alex Certify ಖ್ಯಾತ ನಟನ ಸೇರ್ಪಡೆಯಿಂದ ಹೈವೋಲ್ಟೇಜ್ ಬಂಗಾಳದಲ್ಲಿ ಬಿಜೆಪಿಗೆ ಹೆಚ್ಚಿದ ಬಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖ್ಯಾತ ನಟನ ಸೇರ್ಪಡೆಯಿಂದ ಹೈವೋಲ್ಟೇಜ್ ಬಂಗಾಳದಲ್ಲಿ ಬಿಜೆಪಿಗೆ ಹೆಚ್ಚಿದ ಬಲ

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಕಣ ರಂಗೇರಿದೆ. ಖ್ಯಾತ ನಟ ಮಿಥುನ್ ಚಕ್ರವರ್ತಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಎರಡು ದಿನಗಳ ಕಾಲ ಪಶ್ಚಿಮ ಬಂಗಾಳದಲ್ಲಿ ಪ್ರವಾಸ ಕೊಲ್ಕತ್ತಾದಲ್ಲಿ ಪ್ರಧಾನಿ ಮೋದಿ ಅವರ ರ್ಯಾಲಿ ವೇಳೆ ನಟ ಮಿಥುನ್ ಚಕ್ರವರ್ತಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಅವರನ್ನು ನಿನ್ನೆ ಭೇಟಿಯಾಗಿ ಚರ್ಚಿಸಿದ್ದ ಚಕ್ರವರ್ತಿ ಇಂದು ಬಿಜೆಪಿಗೆ ಸೇರಿದ್ದಾರೆ. ಟಿಎಂಸಿ ಮಾಜಿ ಸಂಸದರಾಗಿದ್ದ ಅವರು 2016ರಲ್ಲಿ ಪಕ್ಷ ತ್ಯಜಿಸಿದ್ದರು. ಪಶ್ಚಿಮ ಬಂಗಾಳದಲ್ಲಿ ಜನಪ್ರಿಯರಾಗಿರುವ ಮಿಥುನ್ ಚಕ್ರವರ್ತಿ ಅವರನ್ನು ಬಿಜೆಪಿ ಸೆಳೆದಿದೆ. ಮಮತಾ ಬ್ಯಾನರ್ಜಿ ಎದುರು ಫೇಸ್ ವ್ಯಾಲ್ಯೂ ಇರುವ ನಾಯಕನ ಹುಡುಕಾಟದಲ್ಲಿರುವ ಬಿಜೆಪಿ ಸುವೆಂದು ಅಧಿಕಾರಿ ಸೇರಿದಂತೆ ಹಲವು ಘಟಾನುಘಟಿ ನಾಯಕರನ್ನು ಟಿಎಂಸಿಯಿಂದ ಸೆಳೆದುಕೊಂಡಿದೆ. ಈಗ ಮಿಥುನ್ ಚಕ್ರವರ್ತಿ ಸೇರ್ಪಡೆ ಪಕ್ಷಕ್ಕೆ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...