alex Certify ಶ್ವಾನದ ಹಣೆಗೆ ಬಿಂದಿ….! ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಯ್ತು ಟ್ರೆಂಡ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ವಾನದ ಹಣೆಗೆ ಬಿಂದಿ….! ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಯ್ತು ಟ್ರೆಂಡ್​

ಸೋಶಿಯಲ್​ ಮೀಡಿಯಾಗಳಲ್ಲಿ ಪ್ರಾಣಿಗಳ ಸಾಕಷ್ಟು ಮುದ್ದಾದ ವಿಡಿಯೋಗಳು ಸದ್ದು ಮಾಡ್ತಾನೇ ಇರುತ್ತೆ. ಪ್ರಾಣಿಗಳ ವಿಡಿಯೋಗಳು ನೋಡುಗರ ಮೊಗದಲ್ಲಿ ನಗುವನ್ನ ತರಿಸೋದಂತೂ ಪಕ್ಕಾ.

ಟ್ವಿಟರ್​ನಲ್ಲಿ ಇದೀಗ ಒಂದು ಟ್ರೆಂಡ್​ ಶುರುವಾಗಿದ್ದು ನಾಯಿಗಳ ಮುಖಕ್ಕೆ ಬಿಂದಿ ಹಚ್ಚಿ ಅವುಗಳ ಫೋಟೋವನ್ನ ಶೇರ್​ ಮಾಡಲಾಗ್ತಾ ಇದೆ. ಟ್ವಿಟರ್​ನಲ್ಲಿ ಗೋಲ್ಡನ್​ ರಿಟ್ರೈವರ್​ ನಾಯಿಮರಿಯ ಮುಖಕ್ಕೆ ಬಿಂದಿ ಹಚ್ಚಿದ್ದ ಫೋಟೋವನ್ನ ಶೇರ್​ ಮಾಡಿ ಒಂದು ವೇಳೆ ನಿಮ್ಮ ದಿನ ಅತ್ಯಂತ ಕೆಟ್ಟದಾಗಿ ಸಾಗುತ್ತಿದ್ದರೆ ಎಂದು ಶೀರ್ಷಿಕೆ ನೀಡಿದ್ದಾರೆ.

ಈ ಫೋಟೋವನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದೇ ಮಾಡಿದ್ದು ಕಮೆಂಟ್​ ವಿಭಾಗದಲ್ಲಿ ಶ್ವಾನ ಮಾಲೀಕರು ತಮ್ಮ ಮನೆಯ ನಾಯಿಗಳ ಹಣೆಗೂ ಬಿಂದಿ ಅಂಟಿಸಿ ಫೋಟೋ ಹಾಗೂ ವಿಡಿಯೋಗಳನ್ನ ಶೇರ್​ ಮಾಡ್ತಾನೇ ಹೋಗಿದ್ದಾರೆ. ಈ ಫೋಟೋಗಳಲ್ಲಿ ಶ್ವಾನಗಳು ತುಂಬಾನೇ ಮುದ್ದಾಗಿ ಕಾಣುತ್ತಿವೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...