alex Certify ‘ತನಗೆ ಇನ್ನೂ ಕೂದಲು ಬಂದಿಲ್ಲ’ ಎಂದು ಅರಿಯಲು ಪುಟ್ಟ ಕಂದ ಮಾಡಿದ್ದೇನು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ತನಗೆ ಇನ್ನೂ ಕೂದಲು ಬಂದಿಲ್ಲ’ ಎಂದು ಅರಿಯಲು ಪುಟ್ಟ ಕಂದ ಮಾಡಿದ್ದೇನು ಗೊತ್ತಾ….?

ದಿನಕ್ಕೊಂದು ಮಗುವಿನ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿರುತ್ತದೆ. ಕೆಲವೊಮ್ಮೆ ಮುಗ್ಧವಾಗಿ ನಗುವ, ಅಂಬೆಗಾಲು ಇಡುವ, ಚಪ್ಪಾಳೆ ತಟ್ಟುವ, ನೆಚ್ಚಿನ ಸಾಕುಪ್ರಾಣಿಯ ಮೈಸವರುವ ಪುಟ್ಟ ಕಂದಮ್ಮಗಳ ಆಟವನ್ನು ಎಷ್ಟು ನೋಡಿದರೂ ಸಾಲದು ಎನಿಸುತ್ತದೆ.
ಅಂಥದ್ದೇ ಹೊಸ ವಿಡಿಯೊ ವೈರಲ್‌ ಆಗಿದೆ.

ಎರಡು ವರ್ಷದೊಳಗಿನ ಹೆಣ್ಣು ಮಗುವೊಂದು ನೆಲದ ಮೇಲೆ ಕುಳಿತಿರುತ್ತದೆ. ಎದುರಿಗೆ ಮಲಗಿರುವ ತಾಯಿಯ ನುಣುಪಾದ ಉದ್ದನೆಯ ಕೂದಲನ್ನು ಸವರುತ್ತಾ ಇರುತ್ತದೆ. ಕೆಲವು ನಿಮಿಷಗಳ ಬಳಿಕ ತನ್ನ ತಲೆಯನ್ನು ಏಕಾಏಕಿ ಎರಡೂ ಕೈಗಳಿಂದ ಮುಟ್ಟಿಕೊಳ್ಳುತ್ತದೆ. ಆಗ ಅದರ ಮುಖಭಾವದಲ್ಲಿ ಅರಿವಿಗೆ ಬರುವುದು, ’’ ಅರೇ! ನನ್ನ ತಲೆಯಲ್ಲಿ ಅಮ್ಮನ ಥರ ಚೆಂದದ ಕೂದಲು ಇಲ್ಲವಲ್ಲ,’’ ಎನ್ನುವುದು.

GOOD NEWS: ಕೇಂದ್ರದ ಬೆನ್ನಲ್ಲೇ ರಾಜ್ಯ ಸರ್ಕಾರದಿಂದಲೂ ಜನತೆಗೆ ದೀಪಾವಳಿ ಗಿಫ್ಟ್

ಇನ್‌ಸ್ಟಾಗ್ರಾಂನಲ್ಲಿ ’ಕೆಟಿಗರ್ಲೀ01’ (ktgirlie01) ಎಂಬ ಖಾತೆಯಲ್ಲಿ ಮುದ್ದು ಮಗುವಿನ ವಿಡಿಯೊ ಇದೆ. ಇದಕ್ಕೆ ಮುದ್ದಾಗಿಯೇ ಪ್ರತಿಕ್ರಿಯೆ ನೀಡಿರುವ ಇನ್‌ಸ್ಟಾಗ್ರಾಂ ಬಳಕೆದಾರರು, ’ ಚಿಂತೆಬೇಡ ಕಂದಮ್ಮ, ಬಹಳ ಬೇಗನೇ ನಿನಗೂ ಕೂದಲು ಬೆಳೆಯಲಿದೆ’ ಎಂದಿದ್ದಾರೆ. ಮತ್ತೆ ಕೆಲವರು , ’ ಒಂದು ಕ್ಷಣ ದಂಗಾದ ಮಗುವು, ನನ್ನ ಕೂದಲೇ ಇಲ್ಲವಲ್ಲ ಎಂಬ ಆತಂಕ ತೋರುತ್ತಿರುವುದು ದೊಡ್ಡವರಂತೆಯೇ ಭಾಸವಾಗುತ್ತಿದೆ,’ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...