alex Certify ನಂಬಲಸಾಧ್ಯವಾದರೂ ಇದು ಸತ್ಯ…! ತಿನ್ನಲು ಯೋಗ್ಯವಲ್ಲ ಈ ವಿಚಿತ್ರ ಕೋಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಂಬಲಸಾಧ್ಯವಾದರೂ ಇದು ಸತ್ಯ…! ತಿನ್ನಲು ಯೋಗ್ಯವಲ್ಲ ಈ ವಿಚಿತ್ರ ಕೋಳಿ

ಚಿಕನ್​ ಅಂದರೆ ಮಾಂಸಪ್ರಿಯರ ಬಾಯಲ್ಲಿ ನೀರೂರದೇ ಇರದು. ಆದರೆ ಈಗ ನಾವು ವಿವರಿಸುವ ಈ ಕೋಳಿಯು ನಿಮಗೆ ಭೋಜನಕ್ಕೆ ಯೋಗ್ಯವಾದದ್ದಲ್ಲ.

ಅರೆ..! ಇದೇನಿದು ತಿನ್ನಲು ಬಾರದ ಕೋಳಿ ಯಾವುದು..? ಎಂದು ಯೋಚನೆ ಮಾಡುತ್ತಿದ್ದೀರೇ..? ಹೌದು..! ಈ ಕೋಳಿಯ ಹೆಸರು ಅಯಮ್​ ಸೆಮಾನಿ. ಈ ಕೋಳಿಯ ವಿಶೇಷತೆ ಅಂದರೆ ಕಪ್ಪು ಬಣ್ಣದ ಕಣ್ಣು, ರೆಕ್ಕೆ, ಕಾಲುಗಳನ್ನು ಹೊಂದಿದೆ.

ಕೇವಲ ಇದು ಮಾತ್ರವಲ್ಲ ಇವುಗಳ ಅಂಗಾಂಗ, ಮಾಂಸ ಹಾಗೂ ಮೂಳೆ ಎಲ್ಲವೂ ಕಪ್ಪು ಬಣ್ಣದ್ದಾಗಿದೆ.

ನ್ಯಾಷನಲ್​ ಜಿಯೋಗ್ರಾಫಿಕ್​ ವರ್ಣನೆ ಮಾಡಿರುವಂತೆ ಇವುಗಳು ವಿಶ್ವದ ಅತ್ಯಂತ ಆಳವಾದ ಪಿಗ್ಮೆಂಟೆಡ್​ ಕ್ರಿಯೇಚರ್​ ಆಗಿವೆ. ಆದರೆ ಹೆಣ್ಣು ಕೋಳಿಗಳು ಇಡುವ ಮೊಟ್ಟೆಗಳು ಮಾತ್ರ ಕಪ್ಪು ಬಣ್ಣದ್ದಲ್ಲ. ಬದಲಾಗಿ ಕೆನೆ ಬಣ್ಣವನ್ನು ಹೊಂದಿವೆ. ಹೀಗಾಗಿ ಈ ಕೋಳಿಯನ್ನು ನೀವು ಸಂಪೂರ್ಣವಾಗಿ ಕಪ್ಪು ಎಂದು ಹೇಳಲೂ ಸಾಧ್ಯವಿಲ್ಲ.

ಈ ವಿಚಿತ್ರ ಕೋಳಿಗಳು ನಿಮಗೆ ಹೆಚ್ಚಾಗಿ ಇಂಡೋನೇಷಿಯಾದಲ್ಲಿ ಕಾಣಸಿಗುತ್ತದೆ. ಫೈಬ್ರೊಮೆಲಾನೋಸಿಸ್ ಎಂಬ ಆನುವಂಶಿಕ ಸ್ಥಿತಿಯಿಂದ ಈ ಕೋಳಿಗಳು ಇಷ್ಟೊಂದು ಗಾಢ ಬಣ್ಣವನ್ನು ಹೊಂದಿದೆ.ಈ ಕೋಳಿಗಳ ಮೂಲ ಜಾವಾ ದ್ವೀಪ ಇರಬಹುದು ಎಂದು ಅಂದಾಜಿಸಲಾಗಿದೆ.

ಕೇವಲ ಅಯಮ್​ ಸೆಮಾನಿ ಮಾತ್ರ ಕಪ್ಪು ಮಾಂಸವನ್ನು ಹೊಂದಿಲ್ಲ. ಬದಲಾಗಿ ಸ್ವೀಡನ್‍ನ ಬೋಹುಸ್ಲಾನ್-ದಾಲ್ಸ್ ಸ್ವಾರ್ಥನಾ, ವಿಯೆಟ್ನಾಂನ ಬ್ಲ್ಯಾಕ್ ಎಚ್‍ಮಾಂಗ್ ಮತ್ತು ಸಿಲ್ಕಿ ಎಂಬವು ಕೂಡ ಕಪ್ಪು ಒಳಭಾಗವನ್ನು ಹೊಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...