alex Certify ವಾಹನಗಳಲ್ಲಿ ಸುರಕ್ಷತಾ ವ್ಯವಸ್ಥೆ ಕುರಿತು ಗ್ರಾಹಕರ ನಿರೀಕ್ಷೆ…! ಸಮೀಕ್ಷೆಯಲ್ಲಿ ಮಹತ್ವದ ಅಂಶ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಹನಗಳಲ್ಲಿ ಸುರಕ್ಷತಾ ವ್ಯವಸ್ಥೆ ಕುರಿತು ಗ್ರಾಹಕರ ನಿರೀಕ್ಷೆ…! ಸಮೀಕ್ಷೆಯಲ್ಲಿ ಮಹತ್ವದ ಅಂಶ ಬಹಿರಂಗ

ಭಾರತೀಯ ಆಟೋಮೊಬೈಲ್ ಬಳಕೆದಾರರಲ್ಲಿ ಸುರಕ್ಷತೆ ಕುರಿತಂತೆ ಹೆಚ್ಚಿನ ಜಾಗೃತಿ ಮೂಡುತ್ತಿದ್ದು, ಸೇಫ್ಟಿ ಫೀಚರ್‌ಗಳು ಚೆನ್ನಾಗಿರುವ ಕಾರುಗಳನ್ನು ಖರೀದಿ ಮಾಡಲು ಹೆಚ್ಚಾಗಿ ಖರ್ಚು ಮಾಡಲು ಹಿಂದೇಟು ಹಾಕುವುದಿಲ್ಲ ಎಂದು ಮೊಬಿಲಿಟಿ ಔಟ್‌ಲುಕ್‌ನ ವರದಿಯೊಂದು ತಿಳಿಸಿದೆ.

ಸಮೀಕ್ಷೆಯಲ್ಲ ಭಾಗಿಯಾದವರಲ್ಲಿ 1/3ರಷ್ಟು ಮಂದಿ, ತಾವು ಸುಧಾರಿತ ಸುರಕ್ಷತಾ ವ್ಯವಸ್ಥೆಗಳಿಗಾಗಿ 30,000 ರೂ.ಗಳಷ್ಟು ಹೆಚ್ಚು ದುಡ್ಡು ಖರ್ಚು ಮಾಡಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ.

ಕಾರ್‌ಟ್ರೇಡ್‌ ಟೆಕ್‌ನ ಅಂಗವಾದ ಮೊಬಿಲಿಟಿ ಔಟ್‌ಲುಕ್ ಈ ಸರ್ವೇಗಾಗಿ ದೇಶಾದ್ಯಂತ 2.7 ಲಕ್ಷ ಗ್ರಾಹಕರನ್ನು ಪ್ರಶ್ನಿಸಿದೆ.

ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ: ಮಾನ ಕಳ್ಳಸಾಗಣೆ ಜಾಲ ಪತ್ತೆ…?

ಸಮೀಕ್ಷೆಯಲ್ಲಿ ಭಾಗಿಯಾದವರ ಪೈಕಿ 3/4ರಷ್ಟು ಮಂದಿ 4-5 ಸ್ಟಾರ್‌ ರೇಟಿಂಗ್‌ನ ಸುರಕ್ಷತಾ ವ್ಯವಸ್ಥೆಗಳಿರುವ ವಾಹನಗಳನ್ನು ಭವಿಷ್ಯದಲ್ಲಿ ಖರೀದಿ ಮಾಡಲು ಇಚ್ಛಿಸಿದ್ದು, ಸುರಕ್ಷತೆಗಾಗಿ ತಮ್ಮ ಬಜೆಟ್‌ನ್ನು ಹಿಗ್ಗಿಸಲು ಸಿದ್ಧರಿದ್ದಾರೆ ಎಂದು ತಿಳಿದು ಬಂದಿದೆ.

ಇದೇ ವೇಳೆ, 27%ನಷ್ಟು ಪ್ರತಿಕ್ರಿಯಾದಾರರಲ್ಲಿ ವಾಹನದ ಸೇಫ್ಟಿ ಫೀಚರ್‌ಗಳ ಬಗ್ಗೆ ಅರಿವೇ ಇಲ್ಲದಿರುವುದು ಕಳವಳದ ವಿಚಾರವಾಗಿದೆ.

ಬಳಕೆ ಮಾಡಿದ ವಾಹನಗಳಿಗಿಂತ ಹೊಸದಾಗಿ ಖರೀದಿ ಮಾಡಿದ ವಾಹನಗಳಲ್ಲಿ ಇನ್ನಷ್ಟು ಉತ್ತಮವಾದ ಸುರಕ್ಷತವಾ ವ್ಯವಸ್ಥೆಗಳಿಗೆ ಎಂದು 45% ಮಂದಿ ಅಭಿಪ್ರಾಯ ಪಟ್ಟಿದ್ದಾರೆ.

ದೇಶದ ಮೆಟ್ರೋ ಹಾಗೂ ಮೆಟ್ರೋಯೇತರ ನಗರಗಳಲ್ಲಿರುವ ವಾಹನಗಳ ಮಾಲೀಕರು ಹಾಗೂ ವಾಹನಗಳ ಖರೀದಿ ಮಾಡಲು ಪ್ಲಾನ್ ಮಾಡುತ್ತಿರುವ ಮಂದಿಯಿಂದ ಸರ್ವೇಯಲ್ಲಿ ಪ್ರತಿಕ್ರಿಯೆಗಳನ್ನು ಪಡೆಯಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...