alex Certify BIG NEWS: ಡಿಸೆಂಬರ್ ಮೊದಲ ವಾರದಲ್ಲಿ ಬೆಳಗಾವಿಯಲ್ಲಿ ಅಧಿವೇಶನ; ಅಧಿಕೃತ ದಿನಾಂಕ ಸಿಎಂ ಘೋಷಣೆ ಮಾಡ್ತಾರೆ ಎಂದ ಪರಿಷತ್ ಸಭಾಪತಿ ಹೊರಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಡಿಸೆಂಬರ್ ಮೊದಲ ವಾರದಲ್ಲಿ ಬೆಳಗಾವಿಯಲ್ಲಿ ಅಧಿವೇಶನ; ಅಧಿಕೃತ ದಿನಾಂಕ ಸಿಎಂ ಘೋಷಣೆ ಮಾಡ್ತಾರೆ ಎಂದ ಪರಿಷತ್ ಸಭಾಪತಿ ಹೊರಟ್ಟಿ

ಬೆಳಗಾವಿ: ಡಿಸೆಂಬರ್ ಮೊದಲ ವಾರದಲ್ಲಿ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ಆರಂಭವಾಗಲಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ್ ಹೊರಟ್ಟಿ, ಡಿಸೆಂಬರ್ ಮೊದಲ ವಾರದಿಂದ ಅಧಿವೇಶನ ಶುರುವಾಗಲಿದೆ. ಅನೌಪಚಾರಿಕವಾಗಿ ಡಿಸೆಂಬರ್ 4ರಿಂದ ಅಧಿವೇಶನ ನಡೆಯಲಿದೆ ಎಂಬ ಮಾಹಿತಿಯಿದೆ. ಆದರೆ ಸರ್ಕಾರದಿಂದ ನಮಗೆ ಅಧಿಕೃತವಾಗಿ ದಿನಾಂಕ ತಿಳಿಸಿಲ್ಲ ಎಂದರು.

ಅಧಿಕೃತವಾಗಿ ದಿನಾಂಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡುತ್ತಾರೆ. ಅಧಿವೇಶನ ಅರ್ಥಪೂರ್ಣವಾಗಬೇಕು. ಅಂದರೆ ಪ್ರತಿಭಟನೆಗಳು ಕಡಿಮೆಯಗಬೇಕು. ಬೆಳಗಾವಿ ಅಧಿವೇಶನ ಎಂದರೆ ಪ್ರತಿಭಟನೆ ಅಂತಾ ಆಗಿದೆ. ಹಾಗಾಗಬಾರದು. ಅಧಿವೇಶನದಲ್ಲಿ ಪ್ರಮುಖವಾಗಿ ರೈತರ ಸಮಸ್ಯೆ ನಿವಾರಣೆಗೆ ಸಂಬಂಧಿಸಿದಂತೆ ಚರ್ಚೆಗಳಾಗಬೇಕು. ಈ ಬಗ್ಗೆ ಸಚಿವರಿಗೂ ಹೇಳುತ್ತೇನೆ ಎಂದು ತಿಳಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...