alex Certify ಏನಿದು ಕ್ಲಬ್​ ಹೌಸ್.​..? ಹೇಗೆ ವರ್ಕ್​ ಆಗುತ್ತೆ ಈ ಅಪ್ಲಿಕೇಶನ್​…? ಇಲ್ಲಿದೆ ಸಂಕ್ಷಿಪ್ತ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏನಿದು ಕ್ಲಬ್​ ಹೌಸ್.​..? ಹೇಗೆ ವರ್ಕ್​ ಆಗುತ್ತೆ ಈ ಅಪ್ಲಿಕೇಶನ್​…? ಇಲ್ಲಿದೆ ಸಂಕ್ಷಿಪ್ತ ಮಾಹಿತಿ

ಹಿಂದೆಲ್ಲ ಹಳ್ಳಿಗಳಲ್ಲಿ ಊರ ನಾಗರಿಕರೆಲ್ಲ ಸೇರಿಕೊಂಡು ಕಟ್ಟೆ ಪಂಚಾಯ್ತಿಯನ್ನ ಮಾಡುತ್ತಿದ್ದರು. ಯಾವುದೋ ಒಂದು ವಿಷಯವನ್ನ ಹಿಡಿದುಕೊಂಡು ಅದರ ಬಗ್ಗೆ ತಮ್ಮ ಅಭಿಪ್ರಾಯಗಳನ್ನ ಹೊರಹಾಕುತ್ತಾ ಟೈಮ್​ ಪಾಸ್​ ಮಾಡ್ತಾ ಇದ್ದರು. ಇದೀಗ ಇಂತಹದ್ದೇ ಮಾದರಿಯಲ್ಲಿ ಕೆಲಸ ಮಾಡುತ್ತಿರುವ ಅಪ್ಲಿಕೇಶನ್​ ಒಂದು 1 ಮಿಲಿಯನ್​ ಡೌನ್​ಲೋಡ್​ ಕಾಣುವ ಮೂಲಕ ಭಾರೀ ಸುದ್ದಿಯಲ್ಲಿದೆ.

ಅಂದಹಾಗೆ ನಾವು ಹೇಳೋಕೆ ಹೊರಟಿರುವ ಈ ಅಪ್ಲಿಕೇಶನ್​ನ ಹೆಸರು ಕ್ಲಬ್​ ಹೌಸ್​..! ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ಕ್ಲಬ್​​ಹೌಸ್​ನದ್ದೇ ಹವಾ ಎಂಬಂತಾಗಿದೆ. ಇಲ್ಲಿಯವರೆಗೆ ನಿಮ್ಮ ಸೋಶಿಯಲ್​ ಮೀಡಿಯಾಗಳಲ್ಲಿ ಫೋಟೋಗಳನ್ನ ಪೋಸ್ಟ್​ ಮಾಡಿ ನಿಮ್ಮ ಭಾವನೆಗಳನ್ನ ಶೀರ್ಷಿಕೆ ಅಂದರೆ ಕ್ಯಾಪ್ಶನ್​ ಮೂಲಕ ಹೊರಹಾಕಲು ಅವಕಾಶವಿತ್ತು. ಆದರೆ ಈ ಕ್ಲಬ್​ ಹೌಸ್​ನಲ್ಲಿ ನೀವು ಆಡಿಯೋ ಸಂಭಾಷಣೆ ಮೂಲಕವೇ ಸಾರ್ವಜನಿಕರ ಜೊತೆ ಮಾತನಾಡಬಹುದಾಗಿದೆ. ಒಂದು ರೀತಿಯಲ್ಲಿ ಇದು ಟೆಲಿಫೋನ್​ ಸಂಭಾಷಣೆಯಂತೆಯೇ ಇರಲಿದೆ.

ಇದೊಂದು ಇನ್ವೈಟ್​ ಓನ್ಲಿ ಸೋಶಿಯಲ್​ ಮೀಡಿಯಾ ಅಪ್ಲಿಕೇಶನ್​ ಆಗಿರೋದ್ರಿಂದ ನೀವು ಈ ಅಪ್ಲಿಕೇಶನ್​ ಬಳಕೆ ಮಾಡಬೇಕು ಅಂದಾದಲ್ಲಿ ನಿಮ್ಮನ್ನ ಇನ್ನೊಬ್ಬರು ಇನ್ವೈಟ್​ ಮಾಡಬೇಕು. ಈ ಕ್ಲಬ್​ ಹೌಸ್​ನಲ್ಲಿ ನಿಮ್ಮದೇ ಆದ ಒಂದು ರೂಂ ರಚನೆ ಮಾಡಬಹುದು. ಯಾವುದೇ ವಿಚಾರಗಳ ಬಗ್ಗೆ ನೀವು ಆಡಿಯೋ ನೋಟ್​ಗಳನ್ನ ಹರಿಬಿಡಬಹುದು. ನಿಮಗಿಷ್ಟ ಬಂದಾಗ ನೀವು ಈ ರೂಮಿನಲ್ಲಿ ಇರಬಹುದು. ಅಥವಾ ಹೊರಗೆ ಹೋಗಲೂಬಹುದು.

ಒಂದು ವಿಚಾರದ ಬಗ್ಗೆ ಚರ್ಚೆ ಮುಗಿಯುತ್ತಿದ್ದಂತೆ ಹೇಗೆ ನೀವು ಕರೆಯನ್ನ ಕಟ್​ ಮಾಡುತ್ತಿದ್ದಿರೋ ಅದೇ ರೀತಿ ಈ ರೂಂ ಕೂಡ ಕ್ಲೋಸ್​ ಆಗಲಿದೆ. ಒಮ್ಮೆ ನೀವು ಆಡಿಯೋ ಚಾಟ್​ಗಳನ್ನ ಕೇಳಿದ ಬಳಕೆ ಅದು ಅಲ್ಲಿಂದ ಅಳಸಿ ಹೋಗೋದ್ರಿಂದ ನಿಮಗೆ ಇನ್ನೊಮ್ಮೆ ಆಡಿಯೋವನ್ನ ಕೇಳಲು ಸಾಧ್ಯವಿಲ್ಲ. ಹಾಗೂ ಕ್ಲಬ್​ ಹೌಸ್​ ಆಡಿಯೋವನ್ನ ರೆಕಾರ್ಡ್ ಮಾಡುವಂತಹ ಅಪ್ಲಿಕೇಶನ್​ ಇಲ್ಲಿಯವರೆಗೆ ಅಭಿವೃದ್ಧಿ ಆಗಿಲ್ಲ. ಏಕಾಂಗಿತನವನ್ನ ಅನುಭವಿಸ್ತಾ ಇರುವವರು ಇಲ್ಲಿ ಹೊಸ ಜನರನ್ನ ಭೇಟಿಯಾಗಬಹುದು. ಯಾವುದೇ ವಿಷಯಗಳ ಬಗ್ಗೆ ನಿಮ್ಮದೇ ಧ್ವನಿಯಲ್ಲಿ ಅಭಿಪ್ರಾಯವನ್ನ ಹೊರಹಾಕಬಹುದು.

ಇದು ಸಂಪೂರ್ಣ ಆಡಿಯೋ ಬೇಸ್ಡ್​ ಅಪ್ಲಿಕೇಶನ್​ ಆಗಿರೋದ್ರಿಂದ ನೀವು ಯಾವುದೇ ಫೋಟೋ ಹಾಗೂ ವಿಡಿಯೋಗಳನ್ನ ಶೇರ್​ ಮಾಡುವ ಅವಕಾಶ ಇರೋದಿಲ್ಲ. ಥೇಟ್​ ಪಂಚಾಯ್ತಿ ಕಟ್ಟೆಯ ಮಾತುಕತೆಯಂತೆಯೇ ನಿಮ್ಮ ಅಭಿಪ್ರಾಯವನ್ನ ಆಡಿಯೋದ ಮೂಲಕ ಹೊರಹಾಕಲು ಮಾತ್ರ ಅವಕಾಶ ಇರುತ್ತದೆ. ಎಲ್ಲಾ ಐಓಎಸ್​ ಹಾಗೂ ಆಂಡ್ರಾಯ್ಡ್​ ಫೋನ್​ಗಳಲ್ಲಿ ಈ ಅಪ್ಲಿಕೇಶನ್​ ಲಭ್ಯವಿದೆ.

ಈ ಕ್ಲಬ್​ ಹೌಸ್​ ಇನ್ವೈಸ್​ ಓನ್ಲಿ ಸೋಶಿಯಲ್​ ಮೀಡಿಯಾ ಅಪ್ಲಿಕೇಶನ್ ಆಗಿದ್ದರೂ ಸಹ ಈಗಾಗಲೇ ಸಾಕಷ್ಟು ನಕಲಿ ಪ್ರೊಫೈಲ್​ಗಳು ಈ ಕ್ಲಬ್​ಹೌಸ್​ನಲ್ಲಿ ಇದೆ. ಯುವಜನತೆ ಈ ಅಪ್ಲಿಕೇಶನ್​ಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ನಿಮ್ಮದೇ ಧ್ವನಿಯಲ್ಲಿ ನಿಮ್ಮ ಜೀವನದ ವೈಯಕ್ತಿಕ ಮಾಹಿತಿಗಳನ್ನ ಇಲ್ಲಿ ಹಂಚಿಕೊಂಡಲ್ಲಿ ಮುಂದೊಂದು ದಿನ ನಿಮ್ಮನ್ನೇ ಬ್ಲಾಕ್​ ಮೇಲ್​ ಮಾಡಲು ಸೈಬರ್​ ಕಳ್ಳರು ಇದನ್ನ ಬಳಕೆ ಮಾಡುವ ಸಾಧ್ಯತೆ ಕೂಡಾ ಇರುತ್ತದೆ. ಕ್ಲಬ್​ ಹೌಸ್​ನಲ್ಲಿ ಖಾತೆ ತೆರೆಯಲು ಕನಿಷ್ಟ ವಯೋಮಿತಿ ಅನ್ನೋದು ಇಲ್ಲವಾದ ಕಾರಣ ಮಕ್ಕಳಿಗೆ ಇದರಿಂದ ಹಾನಿ ಉಂಟಾಗುವ ಸಾಧ್ಯತೆ ಹೆಚ್ಚಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...