alex Certify ಈ ʼಉಪ್ಪಿನಕಾಯಿʼ ಕಲಾಕೃತಿಗೆ ಬರೋಬ್ಬರಿ 5 ಲಕ್ಷ ರೂಪಾಯಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ʼಉಪ್ಪಿನಕಾಯಿʼ ಕಲಾಕೃತಿಗೆ ಬರೋಬ್ಬರಿ 5 ಲಕ್ಷ ರೂಪಾಯಿ…!

ಅನೇಕ ಸಂದರ್ಭದಲ್ಲಿ ಕಲಾವಿದರಿಂದ ಮೂಡಿದ ರಚನೆಗಳನ್ನು ಸಾಮಾನ್ಯ ಜನರು ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಆದರೆ, ಅರ್ಥವಾಗದ ಅನೇಕ ಕಲಾಕೃತಿಗೆ ಅನಿರೀಕ್ಷಿತ ಬೆಲೆ ಸಿಗುವುದೂ ಉಂಟು.

ಇಂತಹದ್ದೇ ಒಂದು ಪ್ರಸಂಗ ಆಸ್ಟ್ರೇಲಿಯಾದ ಆಕ್ಲೆಂಡ್​ನ ಮೈಕೆಲ್​ ಲೆಟ್​ ಆರ್ಟ್​ ಗ್ಯಾಲರಿಯಲ್ಲಿ ನಡೆದಿದ್ದು, ಇತ್ತೀಚೆಗೆ ಪ್ರದರ್ಶಿಸಲಾದ ಕಲಾಕೃತಿಯು ಕಲಾ ಪ್ರೇಮಿಗಳು ಮತ್ತು ಜಾಲತಾಣಿಗರನ್ನು ತಬ್ಬಿಬ್ಬುಗೊಳಿಸಿದೆ.

ಕಲಾವಿದ ಮ್ಯಾಥ್ಯೂ ಗ್ರಿಫಿನ್​ ರಚಿಸಿದ ಕಲಾಕೃತಿಯು ಅದರ ವಿಲಕ್ಷಣ ಪ್ರಸ್ತುತಿಯಿಂದಾಗಿ ʼಟಾಕ್​ ಆಫ್‌ ದಿ ಟೌನ್ʼ​ ಆಗಿದೆ. ಮೈಕೆಲ್​ ಲೆಟ್​ ಗ್ಯಾಲರಿ ಅವರು ಕಲಾಕೃತಿಯ ಚಿತ್ರವನ್ನು ಇನ್​ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಅವರು ಈ ಕಲಾಕೃತಿ ರಚಿಸಲು ಬಳಸಿದ ವಸ್ತುವು ಎಲ್ಲರನ್ನೂ ಆಶ್ಚರ್ಯಗೊಳಿಸಿದೆ. ಇದರ ಮುಖ್ಯ ಅಂಶವೆಂದರೆ ಮೆಕ್​ಡೊನಾಲ್ಡ್ಸ್​ ಚೀಸ್​ಬರ್ಗರ್ ನ ಉಪ್ಪಿನಕಾಯಿಯ ತುಂಡು!

ಈ ವಿಲಕ್ಷಣ ಕಲೆ ರಚಿಸಲು ಗ್ರಿಫಿನ್​ ಮೆಕ್ಡೊನಾಲ್ಡ್ಸ್​ ಔಟ್ಲೆಟ್​ನಿಂದ ಚೀಸ್​ ಬರ್ಗರ್ ಖರೀದಿಸಿದ್ದರು. ನಂತರ ಬರ್ಗರ್​ನಿಂದ ಉಪ್ಪಿನಕಾಯಿ ತುಂಡುಗಳನ್ನು ತೆಗೆದು ಆ ತುಂಡನ್ನು ಗಾಳಿಯಲ್ಲಿ ಎಸೆದರು. ಅದು ಚಾವಣಿಗೆ ಅಂಟಿಕೊಂಡಿತು.

ಈ ಅದ್ಭುತ ಕಲಾಕೃತಿಗೆ ಉಪ್ಪಿನಕಾಯಿ ಎಂದು ಹೆಸರಿಡಲಾಗಿದ್ದು, 10,000 ಆಸ್ಟ್ರೇಲಿಯನ್​ ಡಾಲರ್​ಗಳಿಗೆ ಅಂದರೆ ಸುಮಾರು 5.55 ಲಕ್ಷ ರೂ.ಗೆ ಮಾರಾಟಕ್ಕೆ ಇಡಲಾಗಿದೆ. ಈ ಅಸಾಂಪ್ರದಾಯಿಕ ಕೃತಿಯು ಕಲಾಭಿಮಾನಿಗಳು ಮತ್ತು ನೆಟ್ಟಿಗರನ್ನು ದಿಗ್ಭ್ರಮೆಗೊಳಿಸಿದೆ.

ಅನೇಕರು ಇದು ಭಾರೀ ಮೌಲ್ಯಕ್ಕೆ ಅರ್ಹವಾಗಿದೆಯೇ ಎಂದು ಹಾಸ್ಯಮಯ ಚರ್ಚೆ ನಡೆಸಿದ್ದಾರೆ. ಕೆಲವರು ವ್ಯಂಗ್ಯಾತ್ಮಕ ಕಾಮೆಂಟ್​ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...