alex Certify ಬಂದೂಕುಧಾರಿ ಅಟ್ಟಹಾಸ: ಅಮೆರಿಕದಲ್ಲಿ ಅಪರಿಚಿತನಿಂದ ಗುಂಡಿನ ದಾಳಿಗೆ 10 ಮಂದಿ ಬಲಿ: 16 ಜನರಿಗೆ ಗಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಂದೂಕುಧಾರಿ ಅಟ್ಟಹಾಸ: ಅಮೆರಿಕದಲ್ಲಿ ಅಪರಿಚಿತನಿಂದ ಗುಂಡಿನ ದಾಳಿಗೆ 10 ಮಂದಿ ಬಲಿ: 16 ಜನರಿಗೆ ಗಾಯ

ಅಮೆರಿಕದ ಕ್ಯಾಲಿಫೋರ್ನಿಯಾದ ಮಾಂಟೆರಿ ಪಾರ್ಕ್‌ ನಲ್ಲಿ ಗುಂಡಿನ ದಾಳಿಯಲ್ಲಿ ಕನಿಷ್ಠ 10 ಮಂದಿ ಸಾವು ಕಂಡಿದ್ದು, 16 ಮಂದಿ ಗಾಯಗೊಂಡಿದ್ದಾರೆ.

ಶನಿವಾರ ರಾತ್ರಿ ಕ್ಯಾಲಿಫೋರ್ನಿಯಾದ ಮಾಂಟೆರಿ ಪಾರ್ಕ್‌ ನಲ್ಲಿ ನಡೆದ ಶೂಟಿಂಗ್‌ ನಲ್ಲಿ ಅನೇಕ ಸಾವು ನೋವು ಸಂಭವಿಸಿದ್ದು, ಮಾಹಿತಿ ತಿಳಿದ ನಂತರ ಧಾವಿಸಿದ ಪೊಲೀಸರು ಗಾಯಾಳುಗಳನ್ನು ರಕ್ಷಿಸಿದ್ದಾರೆ

ರಾತ್ರಿ 10 ಗಂಟೆಯ ನಂತರ ಶೂಟಿಂಗ್ ನಡೆದಿದೆ. ಮಾಂಟೆರಿ ಪಾರ್ಕ್‌ ನಲ್ಲಿ ನಡೆದ ಚೈನೀಸ್ ಚಂದ್ರನ ಹೊಸ ವರ್ಷದ ಆಚರಣೆಯ ವೇಳೆ ಅಪರಿಚಿತ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 10 ಜನ ಸಾವನ್ನಪ್ಪಿದ್ದಾರೆ. 16 ಮಂದಿ ಗಾಯಗೊಂಡಿದ್ದಾರೆ. ಉತ್ಸವದ ವೇಳೆ ಹೆಚ್ಚಿನ ಜನ ಸೇರಿದ್ದರು.

ಮಾಂಟೆರಿ ಪಾರ್ಕ್ ಲಾಸ್ ಏಂಜಲೀಸ್ ಕೌಂಟಿಯಲ್ಲಿರುವ ಒಂದು ನಗರವಾಗಿದ್ದು, ಲಾಸ್ ಏಂಜಲೀಸ್ ಡೌನ್‌ ಟೌನ್‌ ನಿಂದ ಸುಮಾರು 11 ಕಿಲೋಮೀಟರ್ ದೂರದಲ್ಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...