alex Certify ಜಾರಕಿಹೊಳಿ, ಸವದಿ, ಆರ್.ಎಸ್.ಎಸ್. ನಾಯಕರ ಬಣಗಳ ಬಡಿದಾಟಕ್ಕೆ ಅಮಿತ್ ಶಾ ಬ್ರೇಕ್, ಹೆಚ್ಚು ಸ್ಥಾನ ಗೆಲ್ಲಲು ಟಾರ್ಗೆಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾರಕಿಹೊಳಿ, ಸವದಿ, ಆರ್.ಎಸ್.ಎಸ್. ನಾಯಕರ ಬಣಗಳ ಬಡಿದಾಟಕ್ಕೆ ಅಮಿತ್ ಶಾ ಬ್ರೇಕ್, ಹೆಚ್ಚು ಸ್ಥಾನ ಗೆಲ್ಲಲು ಟಾರ್ಗೆಟ್

ಬೆಳಗಾವಿ: ಇಂದು ಮಧ್ಯಾಹ್ನ ಬೆಳಗಾವಿಗೆ ಆಗಮಿಸಲಿರುವ ಕೇಂದ್ರ ಗೃಹ, ಸಹಕಾರ ಸಚಿವ ಅಮಿತ್ ಶಾ ಸರಣಿ ಸಭೆ ನಡೆಸಲಿದ್ದಾರೆ.

ಬೆಳಗಾವಿಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲಲು ರಣತಂತ್ರ ರೂಪಿಸಲಿದ್ದಾರೆ. ಈಗಾಗಲೇ ಜಿಲ್ಲೆಯ ರಾಜಕೀಯ ಸ್ಥಿತಿ ಗತಿ ಬಗ್ಗೆ ವರದಿ ಪಡೆದುಕೊಂಡಿರುವ ಅಮಿತ್ ಶಾ ಬೆಳಗಾವಿಯಲ್ಲಿ ಬಣ ಬಡಿದಾಟಕ್ಕೆ ಬ್ರೇಕ್ ಹಾಕಲಿದ್ದಾರೆ.

ಜಾರಕಿಹೊಳಿ ಬಣ, ಸವದಿ ಬಣ, ಆರ್.ಎಸ್.ಎಸ್. ನಾಯಕರ ಬಣಗಳಾಗಿರುವ ಹಿನ್ನೆಲೆಯಲ್ಲಿ ಎಲ್ಲರೊಂದಿಗೆ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಲು ಚರ್ಚೆ ನಡೆಸಲಿದ್ದಾರೆ. ಚುನಾವಣೆ ಘೋಷಣೆಗೂ ಮುನ್ನವೇ ಬಣಗಳ ಬಡಿದಾಟಕ್ಕೆ ಬ್ರೇಕ್ ಹಾಕಲಿದ್ದಾರೆ. ಸಂಜೆ 6 ಗಂಟೆಗೆ ಆರ್.ಎಸ್.ಎಸ್. ನಾಯಕರೊಂದಿಗೆ ಅವರು ಸಭೆ ನಡೆಸಲಿದ್ದು, ನಂತರ ಜಿಲ್ಲಾ ಮುಖಂಡರು, ಪದಾಧಿಕಾರಿಗಳೊಂದಿಗೆ ಸಭೆ ನಡೆಸುವರು. ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಅಮಿತ್ ಶಾ ಟಾರ್ಗೆಟ್ ನೀಡಲಿದ್ದಾರೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...