alex Certify ಥರಹೇವಾರಿ ಕಾಮೆಂಟುಗಳಿಗೆ ಕಾರಣವಾಗಿದೆ ನಿಗೂಢ ಬ್ಯಾನರ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಥರಹೇವಾರಿ ಕಾಮೆಂಟುಗಳಿಗೆ ಕಾರಣವಾಗಿದೆ ನಿಗೂಢ ಬ್ಯಾನರ್‌

Banner Saying 'I Am Sorry Tom' Surfaces In England; Netizens Want Closure

ಬ್ರಿಟನ್‌ನ ಎಸ್ಸೆಕ್ಸ್‌ನ ರೇಲ್ವೇ ವೀರ್‌ ಜಂಕ್ಷನ್‌ನಲ್ಲಿ ನಿಗೂಢವಾದ ಬ್ಯಾನರ್‌ ಒಂದು ಕಂಡುಬಂದಿದ್ದು, “ಐ ಆಮ್ ಸಾರಿ ಟಾಮ್. ದಯವಿಟ್ಟು ನನ್ನನ್ನು ಕ್ಷಮಿಸು” ಎಂದು ಬರೆಯಲಾಗಿದೆ.

ಯಾರು ಯಾರಿಗೆ ಕ್ಷಮೆ ಕೇಳುತ್ತಿದ್ದಾರೆ ಎಂದು ಬ್ಯಾನರ್‌ನಲ್ಲಿ ಸ್ಪಷ್ಟವಾಗಿಲ್ಲ. ಆದರೆ ಈ ಬ್ಯಾನರ್‌ ಅನ್ನು ಪ್ರಮುಖ ರಸ್ತೆಯೊಂದರಲ್ಲಿ ಹಾಕಿರುವ ಕಾರಣ ಸುಲಭವಾಗಿ ಕಣ್ಣಿಗೆ ಬೀಳುತ್ತಿದೆ.

ರೈಲ್ವೇ ಹಳಿಗೆ ಬಿದ್ದವನನ್ನು ರಕ್ಷಿಸಿದ ವ್ಯಕ್ತಿ: ಮೈ ಜುಮ್ಮೆನ್ನಿಸುವ ವಿಡಿಯೋ ವೈರಲ್

ಬ್ಯಾನರ್‌ನ ಫೋಟೋವೊಂದನ್ನು ಸೆರೆ ಹಿಡಿದ ಕ್ಲೇರ್‌ ಹಾರ್ವೆ ಹೆಸರಿನ ನೆಟ್ಟಿಗರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಪೋಸ್ಟ್‌ಗೆ ನೆಟ್ಟಿಗರಿಂದ ಥರಾವರಿ ಕಾಮೆಂಟುಗಳು ಬಂದಿದ್ದು, ಟಾಮ್ ಯಾರು ಮತ್ತು ಆತನಿಗೆ ಏಕೆ ಕ್ಷಮೆ ಕೇಳಲಾಗುತ್ತಿದೆ ಎಂಬೆಲ್ಲಾ ಪ್ರಶ್ನೆಗಳು ಬಂದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...