alex Certify ಬಿಜೆಪಿಯದ್ದು ತಾಲಿಬಾನ್​ ಆಡಳಿತ ಎಂದ ಸಿದ್ದರಾಮಯ್ಯಗೆ ಬಿ.ಸಿ. ಪಾಟೀಲ್​ ಟಾಂಗ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿಯದ್ದು ತಾಲಿಬಾನ್​ ಆಡಳಿತ ಎಂದ ಸಿದ್ದರಾಮಯ್ಯಗೆ ಬಿ.ಸಿ. ಪಾಟೀಲ್​ ಟಾಂಗ್​..!

ಬಿಜೆಪಿಯದ್ದು ತಾಲಿಬಾನ್​ ಮಾದರಿ ಆಡಳಿತ ಎಂದು ಹೇಳಿದ್ದ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಕೃಷಿ ಸಚಿವ ಬಿ.ಸಿ. ಪಾಟೀಲ್​ ತಿರುಗೇಟು ನೀಡಿದ್ದಾರೆ. ನಿಪ್ಪಾಣಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ತಾಲಿಬಾನ್​ ಸಂಸ್ಕೃತಿಯನ್ನು ಹೊಂದಿರುವವರೇ ಇನ್ನೊಬ್ಬರನ್ನು ತಾಲಿಬಾನ್​ ಎಂದು ಕರೆದರೆ ಅದಕ್ಕೆ ಅರ್ಥವಿರೋದಿಲ್ಲ ಎಂದು ಕುಟುಕಿದ್ದಾರೆ.

ಬಿಜೆಪಿಯದ್ದು ತಾಲಿಬಾನ್ ಸಂಸ್ಕೃತಿಯಲ್ಲ. ಕಾಂಗ್ರೆಸ್​ನವರದ್ದು ತಾಲಿಬಾನ್​ ಸಂಸ್ಕೃತಿ. ತಾಲಿಬಾನ್​ಗೆ ಬೆಂಬಲ ವ್ಯಕ್ತಪಡಿಸಿದ್ದು ಯಾರು..? ಪಾಕಿಸ್ತಾನಕ್ಕೆ ಬೆಂಬಲ ನೀಡಿದವರು ಯಾರು..? ಕಾಶ್ಮೀರದ ಪರವಾಗಿ ವಾದ ಮಾಡಿದ್ದು ಯಾರು..? ಎಂದು ಸಿದ್ದರಾಮಯ್ಯಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ. ರಾಷ್ಟ್ರೀಯ ವಾದವನ್ನು ಹಿಡಿದುಕೊಂಡು ಹೋಗ್ತಿದೆ. ಹೀಗಿರುವಾಗ ಸಿದ್ದರಾಮಯ್ಯ ಬಿಜೆಪಿಯನ್ನು ತಾಲಿಬಾನ್​ಗೆ ಹೋಲಿಕೆ ಮಾಡಿರುವುದು ಸರಿಯಲ್ಲ ಎಂದು ಬಿ.ಸಿ. ಪಾಟೀಲ್​ ಹೇಳಿದ್ರು.

ಸಿಂದಗಿ , ಹಾನಗಲ್​ ಉಪಚುನಾವಣೆ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಬಿ.ಸಿ. ಪಾಟೀಲ್​, ಈ ಎರಡೂ ಕ್ಷೇತ್ರದ ಉಪಚುನಾವಣೆಯನ್ನು ಚಾಲೆಂಜ್​ ಆಗಿ ಸ್ವೀಕಾರ ಮಾಡುತ್ತೇವೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಲಿದೆ. ನೂರಕ್ಕೆ ನೂರರಷ್ಟು ಬಿಜೆಪಿ ಅಭ್ಯರ್ಥಿಗಳೇ ಜಯ ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...