alex Certify ʼಮಧುಮೇಹʼ ದ ಬಗ್ಗೆ ಇರುವ ಈ ತಪ್ಪು ಕಲ್ಪನೆ ಬಗ್ಗೆ ತಿಳಿಯಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮಧುಮೇಹʼ ದ ಬಗ್ಗೆ ಇರುವ ಈ ತಪ್ಪು ಕಲ್ಪನೆ ಬಗ್ಗೆ ತಿಳಿಯಿರಿ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಅವರ ಜೀವನಶೈಲಿಯೇ ಕಾರಣ ಎನ್ನಲಾಗಿದೆ. ಮಧುಮೇಹ ಸಮಸ್ಯೆಯ ಬಗ್ಗೆ ಕೆಲವರು ಕೆಲವು ಮಾಹಿತಿಗಳನ್ನು ನೀಡುತ್ತಾರೆ. ಆದರೆ ಈ ಮಾಹಿತಿಗಳಲ್ಲಿ ಎಲ್ಲವೂ ನಿಜವಲ್ಲ. ಎಲ್ಲಾ ಮಾಹಿತಿಗಳನ್ನು ನಂಬಲು ಹೋಗಬೇಡಿ. ಅಂತಹ ತಪ್ಪು ಕಲ್ಪನೆಗಳು ಯಾವುದೆಂಬುದನ್ನು ತಿಳಿದುಕೊಳ್ಳಿ.

*ಕೆಲವರು ಬಹಳಷ್ಟು ಸಕ್ಕರೆ ತಿಂದರೆ ಮಧುಮೇಹ ಸಮಸ್ಯೆ ಕಾಡುತ್ತದೆ ಎಂದು ಹೇಳುತ್ತಾರೆ. ಆದರೆ ಇದು ನಿಜವಲ್ಲ. ಮಧುಮೇಹ ಸಮಸ್ಯೆ ಅನಿಯಮಿತ ಊಟ, ನಿದ್ರೆಯ ಸಮಯ, ಎಣ್ಣೆಯುಕ್ತ ಆಹಾರ, ತೂಕ ಹೆಚ್ಚಳ, ವ್ಯಾಯಾಮದ ಕೊರತೆಯಿಂದಲೂ ಬರುತ್ತದೆ.

*ಮಧುಮೇಹ ಔಷಧವನ್ನು ಹೆಚ್ಚಾಗಿ ಸೇವಿಸಿದರೆ ಮೂತ್ರಪಿಂಡದ ಸಮಸ್ಯೆ ಉಂಟಾಗುತ್ತದೆ ಎಂದು ಹೇಳುತ್ತಾರೆ. ಆದರೆ ಇದು ಸುಳ್ಳು, ಮಧುಮೇಹ ಔಷಧ ಸೇವಿಸುವುದನ್ನು ತಪ್ಪಿಸಿದರೆ ಕಣ್ಣು, ಹೃದಯ, ನರ, ಲಿವರ್ ಗೆ ಹಾನಿಯಾಗುತ್ತದೆ.

*ಮಧುಮೇಹ ಹೆಚ್ಚಾದಾಗ ಮಾತ್ರೆಗಳಿಂದ ನಿಯಂತ್ರಿಸಲು ಸಾಧ್ಯವಾಗದೇ ಇದ್ದಾಗ ಇನ್ಸುಲಿನ್ ಇಂಜೆಕ್ಷನ್ ತೆಗೆದುಕೊಳ್ಳುವಂತೆ ಹೇಳುತ್ತಾರೆ. ಆದರೆ ಇದರಿಂದ ದೇಹಕ್ಕೆ ಹಾನಿಯಾಗುತ್ತದೆ ಎಂದು ಹೇಳುತ್ತಾರೆ. ಇದು ನಿಜವಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...