ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ಸೋಂಕು ಸಂಬಂಧಿ ಕಾಯಿಲೆಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಆಗ ನಿಮಗೆ ವೈದ್ಯರು ಆ್ಯಂಟಿ ಬಯಾಟಿಕ್ಸ್ ಮಾತ್ರೆಗಳನ್ನು ತೆಗೆದುಕೊಳ್ಳುವಂತೆ ಹೇಳುತ್ತಾರೆ. ಮೂರರಿಂದ ಐದು ದಿನಗಳ ತನಕ ಈ ಮಾತ್ರೆಗಳನ್ನು ಸೇವಿಸುವಾಗ ನೀವು ಈ ಕೆಲವು ಅಂಶಗಳಿಂದ ದೂರವಿರುವುದು ಒಳ್ಳೆಯದು.
ಆ್ಯಂಟಿ ಬಯಾಟಿಕ್ ಮಾತ್ರೆಗಳನ್ನು ತೆಗೆದುಕೊಳ್ಳುವಾಗ ನೀವು ಮದ್ಯಪಾನ ಮಾಡದಿರಿ. ಮಾತ್ರೆ ತೆಗೆದುಕೊಂಡ 48 ಗಂಟೆ ಒಳಗೆ ಮದ್ಯಪಾನ ಮಾಡಿದರೆ ನಿಮ್ಮಲ್ಲಿ ತಲೆನೋವು, ವಾಕರಿಕೆ ಅಥವಾ ವಾಂತಿ, ಹೊಟ್ಟೆನೋವಿನಂಥ ಲಕ್ಷಣಗಳು ಕಂಡು ಬಂದಾವು.
ಆ್ಯಂಟಿ ಬಯಾಟಿಕ್ ಮಾತ್ರೆಗಳನ್ನು ಹಾಲಿನೊಂದಿಗೆ ಸೇವಿಸದಿರಿ. ಮಜ್ಜಿಗೆ ಮೊಸರು ಈ ಸಮಯದಲ್ಲಿ ದೂರವಿಡುವುದೇ ಒಳ್ಳೆಯದು. ಈ ಮಾತ್ರೆ ತಿಂದ ಕನಿಷ್ಠ ಮೂರು ಗಂಟೆಗಳ ಕಾಲ ಡೈರಿ ಉತ್ಪನ್ನಗಳನ್ನು ಸೇವಿಸದೆ ಇರುವುದು ಒಳ್ಳೆಯದು.