
ಕೇರಳದ ಕರಾವಳಿ ಬಳಿ ಹುರಳಿಕಾಯಿ ಆಕಾರದ ದ್ವೀಪವೊಂದು ಇರುವುದು ಗೂಗಲ್ ಅರ್ತ್‌ನಲ್ಲಿ ಕಂಡು ಬಂದಿದ್ದು, ಇದರ ಸ್ಕ್ರೀನ್‌ಶಾಟ್ ಒಂದು ವೈರಲ್ ಆಗಿದೆ.
ಏನಿದು ಕ್ಲಬ್ ಹೌಸ್...? ಹೇಗೆ ವರ್ಕ್ ಆಗುತ್ತೆ ಈ ಅಪ್ಲಿಕೇಶನ್…? ಇಲ್ಲಿದೆ ಸಂಕ್ಷಿಪ್ತ ಮಾಹಿತಿ
ಈ ಹಿಂದೆ ಎಂದೂ ಸಹ ಕಾಣದ ಈ ದ್ವೀಪವು ಕೊಚ್ಚಿ ನಗರದ ವಿಸ್ತೀರ್ಣದಷ್ಟಿದೆ ಎನ್ನಲಾಗಿದೆ. ಗೂಗಲ್ ಅರ್ತ್ ಚಿತ್ರಗುಚ್ಛದಲ್ಲಿ ಈ ದ್ವೀಪ ಕಂಡರೂ ಭೌತಿಕವಾಗಿ ದ್ವೀಪ ಕಾಣಸಿಕ್ಕಿಲ್ಲ.
ಊರಿಗೆ ಹೊರಟವರು, ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್
ಫೇಸ್ಬುಕ್‌ನಲ್ಲಿ ಈ ಚಿತ್ರವನ್ನು ನೆಟ್ಟಿಗರೊಬ್ಬರು ಶೇರ್ ಮಾಡಿಕೊಂಡಿದ್ದು, ಇವರು ಪ್ರವಾಸೋದ್ಯಮ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ. ಇವರು ಹಾಕಿದ ಪೋಸ್ಟ್ ಫೇಸ್ಬುಕ್‌ನಲ್ಲಿ ವೈರಲ್ ಆದ ಬಳಿಕ ಕೇರಳ ಮೀನುಗಾರಿಕೆ ಹಾಗೂ ಸಾಗರಿಕ ಅಧ್ಯಯನ ವಿವಿಯ ಗಮನ ಸೆಳೆದಿದ್ದು, ಈ ಸಂಬಂಧ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
https://www.facebook.com/xavierjulappan.kalipparambil/posts/5607480982627813