ಈಗಿನ ಫ್ಯಾಶನ್​ ಯುಗದಲ್ಲಿ ಕೇವಲ ಮಹಿಳೆಯರು ಮಾತ್ರವಲ್ಲದೇ ಪುರುಷರು ಕೂಡ ತಮ್ಮ ಸೌಂದರ್ಯದ ಕಡೆಗೆ ಗಮನ ಕೊಡ್ತಾರೆ.

ಈಗಂತೂ ಗಡ್ಡಧಾರಿಗಳ ಸಂಖ್ಯೆಯೇ ಜಾಸ್ತಿ. ಗಡ್ಡವನ್ನ ಬಿಡೋದು ಫ್ಯಾಷನ್ ಆಗಿರೋದ್ರಿಂದ ಬಹುತೇಕ ಯುವಕರು ಈ ಸ್ಟೈಲ್​ನ್ನ ಅನುಸರಿಸ್ತಾರೆ.

ಆದರೆ ಈ ಗಡ್ಡದಲ್ಲೂ ಅನೇಕರಿಗೆ ಬ್ಯಾಕ್ಟಿರಿಯಾ ಸೋಂಕು ಉಂಟಾಗುತ್ತದೆ. ಇದರಿಂದ ಗಡ್ಡ ತುರಿಸೋಕೆ ಆರಂಭವಾಗುತ್ತೆ. ಹಾಗಾದ್ರೆ ಗಡ್ಡದ ಆರೋಗ್ಯ ಕಾಪಾಡೋಕೆ ಏನು ಮಾಡಬೇಕು ಅನ್ನೋದಕ್ಕೆ ಸಲಹೆ ಇಲ್ಲಿದೆ ನೋಡಿ.

ಪ್ರತಿದಿನ ಗಡ್ಡವನ್ನ ತೊಳೆದುಕೊಳ್ಳಿ : ಗಡ್ಡ ಕೂಡ ನಿಮ್ಮ ಮುಖದ್ದೇ ಒಂದು ಭಾಗ. ಗಡ್ಡವನ್ನ ನೀವು ಸ್ವಚ್ಛವಾಗಿ ಇಟ್ಟುಕ್ಕೊಂಡಿಲ್ಲ ಅಂದರೆ ಮುಖದಲ್ಲಿ ಎಣ್ಣೆಯ ಪ್ರಮಾಣ ಹೆಚ್ಚಾಗುತ್ತೆ. ಇದರಿಂದ ಬ್ಯಾಕ್ಟೀರಿಯಾ ಸೋಂಕು ಉಂಟಾಗುತ್ತೆ.

ಹೀಗಾಗಿ ದಿನಕ್ಕೆ ಒಂದರಿಂದ ಎರಡು ಬಾರಿ ಶಾಂಪೂವಿನಿಂದ ಮುಖ ತೊಳೆದುಕೊಳ್ಳಿ. ನೆನಪಿಡಿ. ತಲೆಕೂದಲಿನಿಗಿಂತ ಗಡ್ಡ ಭಿನ್ನವಾಗಿರುತ್ತೆ. ಹೀಗಾಗಿ ಗಡ್ಡಕ್ಕೆ ಬಳಕೆ ಮಾಡುವ ಶಾಂಪೂವನ್ನೇ ಬಳಸಿ.

ಕಂಡಿಷನರ್ ಬಳಸಿ :  ತಜ್ಞರು ಹೇಳುವ ಪ್ರಕಾರ. ಬರೀ ಗಡ್ಡವನ್ನ ತೊಳೆದರಷ್ಟೇ ಸಾಲದು. ಅದನ್ನ ಮಾಯ್​ಶ್ಚುರೈಸ್​ ಹಾಗೂ ಕಂಡಿಷನಿಂಗ್​ ಕೂಡ ಮಾಡಬೇಕು. ಹೀಗಾಗಿ ಒಳ್ಳೆಯ ಗುಣಮಟ್ಟದ ಬಿಯರ್ಡ್​ ಕಂಡಿಷನರ್​ಗಳನ್ನ ಬಳಸಿ. ಇಲ್ಲವಾದಲ್ಲಿ ಅಲೋವೇರಾ ಹಾಗೂ ಕೊಬ್ಬರಿ ಎಣ್ಣೆ ಕೂಡ ಬಳಕೆ ಮಾಡಬಹುದು.

ನಿಮಗೆ ಗಡ್ಡದಾರಿ ಲುಕ್​ ಇಷ್ಟವಾದರೂ ಸಹ ಆಗಾಗ್ಗೆ ಗಡ್ಡವನ್ನ ಟ್ರಿಮ್​ ಮಾಡೋದಕ್ಕೆ ಮರೆಯಬೇಡಿ.  ಅಲ್ಲದೇ ಗಡ್ಡವನ್ನ ಆಗಾಗೆ ಬಾಚುತ್ತಿರಿ.