಚ್ಚಿಕೊಂಡರೆ, ಇನ್ನು ಕೆಲವರು ಈ ವಿಷಯವನ್ನು ಪೊಲೀಸರ ಗಮನಕ್ಕೆ ತರಲು ಕೋಲ್ಕತಾ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ.

ಸದ್ಯ, ಪೊಲೀಸರು ಸ್ಯಾಂಡಿ ಅವರಿಗೆ ನೋಟಿಸ್ ಕಳುಹಿಸಿದ್ದಾರೆ. ಅಲ್ಲದೆ ಸ್ಯಾಂಡಿಯ ಕಾರು ಚಾಲಕನ ವಿರುದ್ಧ ಫ್ಲೈಓವರ್ ಮೇಲೆ ಕಾರು ನಿಲ್ಲಿಸಿದ್ದಕ್ಕಾಗಿ ಕ್ರಮ ಕೈಗೊಂಡಿದ್ದಾರೆ. ಈ ಮಧ್ಯೆ, ಫ್ಲೈಓವರ್ ಮೇಲೆ ಕಾರುಗಳನ್ನು ನಿಲ್ಲಿಸುವುದನ್ನು ನಿಷೇಧಿಸಲಾಗಿದೆ ಎಂಬುದು ತನಗೆ ಗೊತ್ತಿಲ್ಲ ಎಂದು ಸ್ಯಾಂಡಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...