alex Certify BIG NEWS: ಬಾಗಲಕೋಟೆ: ವಶಕ್ಕೆ ಪಡೆಯಲಾದ ಹಣ ಮರಳಿ ಬಿಡುಗಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬಾಗಲಕೋಟೆ: ವಶಕ್ಕೆ ಪಡೆಯಲಾದ ಹಣ ಮರಳಿ ಬಿಡುಗಡೆ

ಬಾಗಲಕೋಟೆ: ಲೋಕ‌ಸಭಾ ಚುನಾವಣೆ ನೀತಿ ಸಂಹಿತೆ‌ ಹಿನ್ನಲೆಯಲ್ಲಿ ಬಾಗಲಕೋಟೆಯಲ್ಲಿ ವಶಕ್ಕೆ ಪಡೆಯಲಾದ ಹಣ ಮರಳಿ ಬಿಡುಗಡೆ ಮಾಡಲಾಗಿದೆ.

ಅಗತ್ಯ ದಾಖಲೆಗಳನ್ನು ಸಲ್ಲಿಸಿದ‌ ಪ್ರಯುಕ್ತ ವಶಕ್ಕೆ ಪಡೆಯಲಾಗಿದ್ದ 1.50 ಲಕ್ಷ ರೂ. ನಗದು ಹಣವನ್ನು ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ಮರಳಿ ನೀಡಿದ್ದಾರೆ.

ಬಾಗಲಕೋಟೆ ಮತಕ್ಷೇತ್ರ ವ್ಯಾಪ್ತಿಯ ಹೊಸೂರ ಚೆಕ್ ಪೋಸ್ಟನಲ್ಲಿ ದಾಖಲೆ‌ ಇಲ್ಲದೆ 1.50 ಲಕ್ಷ ನಗದನ್ನು ವಶಕ್ಕೆ ಪಡೆಯಲಾಗಿತ್ತು. ಕೆಲವೊಂದು ವಸ್ತುಗಳನ್ನು ಮಾರಿ ಆಸ್ಪತ್ರೆಯ ಬಿಲ್ಲು ಕಟ್ಟುವ ಸಲುವಾಗಿ ನಗದು ಹಣವನ್ನು ಸಾಗಾಟ ಮಾಡುತ್ತಿದ್ದರು.

ಸೂಕ್ತ ಅಗತ್ಯ ದಾಖಲೆ ಸಲ್ಲಿಸಿದ ಹಿನ್ನಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು ಮರಳಿ ಹಣ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...