alex Certify ಬಜಾಜ್ ಆಟೋದ ನೂತನ ಬೈಕ್ ಗಳಿಗೆ ಪಲ್ಸರ್ ಎಲಾನ್, ಎಲಿಗ್ಯಾಂಝ್ ನಾಮಕರಣ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಜಾಜ್ ಆಟೋದ ನೂತನ ಬೈಕ್ ಗಳಿಗೆ ಪಲ್ಸರ್ ಎಲಾನ್, ಎಲಿಗ್ಯಾಂಝ್ ನಾಮಕರಣ ಸಾಧ್ಯತೆ

ಟ್ವಿನ್ನರ್, ಸ್ಕ್ರಾಂಬ್ಲರ್ ಮತ್ತು ಪೇಸರ್ ನಂತರ ಬಜಾಜ್ ಆಟೋ ಇದೀಗ ಪಲ್ಸರ್ ಎಲಾನ್ ಮತ್ತು ಎಲಿಗ್ಯಾಂಝ್ ಎಂಬ ಎರಡು ಹೆಸರುಗಳನ್ನು ತನ್ನ ಹೊಸ ಬೈಕ್ ಗಳಿಗೆ ನಾಮಕರಣ ಮಾಡಲು ನಿರ್ಧರಿಸಿದೆ.

ಈ ಸಂಬಂಧ ಬಜಾಜ್ ಆಟೋ ಸಂಸ್ಥೆ ಪಲ್ಸರ್ ಎಲಾನ್ ಮತ್ತು ಪಲ್ಸರ್ ಎಲಿಗ್ಯಾಂಝ್ ಹೆಸರಿಗೆ ಪೇಟೆಂಟ್ ನೀಡುವಂತೆ ಅರ್ಜಿ ಹಾಕಿದೆ. ತನ್ನ ಅತ್ಯಂತ ಜನಪ್ರಿಯ ಪಲ್ಸರ್ ಬೈಕ್ ಮಾದರಿಯನ್ನು ಮತ್ತೊಮ್ಮೆ ಮಾರುಕಟ್ಟೆ ತರುವ ಉದ್ದೇಶವನ್ನು ಈ ಪ್ರಸ್ತಾವನೆ ಹೊಂದಿದೆ. ಆದರೆ, ಈ ಎರಡು ಹೆಸರುಗಳು ದೊರೆಯುತ್ತವೆ ಎಂಬುದು ಇನ್ನೂ ಖಾತರಿ ಇಲ್ಲ.

ಈ ಹಿಂದೆ ಬಜಾಜ್ ಟ್ವಿನ್ನರ್, ಸ್ಕ್ರಾಂಬ್ಲರ್ ಮತ್ತು ಪೇಸರ್ ಎಂಬ ಹೆಸರುಗಳ ಟ್ರೇಡ್ ಮಾರ್ಕ್ ಅನ್ನು ಪಡೆದಿತ್ತು. ಆದರೆ, ಈ ಹೆಸರಿನಲ್ಲಿ ಬೈಕ್ ಗಳನ್ನು ಉತ್ಪಾದನೆ ಮಾಡಿರಲಿಲ್ಲ. ಹೊಸ ಬೈಕ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಿದರೆ ಕಳೆದ ವರ್ಷ ಬಿಡುಗಡೆಯಾಗಿರುವ ಪಲ್ಸರ್ 250 ಟ್ವಿನ್ ಅಡಿಯಲ್ಲಿ ಇರಬಹುದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...