alex Certify ಗಮನಿಸಿ: ಅಟಲ್​ ಪಿಂಚಣಿ ಯೋಜನೆ; ತೆರಿಗೆದಾರರಿಗೆ ಈ ಯೋಜನೆಯಲ್ಲಿಲ್ಲ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ಅಟಲ್​ ಪಿಂಚಣಿ ಯೋಜನೆ; ತೆರಿಗೆದಾರರಿಗೆ ಈ ಯೋಜನೆಯಲ್ಲಿಲ್ಲ ಅವಕಾಶ

ಅಟಲ್​ ಪಿಂಚಣಿ ಯೋಜನೆಯ ಇತ್ತೀಚಿನ ಅಪ್​ಡೇಟ್​ ಪ್ರಕಾರ ಅಕ್ಟೋಬರ್​ 1ರಿಂದ ಆದಾಯ ತೆರಿಗೆದಾರರು ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆ ಅಟಲ್​ ಪಿಂಚಣಿ ಯೋಜನೆಗೆ ದಾಖಲಾಗಲು ಅವಕಾಶ ಇರುವುದಿಲ್ಲ.

ಈ ಸಂಬಂಧ ಕೇಂದ್ರ ಹಣಕಾಸು ಸಚಿವಾಲಯ ಗುರುವಾರ ಅಧಿಸೂಚನೆಯನ್ನು ಹೊರಡಿಸಿದೆ. 1 ಅಕ್ಟೋಬರ್​, 2022 ರಿಂದ, ಯಾವುದೇ ಆದಾಯ ತೆರಿಗೆ ಪಾವತಿದಾರರು ಈ ಯೋಜನೆಗೆ ಸೇರಲು ಅರ್ಹರಲ್ಲ ಎಂದು ಸ್ಪಷ್ಟವಾಗಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅಕ್ಟೋಬರ್​ 1, 2022 ರ ಮೊದಲು ಯೋಜನೆಗೆ ಸೇರ್ಪಡೆಗೊಂಡ ಚಂದಾದಾರರಿಗೆ ಹೊಸ ಅಧಿಸೂಚನೆಯು ಅನ್ವಯಿಸುವುದಿಲ್ಲ ಎಂದು ತಿಳಿಸಲಾಗಿದೆ.

ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಲು ಕೇಂದ್ರವು ಜೂನ್​ 1, 2015 ರಂದು ಯೋಜನೆಯನ್ನು ಪರಿಚಯಿಸಿತ್ತು ಎಂಬುದನ್ನು ಗಮನಿಸಬೇಕು. ಯೋಜನೆಯ ಚಂದಾದಾರರು ತಮ್ಮ ಕೊಡುಗೆಗಳ ಆಧಾರದ ಮೇಲೆ 60 ವರ್ಷ ವಯಸ್ಸಿನ ನಂತರ ತಿಂಗಳಿಗೆ ರೂ. 1,000 ರಿಂದ ರೂ. 5,000 ವರೆಗೆ ಕನಿಷ್ಠ ಖಾತರಿ ಪಿಂಚಣಿ ಪಡೆಯುತ್ತಾರೆ.

ಅಕ್ಟೋಬರ್​ 1, 2022 ರಂದು ಅಥವಾ ನಂತರ ಸೇರ್ಪಡೆಗೊಂಡ ಚಂದಾದಾರರು, ಅರ್ಜಿ ಸಲ್ಲಿಸಿದ ದಿನಾಂಕದಂದು ಅಥವಾ ಅದಕ್ಕೂ ಮೊದಲು ಆದಾಯ ತೆರಿಗೆ ಪಾವತಿದಾರರಾಗಿದ್ದರೆ, ಈ ಯೋಜನೆ ಖಾತೆಯನ್ನು ಮುಚ್ಚಲಾಗುತ್ತದೆ ಮತ್ತು ಇಲ್ಲಿಯವರೆಗೆ ಸಂಗ್ರಹಿಸಿದ ಪಿಂಚಣಿ ಹಣವನ್ನು ಅವರಿಗೆ ನೀಡಲಾಗುತ್ತದೆ. ಆದಾಯ ತೆರಿಗೆ ಕಾನೂನಿನಡಿಯಲ್ಲಿ, 2.5 ಲಕ್ಷದವರೆಗಿನ ತೆರಿಗೆಯ ಆದಾಯ ಹೊಂದಿರುವವರು ಆದಾಯ ತೆರಿಗೆ ಪಾವತಿಸುವ ಅಗತ್ಯವಿಲ್ಲ.

ಪ್ರಸ್ತುತ, 18 -40 ವರ್ಷ ವಯಸ್ಸಿನ ಎಲ್ಲಾ ಭಾರತೀಯರು ಉಳಿತಾಯ ಬ್ಯಾಂಕ್​ ಖಾತೆಯನ್ನು ಹೊಂದಿರುವ ಬ್ಯಾಂಕ್​ ಅಥವಾ ಪೋಸ್ಟ್​ ಆಫೀಸ್​ ಶಾಖೆಗಳ ಮೂಲಕ ಈ ಯೋಜನೆಗೆ ಸೇರಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...