alex Certify ಸ್ಯಾಂಡ್ ​ವಿಚ್​ ಮಾಹಿತಿ ನೀಡದ್ದಕ್ಕೆ ಮಾಡೆಲ್ ಗೆ​ 1.43 ಲಕ್ಷ ರೂ. ದಂಡ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಯಾಂಡ್ ​ವಿಚ್​ ಮಾಹಿತಿ ನೀಡದ್ದಕ್ಕೆ ಮಾಡೆಲ್ ಗೆ​ 1.43 ಲಕ್ಷ ರೂ. ದಂಡ….!

ವಿವಿಧ ದೇಶಗಳ ನಿಯಮಗಳು ಕಠಿಣಾತಿ ಕಠಿಣ ಇರುತ್ತದೆ. ದೇಶವನ್ನು ರಕ್ಷಿಸಿಕೊಳ್ಳಲು ಕಠಿಣ ನಿಯಮಗಳು ಅನಿವಾರ್ಯ ಎಂದು ಮುಂದುವರಿದ ದೇಶಗಳು ಸರ್ಮಥಿಸಿಕೊಳ್ಳುತ್ತವೆ. ಇಲ್ಲೊಂದು ಘಟನೆಯಲ್ಲಿ ಮಾಡೆಲ್​ ಒಬ್ಬರು ಒಂದು ಸಣ್ಣ ಮಾಹಿತಿ ಮುಚ್ಚಿಟ್ಟರೆಂದು ಅಂದಾಜು ರೂ. 2.13 ಲಕ್ಷ ದಂಡ ಹಾಕಲಾಗಿದೆ.

ಕಸ್ಟಮ್ಸ್​ನಲ್ಲಿ ಘೋಷಿಸದೆ ವಿಮಾನದಲ್ಲಿ ಸಬ್​ವೇ ಸ್ಯಾಂಡ್ ​ವಿಚ್​ ಅನ್ನು ಕೊಂಡೊಯ್ದಿದ್ದಕ್ಕಾಗಿ ಆಸ್ಟ್ರೇಲಿಯಾದ ಮಾಡೆಲ್​ಗೆ 2,664 ಡಾಲರ್​ ದಂಡ ವಿಧಿಸಲಾಯಿತು. ಟಿಕ್​ಟಾಕ್​ ವಿಡಿಯೋದಲ್ಲಿ ಈ ಘಟನೆಯನ್ನು ಹಂಚಿಕೊಂಡ ಪರ್ತ್​ ಮೂಲದ ಜೆಸ್ಸಿಕಾ ಲೀ, ಸಿಂಗಾಪುರದಿಂದ ಮನೆಗೆ ಹಿಂದಿರುಗುವಾಗ ತನಗೆ ಭಾರಿ ಪೆನಾಲ್ಟಿ ಬಿತ್ತು ಎಂದು ಹೇಳಿದ್ದಾರೆ.

ಅವರು ಚಿಕನ್​ ಮತ್ತು ಲೆಟಿಸ್​ ಸ್ಯಾಂಡ್ವಿಚ್​ ಅನ್ನು ಸಿಂಗಾಪುರದ ವಿಮಾನ ನಿಲ್ದಾಣದಲ್ಲಿ ಖರೀದಿಸಿದ್ದರು ಮತ್ತು ಅದನ್ನು ವಿಮಾನದಲ್ಲಿ ತಿಂದು ಮುಗಿಸಲು ಉದ್ದೇಶಿಸಿದ್ದರು. ಆದರೆ, ಅರ್ಧದಷ್ಟು ಮಾತ್ರ ತಿನ್ನಲು ಸಾಧ್ಯವಾಗಿತ್ತು.

ಉಳಿದ ಸ್ಯಾಂಡ್​ ವಿಚ್ ​ಅನ್ನು ಹಾಗೇ ಕೊಂಡೊಯ್ದಿದ್ದು, ಆಸ್ಟ್ರೇಲಿಯಾದ ಕಸ್ಟಮ್ಸ್​ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾಳೆ. ಸ್ಯಾಂಡ್​ವಿಚ್​ನಲ್ಲಿ ಚಿಕನ್​ ಮತ್ತು ಲೆಟಿಸ್​ ಅನ್ನು ಘೋಷಿಸಿಲ್ಲ ಎಂಬುದು ಅಧಿಕಾರಿಗಳು ಕೊಟ್ಟ ಕಾರಣ.

ಲೀ ತೆತ್ತಿರುವ ಭಾರಿ ದಂಡವು ಆಸ್ಟ್ರೇಲಿಯಾದ ಕಟ್ಟುನಿಟ್ಟಾದ ಜೈವಿಕ ಭದ್ರತೆ ಕಾನೂನುಗಳಿಗೆ ಸಂಬಂಧಿಸಿದ್ದಾಗಿದೆ. ಆಕೆಯ ವಿಡಿಯೋ ವೈರಲ್​ ಆಗಿದ್ದು, ಸಾವಿರಾರು ವೀಕ್ಷಣೆಗಳು ಮತ್ತು ಕಾಮೆಂಟ್​ ಗಳಿಸಿದೆ. ವಿಡಿಯೋಗೆ ಪ್ರತಿಕ್ರಿಯಿಸಿದ ಬಳಕೆದಾರರು, ಲೀಗೆ ಎಚ್ಚರಿಕೆ ನೀಡಬೇಕಿತ್ತು ಎಂದು ಹೇಳಿದ್ದಾರೆ.

ಸಿಡ್ನಿಯಿಂದ ಅಡಿಲೇಡ್​ಗೆ ಗಡಿ ದಾಟುವಾಗ ಕೇವಲ ಬೆರಳೆಣಿಕೆಯಷ್ಟು ದ್ರಾಕ್ಷಿಯನ್ನು ಹೊತ್ತಿದ್ದಕ್ಕಾಗಿ ಪ್ರಯಾಣಿಕರಿಗೆ $400 ಡಾಲರ್​ ದಂಡ ವಿಧಿಸಿದ ಅನುಭವವನ್ನು ಒಬ್ಬರು ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...