alex Certify ವ್ಹೀಲಿಂಗ್ ಆಯ್ತು ಈಗ ಬೆಂಗಳೂರಿನಲ್ಲಿ ನಡು ರಸ್ತೆಯಲ್ಲಿ ಬೈಕ್ ರೇಸ್; ರೀಲ್ಸ್ ಗಾಗಿ ಪುಂಡರ ಹುಚ್ಚಾಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವ್ಹೀಲಿಂಗ್ ಆಯ್ತು ಈಗ ಬೆಂಗಳೂರಿನಲ್ಲಿ ನಡು ರಸ್ತೆಯಲ್ಲಿ ಬೈಕ್ ರೇಸ್; ರೀಲ್ಸ್ ಗಾಗಿ ಪುಂಡರ ಹುಚ್ಚಾಟ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ರಸ್ತೆಗಳಲ್ಲಿ ಇಷ್ಟುದಿವ ವ್ಹೀಲಿಂಗ್ ಮಾಡಿ ಪುಂಡಾಟ ಮೆರೆಯುತ್ತಿದ್ದ ಯುವಕರ ಗುಂಪು ಈಗ ರಸ್ತೆ ಮಧ್ಯೆ ಬೈಕ್ ರೇಸ್ ಆರಂಭಿಸಿ ಹುಚ್ಚಾಟ ಮೆರೆದಿದೆ.

ಬೆಂಗಳೂರಿನ ನೈಸ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಕೆಲ ಪುಂಡರ ಗುಂಪು ಸಾರ್ವಜನಿಕರ ವಾಹನಗಳನ್ನು ತಡೆದು ನಿಲ್ಲಿಸಿ ರಸ್ತೆ ಮಧ್ಯೆ ಬೈಕ್ ರೇಸ್ ನಡೆಸಿ ವಿಡಿಯೋ ಮಾಡಿ ಹುಚ್ಚಾಟ ಮೆರೆದಿದ್ದಾರೆ.

ರೀಲ್ಸ್ ಗಾಗಿ ಈ ರೀತಿ ಡೆಡ್ಲಿ ಬೈಕ್ ರೇಸ್ ಮಾಡುತ್ತಿರುವುದೂ ಅಲ್ಲದೇ ಸಾರ್ವಜನಿಕರ ವಾಹನಗಳ ಸಂಚಾರಕ್ಕೂ ಅಡ್ಡಿಯುಂಟುಮಾಡುತ್ತಿದ್ದಾರೆ. ಬೈಕ್ ರೇಸ್ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುತ್ತಿದ್ದಾರೆ. ಇಂತಹ ವ್ಹೀಲಿಂಗ್ ಹಾಗೂ ಬೈಕ್ ರೇಸ್ ಮಾಡುವ ಪುಂಡರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...