alex Certify SHOCKING: ಯುವಕನ ಜೀವತೆಗೆದ ಬರ್ತಡೇ ಬಲೂನ್, ಸ್ಪೋಟದ ತೀವ್ರತೆಗೆ 10 ಅಡಿ ಹಾರಿ ಬಿದ್ದ ದೇಹ ಛಿದ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಯುವಕನ ಜೀವತೆಗೆದ ಬರ್ತಡೇ ಬಲೂನ್, ಸ್ಪೋಟದ ತೀವ್ರತೆಗೆ 10 ಅಡಿ ಹಾರಿ ಬಿದ್ದ ದೇಹ ಛಿದ್ರ

 ಬೆಂಗಳೂರು: ಬರ್ತಡೇ ಪಾರ್ಟಿಗೆ ಬಲೂನ್ ಗ್ಯಾಸ್ ಫಿಲ್ ಮಾಡುವಾಗ ಸ್ಫೋಟ ಸಂಭವಿಸಿ ಯುವಕನೊಬ್ಬ ಪ್ರಾಣ ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 19 ವರ್ಷದ ದಿನೇಶ್ ಮೃತಪಟ್ಟ ಯುವಕ ಎಂದು ಹೇಳಲಾಗಿದೆ.

ಪರಪ್ಪನ ಅಗ್ರಹಾರ ನಿವಾಸಿಯಾಗಿರುವ ದಿನೇಶ್ ಬರ್ತಡೇ ಪಾರ್ಟಿಗಳಿಗೆ ಬಲೂನ್ ಒದಗಿಸುವ ಜೊತೆಗೆ ಅಲಂಕಾರ ಮಾಡಿಕೊಡುತ್ತಿದ್ದರು. ಅಶೋಕನಗರದ ಅಪಾರ್ಟ್ ಮೆಂಟ್ ನಲ್ಲಿ ಬಲೂನ್ ಗೆ ಗ್ಯಾಸ್ ಫಿಲ್ ಮಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಸ್ಫೋಟ ಸಂಭವಿಸಿದ್ದು, ಸ್ಪೋಟದ ತೀವ್ರತೆಗೆ ದಿನೇಶ್ 10 ಅಡಿ ಎತ್ತರಕ್ಕೆ ಹಾರಿದ್ದು, ಮರಕ್ಕೆ ಬಡಿದು ಕೆಳಗೆ ಬಿದ್ದಿದ್ದಾರೆ. ಅವರ ದೇಹ ಛಿದ್ರವಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ನಾಲ್ಕು ವರ್ಷಗಳಿಂದ ದಿನೇಶ್ ಪಾರ್ಟಿಗಳಿಗೆ ಬಲೂನ್ ಒದಗಿಸುವ ಕೆಲಸ ಮಾಡಿಕೊಂಡಿದ್ದರು. ಬಲೂನ್ ಫಿಲಿಂಗ್ ಸಂದರ್ಭದಲ್ಲಿ ಸ್ಫೋಟ ಸಂಭವಿಸಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...