alex Certify SHOCKING​: ಮಲಗಿದ್ದ ಮಹಿಳೆ ಕಣ್ಣುಗುಡ್ಡೆಯನ್ನೇ ತಿಂದ ಇಲಿಗಳು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING​: ಮಲಗಿದ್ದ ಮಹಿಳೆ ಕಣ್ಣುಗುಡ್ಡೆಯನ್ನೇ ತಿಂದ ಇಲಿಗಳು..!

ಈ ಇಲಿಗಳು ಮನೆಯನ್ನ ಸೇರಿಕೊಂಡವು ಅಂದರೆ ಸಾಕು. ಏನಾದರೊಂದು ಕಿತಾಪತಿ ಮಾಡುತ್ತವೆ. ಅದೇ ರೀತಿಯ ಪ್ರಕರಣ ಒಂದರಲ್ಲಿ ನ್ಯೂ ಸೌತ್​ ವೇಲ್ಸ್​​ನ ಮಹಿಳೆಯೊಬ್ಬರು ಇಲಿ ಮಾಡಿದ ಅವಘಡದಿಂದಾಗಿ ಆಸ್ಪತ್ರೆಗೆ ದಾಖಲಾಗುವಂತಾಗಿದೆ.

ತಾನು ಮಲಗಿದ್ದ ವೇಳೆ ಇಲಿಯು ತನ್ನ ಕಣ್ಣುಗುಡ್ಡೆಯನ್ನ ತಿಂದ ಅನುಭವವಾದ ಹಿನ್ನೆಲೆಯಲ್ಲಿ ಮಹಿಳೆಯು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಲಿಯು ಕಚ್ಚಿದ ಅನುಭವವಾದ ಹಿನ್ನೆಲೆಯಲ್ಲಿ ಮಹಿಳೆ ಎದ್ದು ನೋಡಿದಾಗ ಈ ಗಂಭೀರ ವಿಚಾರ ಬೆಳಕಿಗೆ ಬಂದಿದೆ.

ರೈತನ ಪತ್ನಿಯಾಗಿದ್ದ ಮಹಿಳೆ ಇದೀಗ ಆಸ್ಪತ್ರೆ ಪಾಲಾಗಿದ್ದಾಳೆ. ಕಳೆದ ಮೂವತ್ತು ವರ್ಷಗಳಲ್ಲಿ ಇಲಿಯಿಂದ ಆದ ಅತ್ಯಂತ ಭಯಾನಕ ಪ್ರಕರಣ ಇದು ಎಂದು ವರದಿಯಾಗಿದೆ. ಈ ವಿಚಾರವನ್ನ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು ಸಿಕ್ಕಾಪಟ್ಟೆ ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...