alex Certify ಕ್ರೇಜಿಸ್ಟಾರ್ ‘ಯುಗಪುರುಷ’ ನೆನಪಿಸುವಂತಿದೆ ಈ ಅಪರಾಧ ಕೃತ್ಯ: ಕಳ್ಳಾಟ ಗೊತ್ತಾಗುತ್ತಲೇ ಗಂಡನಿಗೆ ಇಟ್ಲು ಮುಹೂರ್ತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರೇಜಿಸ್ಟಾರ್ ‘ಯುಗಪುರುಷ’ ನೆನಪಿಸುವಂತಿದೆ ಈ ಅಪರಾಧ ಕೃತ್ಯ: ಕಳ್ಳಾಟ ಗೊತ್ತಾಗುತ್ತಲೇ ಗಂಡನಿಗೆ ಇಟ್ಲು ಮುಹೂರ್ತ

ಬಾಗಲಕೋಟೆ: ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ‘ಯುಗ ಪುರುಷ’ ಚಿತ್ರದ ರೀತಿಯಲ್ಲಿ ಮಹಿಳೆಯೊಬ್ಬಳು ಕಾರ್ ಹತ್ತಿಸಿ ಗಂಡನನ್ನು ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕು ಕಮತಗಿ ಕ್ರಾಸ್ ಬಳಿ ನಡೆದಿದ್ದ ಅಪಘಾತ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದೆ. ಬೈಕ್ ಸವಾರನಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದಾನೆ ಎನ್ನಲಾಗಿದ್ದ ಪ್ರಕರಣ ಪೊಲೀಸರ ತನಿಖೆಯಲ್ಲಿ ಮತ್ತೊಂದು ತಿರುವು ಪಡೆದುಕೊಂಡಿದೆ. ಅಕ್ರಮ ಸಂಬಂಧ ಹೊಂದಿದ್ದ ಪತ್ನಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.

ಪ್ರವೀಣ್ ಮೃತಪಟ್ಟ ವ್ಯಕ್ತಿ. ಈತನ ಪತ್ನಿ ನಿತ್ಯಾ ಮೆಕಾನಿಕ್ ರಾಘವೇಂದ್ರನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದು, ಬೈಕ್ ನಲ್ಲಿ ತೆರಳುತ್ತಿದ್ದ ಪತಿ ಪ್ರವೀಣ್ ಗೆ ಕಾರ್ ನಿಂದ ಡಿಕ್ಕಿ ಹೊಡಿಸಿ ಪರಾರಿಯಾಗಿದ್ದರು. ಅಪಘಾತವಾಗಿರುವ ಬಗ್ಗೆ ಪತ್ನಿಗೆ ಕರೆ ಮಾಡಿ ಪ್ರವೀಣ್ ಮಾಹಿತಿ ನೀಡಿದ್ದು, ಕಾರ್ ತಿರುಗಿಸಿಕೊಂಡು ಬಂದ ಪತ್ನಿ, ಪ್ರಿಯಕರ ಮತ್ತೆ ಪ್ರವೀಣ್ ಗೆ ಡಿಕ್ಕಿ ಹೊಡೆಸಿ ಸಾಯಿಸಿದ್ದಾರೆ.

ಗಂಡನ ಜೊತೆ ಜಗಳವಾಡಿಕೊಂಡಿದ್ದ ನಿತ್ಯಾ ಒಂದು ವರ್ಷದ ಹಿಂದೆ ತವರಿನಲ್ಲಿ ರಾಘವೇಂದ್ರನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಳು. ಮೂರು ತಿಂಗಳ ಹಿಂದೆ ಪ್ರವೀಣ್ ಪತ್ನಿಯ ತವರಿಗೆ ಬಂದಿದ್ದು, ರಾಘವೇಂದ್ರನ ಮೆಸೇಜ್ ನೋಡಿ ಪತ್ನಿ ಆಕ್ರಮ ಸಂಬಂಧ ಹೊಂದಿರುವುದು ಗೊತ್ತಾಗಿದೆ. ಇದರಿಂದ ಕೆರಳಿದ ಪ್ರವೀಣ್ ಮಗಳನ್ನು ಕರೆದುಕೊಂಡು ಬೈಕ್ ನಲ್ಲಿ ಊರಿಗೆ ಹೊರಟಿದ್ದಾನೆ. ಸ್ವಿಫ್ಟ್ ಕಾರ್ ನಲ್ಲಿ ಪ್ರಿಯಕರನೊಂದಿಗೆ ಪ್ರವೀಣ್ ನನ್ನು ಹಿಂಬಾಲಿಸಿದ ನಿತ್ಯಾ ಬೈಕ್ ನಲ್ಲಿ ಮಗಳು ಇದ್ದ ಕಾರಣ ಪ್ರವೀಣ್ ಅನ್ನು ಕೊಲೆ ಮಾಡಿಲ್ಲ. ಹುನಗುಂದದಲ್ಲಿ ತಾಯಿಯ ಬಳಿ ಮಗಳನ್ನು ಬಿಟ್ಟು ಬೈಕ್ ನಲ್ಲಿ ಒಬ್ಬನೇ ತೆರಳುವಾಗ ಕಾರ್ ನಿಂದ ಡಿಕ್ಕಿ ಹೊಡೆಸಿ ಪರಾರಿಯಾಗಿದ್ದಾರೆ. ಅಪರಿಚಿತವಾಹನ ಡಿಕ್ಕಿ ಹೊಡೆದಿರಬಹುದು ಎಂದು ಪತ್ನಿಗೆ ಕರೆ ಮಾಡಿ ಅಪಘಾತವಾದ ಬಗ್ಗೆ ಪ್ರವೀಣ್ ಮಾಹಿತಿ ನೀಡಿದ್ದಾನೆ. ಈತ ಇನ್ನೂ ಸತ್ತಿಲ್ಲ ಎಂದು ಮತ್ತೆ ವಾಪಸ್ ಕಾರ್ ತಿರುಗಿಸಿಕೊಂಡು ಬಂದ ನಿತ್ಯಾ ಹಾಗೂ ರಾಘವೇಂದ್ರ ಬೈಕ್ ಗೆ ವಾಹನ ಡಿಕ್ಕಿ ಹೊಡೆಸಿ ಪ್ರವೀಣ್ ನನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಅಮೀನಗಢ ಠಾಣೆ ಪೊಲೀಸರು ಬೈಕ್ ಬಿದ್ದ ಜಾಗ, ಶವದ ಮೇಲಿನ ಗಾಯ ಗಮನಿಸಿ ಕೊಲೆ ಶಂಕೆ ಹಿನ್ನೆಲೆಯಲ್ಲಿ ತನಿಖೆ ನಡೆಸಿದ್ದು, ಕೊಲೆ ರಹಸ್ಯ ಬಯಲಿಗೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...