alex Certify ಚೀನಾದಲ್ಲಿ ಮತ್ತೆ ಕೊರೊನಾ ಆರ್ಭಟ…! ಮಾಲ್ ‘ಬಂದ್’ ಮಾಡಿಸಿದ ಅಧಿಕಾರಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚೀನಾದಲ್ಲಿ ಮತ್ತೆ ಕೊರೊನಾ ಆರ್ಭಟ…! ಮಾಲ್ ‘ಬಂದ್’ ಮಾಡಿಸಿದ ಅಧಿಕಾರಿಗಳು

ಮೊಟ್ಟಮೊದಲ ಬಾರಿಗೆ ಚೀನಾದ ವುಹಾನ್ ನಗರದಲ್ಲಿ ಕಾಣಿಸಿಕೊಂಡ ಕೊರೊನಾ ಮಹಾಮಾರಿ ಈಗ ಇಡೀ ವಿಶ್ವವನ್ನೇ ವ್ಯಾಪಿಸಿದೆ. ಈ ಮಾರಣಾಂತಿಕ ಸೋಂಕಿಗೆ ಈಗಾಗಲೇ ಜಗತ್ತಿನಾದ್ಯಂತ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಿದ್ದು, ಇದರ ಆರ್ಭಟ ಇನ್ನೂ ಮುಂದುವರೆಯುತ್ತಲೇ ಇದೆ.

ಫ್ರಾನ್ಸ್ ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಅಲ್ಲಿನ ಆರೋಗ್ಯ ಸಚಿವರೇ ದೇಶದಲ್ಲಿ 5ನೇ ಅಲೆ ಆರಂಭವಾಗಿದೆ ಎಂದು ಘೋಷಿಸಿದ್ದಾರೆ. ಬುಧವಾರ ಒಂದೇ ದಿನ ಫ್ರಾನ್ಸ್ ನಲ್ಲಿ 11 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.

ಶಿಕ್ಷಕಿಯರಿಗೆ ಶಿಶುಪಾಲನಾ ರಜೆ ನೀಡಲು ಆರ್ಥಿಕ ಇಲಾಖೆ ಗ್ರೀನ್ ಸಿಗ್ನಲ್

ಇದರ ಮಧ್ಯೆ ಕೊರೊನಾ ಉಗಮಸ್ಥಾನ ಚೀನಾದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಳವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ರಾಜಧಾನಿ ಬೀಜಿಂಗ್ ನಲ್ಲಿ ಮಾಲ್ ಗಳನ್ನು ಬಂದ್ ಮಾಡಿಸುತ್ತಿದ್ದಾರೆ. ಅಲ್ಲದೆ ಜನವಸತಿ ಹೆಚ್ಚು ಇರುವ ಕಡೆ ಲಾಕ್ಡೌನ್ ಸಹ ಜಾರಿಗೊಳಿಸಲಾಗುತ್ತಿದೆ. ಹೀಗಾಗಿ ಕೊರೊನಾ ಮತ್ತೆ ಆರ್ಭಟಿಸಲಿದೆಯಾ ಎಂಬ ಭೀತಿ ಎದುರಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...