alex Certify ದೈತ್ಯ ಹೆಬ್ಬಾವುಗಳನ್ನು ಹೆಗಲ ಮೇಲೆ ಹೊತ್ತು ಡಾನ್ಸ್ ಮಾಡಿದ ಭೂಪ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೈತ್ಯ ಹೆಬ್ಬಾವುಗಳನ್ನು ಹೆಗಲ ಮೇಲೆ ಹೊತ್ತು ಡಾನ್ಸ್ ಮಾಡಿದ ಭೂಪ..!

Viral Video: Daring Man Dances With 2 Giant Pythons On His Shoulders. Watchಹೆಬ್ಬಾವುಗಳು ವಿಷಕಾರಿಯಲ್ಲದ ಹಾವುಗಳಾಗಿದ್ದರೂ ಕೂಡ ಅವು  ಮನುಷ್ಯರನ್ನು ಕೂಡ ಕಚ್ಚಿ ನುಂಗಬಹುದು. ವಿಶ್ವದ ಅತಿ ಉದ್ದದ ಹಾವು ಎನ್ನಲಾಗುವ ರೆಟಿಕ್ಯುಲೇಟೆಡ್ ಹೆಬ್ಬಾವುಗಳನ್ನು ವ್ಯಕ್ತಿಯೊಬ್ಬ ಹೊಂದಿದ್ದಾನೆ.

ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ರೆಟಿಕ್ಯುಲೇಟೆಡ್ ಹೆಬ್ಬಾವುಗಳು 20 ಅಡಿಗಳಿಗಿಂತ ಹೆಚ್ಚು ಉದ್ದಕ್ಕೆ ಬೆಳೆಯುತ್ತವೆ. ಇಂಡೋನೇಷಿಯಾದ ವ್ಯಕ್ತಿಯೊಬ್ಬರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಎರಡು ಬೃಹತ್ ರೆಟಿಕ್ಯುಲೇಟೆಡ್ ಹೆಬ್ಬಾವುಗಳೊಂದಿಗೆ ಡಾನ್ಸ್ ಮಾಡಿದ್ದಾನೆ.

ಆಗಾಗ್ಗೆ ಆತ ದೈತ್ಯ ಹೆಬ್ಬಾವುಗಳ ಜೊತೆ ರೀಲ್‌ಗಳನ್ನು ಮಾಡಿ ಪೋಸ್ಟ್ ಮಾಡುತ್ತಿರುತ್ತಾನೆ. ದೈತ್ಯ ಹಾವುಗಳನ್ನು ತನ್ನ ಹೆಗಲ ಮೇಲೆ ಹಾಕಿಕೊಂಡಿದ್ದಾನೆ. ಹಾವುಗಳು ಆತನ ಹಿಂದೆ ತಲೆಕೆಳಗಾಗಿ ನಿಂತಿವೆ. ಹೆಬ್ಬಾವುಗಳನ್ನು ಹಿಡಿದುಕೊಂಡ ವ್ಯಕ್ತಿಯು ಭಾರವಾದ ಹೆಜ್ಜೆಯಿಡುತ್ತಾ ನೃತ್ಯ ಮಾಡಿದ್ದಾನೆ.

ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಸದ್ಯ ವೈರಲ್ ಆಗಿದೆ. ಈ ಪೋಸ್ಟ್‌ಗೆ ನೆಟ್ಟಿಗರು ತಮ್ಮದೇ ಶೈಲಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಈ ಸ್ಟಂಟ್ ತುಂಬಾ ಅಪಾಯಕಾರಿ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಈ ರೀಲ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪುಟವೊಂದು ಹಂಚಿಕೊಂಡಿದೆ. ಅಲ್ಲಿ ಇದು 3.7 ಮಿಲಿಯನ್ ವೀಕ್ಷಣೆಗಳು ಹಾಗೂ ಸಾವಿರಾರು ಲೈಕ್ ಗಳೊಂದಿಗೆ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...