alex Certify ಐಸಿಸಿ ವಿಶ್ವಕಪ್​ ಟಿ 20ಯಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನ: ನಿರಾಶೆಗೊಂಡ ಅಭಿಮಾನಿಗಳಿಂದ #BanIPL ಟ್ರೆಂಡ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಸಿಸಿ ವಿಶ್ವಕಪ್​ ಟಿ 20ಯಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನ: ನಿರಾಶೆಗೊಂಡ ಅಭಿಮಾನಿಗಳಿಂದ #BanIPL ಟ್ರೆಂಡ್​

ಐಸಿಸಿ ವಿಶ್ವಕಪ್​ ಟಿ 20 ಪಂದ್ಯಾವಳಿಯಲ್ಲಿ ಪಾಕಿಸ್ತಾನದ ವಿರುದ್ಧ ಸೋತು ಅಭಿಮಾನಿಗಳಿಗೆ ಭಾರೀ ಬೇಸರವುಂಟು ಮಾಡಿದ್ದ ಟೀಂ ಇಂಡಿಯಾ ಇದೀಗ ಮತ್ತೊಮ್ಮೆ ಅಭಿಮಾನಿಗಳ ಮುಖದಲ್ಲಿ ನಿರಾಶೆ ಮೂಡಿಸಿದೆ. ನ್ಯೂಜಿಲೆಂಡ್​ ವಿರುದ್ಧದ ಪಂದ್ಯದಲ್ಲಿ 8 ವಿಕೆಟ್​ಗಳ ಅಂತರದಲ್ಲಿ ಹೀನಾಯ ಸೋಲನ್ನು ಕಾಣುವ ಮೂಲಕ ಸೆಮಿ ಫೈನಲ್ ಪಂದ್ಯದಿಂದ ಬಹುತೇಕ ಹೊರ ಬಿದ್ದಿದೆ.

ಟೀಂ ಇಂಡಿಯಾ ಮೇಲೆ ಭಾರೀ ವಿಶ್ವಾಸವನ್ನು ಇಟ್ಟುಕೊಂಡಿದ್ದ ಅಭಿಮಾನಿಗಳಿಗೆ ಈ ಎರಡು ಹೀನಾಯ ಸೋಲುಗಳು ಭಾರೀ ನಿರಾಶೆಯನ್ನುಂಟು ಮಾಡಿವೆ. ಐಪಿಎಲ್​ ಪಂದ್ಯಾವಳಿ ಮುಕ್ತಾಯಗೊಂಡ ಕೆಲವೇ ದಿನಗಳಲ್ಲಿ ಟಿ 20 ವರ್ಲ್ಡ್​ಕಪ್​ ಆರಂಭಗೊಂಡಿತ್ತು. ಯಾವುದೇ ರೀತಿಯ ಬ್ರೇಕ್​ ಪಡೆಯದ ಆಟಗಾರರು ಟಿ 20 ವರ್ಲ್ಡ್​​ ಕಪ್​ಗೆ ತೆರಳಿದ್ದರು. ಕೊಹ್ಲಿ ಪಡೆಯ ಸತತ ಸೋಲು ಕಂಡು ಕಂಗೆಟ್ಟಿರುವ ಅಭಿಮಾನಿಗಳು ಐಪಿಎಲ್​ ಬ್ಯಾನ್​ ಮಾಡಿ ಎಂದು ಟ್ವಿಟರ್​ನಲ್ಲಿ ಹೊಸ ಟ್ರೆಂಡ್​ ಶುರು ಮಾಡಿದ್ದಾರೆ.
ಹೌದು..! #BanIPL ಎಂಬ ಟ್ರೆಂಡ್​ ಟ್ವಿಟರ್​ನಲ್ಲಿ ಸದ್ಯ ಭಾರೀ ಸದ್ದು ಮಾಡ್ತಿದೆ. ಸೆಮಿಫೈನಲ್​ನಲ್ಲಿ ಸ್ಥಾನ ಪಡೆಯುವುದು ಟೀಂ ಇಂಡಿಯಾ ಪಾಲಿಗೆ ಕಬ್ಬಿಣದ ಕಡಲೆ ಎಂಬಂತಾಗಿದೆ. ಹೀಗಾಗಿ ಟೀಂ ಇಂಡಿಯಾ ಅಭಿಮಾನಿಗಳು ಐಪಿಎಲ್​ನ್ನು ಶಪಿಸುತ್ತಿದ್ದಾರೆ.

ಐಪಿಎಲ್​ನಲ್ಲಿ ಸಾಕಷ್ಟು ಹಣ ಸಿಗುವ ಕಾರಣದಿಂದ ಆಟಗಾರರಿಗೆ ವರ್ಲ್ಡ್​ಕಪ್​ನಂತಹ ಪಂದ್ಯಗಳು ಮುಖ್ಯ ಎಂದು ಎನಿಸುತ್ತಲೇ ಇಲ್ಲ ಎಂದು ಕಿಡಿಕಾರ್ತಿದ್ದಾರೆ.

— Bilal Ahmad (@BilalAh77689380) October 31, 2021

 

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...