alex Certify ಬಾಹ್ಯಾಕಾಶದಲ್ಲಿರುವ ಗಗನಯಾತ್ರಿಗಳಿಗೆ ಭಾರತೀಯ ಆಹಾರವೆಂದ್ರೆ ಅಚ್ಚುಮೆಚ್ಚು ಅಂದ್ರು ಅನಿಲ್ ಮೆನನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಹ್ಯಾಕಾಶದಲ್ಲಿರುವ ಗಗನಯಾತ್ರಿಗಳಿಗೆ ಭಾರತೀಯ ಆಹಾರವೆಂದ್ರೆ ಅಚ್ಚುಮೆಚ್ಚು ಅಂದ್ರು ಅನಿಲ್ ಮೆನನ್

ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಭಾರತೀಯ ಆಹಾರವನ್ನು ಹೆಚ್ಚಾಗಿ ಇಷ್ಟಪಡುತ್ತಾರೆ ಎಂದು ನಾಸಾದ ಅನಿಲ್ ಮೆನನ್ ಹೇಳಿದ್ದಾರೆ.

ಹೌದು, ಭಾರತೀಯ ಮೂಲದ ಡಾ.ಅನಿಲ್ ಮೆನನ್ ಶೀಘ್ರದಲ್ಲೇ ಚಂದ್ರನತ್ತ ಹಾರುವ ಹತ್ತು ಗಗನಯಾತ್ರಿಗಳಲ್ಲಿ ಒಬ್ಬರಾಗಬಹುದು. ಇದೀಗ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಅನಿಲ್ ಮೆನನ್ ಸಂದರ್ಶನ ನೀಡಿದ್ದು, ಭಾರತೀಯ ಆಹಾರ ಶೈಲಿಯನ್ನು ಗಗನಯಾತ್ರಿಗಳು ಇಷ್ಟಪಡುವುದಾಗಿ ತಿಳಿಸಿದ್ದಾರೆ.

ಭಾರತೀಯ ಆಹಾರವು ಅದರ ಮಸಾಲೆಗಳಿಂದಾಗಿ ಬಾಹ್ಯಾಕಾಶದಲ್ಲಿ ಹೆಚ್ಚಿನ ಗಗನಯಾತ್ರಿಗಳ ಅಗ್ರ ಆಯ್ಕೆಯಾಗಿದೆ ಎಂದು ಅನಿಲ್ ಮೆನನ್ ಬಹಿರಂಗಪಡಿಸಿದ್ದಾರೆ. ಬಾಹ್ಯಾಕಾಶದಲ್ಲಿದ್ದಾಗ, ಆಹಾರವು ವಿಭಿನ್ನ ರುಚಿಯನ್ನು ಹೊಂದಿರುತ್ತದೆ. ದ್ರವವು ಅಲ್ಲಿ ತೇಲಲು ಪ್ರಾರಂಭಿಸುತ್ತದೆ. ಗಗನಯಾತ್ರಿಗಳ ಮೂಗು ಉಸಿರುಕಟ್ಟಿಕೊಳ್ಳುತ್ತದೆ. ಹಾಗಾಗಿ ಭಾರತೀಯ ಆಹಾರವು ಗಗನಯಾತ್ರಿಗಳ ನೆಚ್ಚಿನ ಆಹಾರವಾಗಿದೆ. ಏಕೆಂದರೆ ಭಾರತೀಯ ಆಹಾರದಲ್ಲಿ ಮಸಾಲೆ ಖಾದ್ಯಗಳನ್ನು ಹೆಚ್ಚಾಗಿ ಉಪಯೋಗಿಸಲಾಗುತ್ತದೆ.

ಇನ್ನು, ತನ್ನ ಭಾರತೀಯ ಮೂಲದ ಬಗ್ಗೆ ಮಾತನಾಡುತ್ತಾ ಮೆನನ್, ತನ್ನ ಹೃದಯದಲ್ಲಿ ಕೇರಳಕ್ಕೆ ವಿಶೇಷ ಸ್ಥಾನವಿದೆ ಎಂದು ಉಲ್ಲೇಖಿಸಿದ್ದಾರೆ. ಯಾಕೆಂದರೆ, ಇತ್ತೀಚೆಗೆ ತನ್ನ ತಂದೆ ಹಾಗೂ ಪತ್ನಿಯ ಜೊತೆ ಭಾರತದ ಕೇರಳಕ್ಕೆ ಆಗಮಿಸಿದ ಅವರಿಗೆ ಆತ್ಮೀಯ ಸ್ವಾಗತ ದೊರೆತಿತ್ತಂತೆ. ಜನರು ಕೂಡ ಬಹಳ ಪ್ರೀತಿಯಿಂದ ಬರಮಾಡಿಕೊಂಡಿದ್ದರಿಂದ ಕೇರಳ ಅಂದ್ರೆ ವಿಶೇಷ ಪ್ರೀತಿ ಎಂದು ಅವರು ಹೇಳಿದ್ದಾರೆ.

ಮೆನನ್ ಅವರು 2014 ರಲ್ಲಿ ನಾಸಾ ಫ್ಲೈಟ್ ಸರ್ಜನ್ ಆಗಿ ಸೇವೆ ಸಲ್ಲಿಸಿದ್ದಾರೆ. ನಾಸಾ ಗಗನಯಾನಕ್ಕಾಗಿ ಎರಡು ವರ್ಷಗಳ ಆರಂಭಿಕ ಗಗನಯಾತ್ರಿ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ. ಇದಕ್ಕೂ ಮೊದಲು, ಅವರು ಯುಎಸ್ ಏರ್ ಫೋರ್ಸ್‌ನಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿದ್ದರು ಮತ್ತು ಸ್ಪೇಸ್‌ಎಕ್ಸ್‌ನ ಮೊದಲ ಫ್ಲೈಟ್ ಸರ್ಜನ್ ಕೂಡ ಆಗಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...