alex Certify ಬಾಹ್ಯಾಕಾಶ ಕೇಂದ್ರದಲ್ಲಿ ಯುವತಿಯ ಹುಟ್ಟುಹಬ್ಬ ಆಚರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಹ್ಯಾಕಾಶ ಕೇಂದ್ರದಲ್ಲಿ ಯುವತಿಯ ಹುಟ್ಟುಹಬ್ಬ ಆಚರಣೆ

ಮನೆಗಳಲ್ಲಿ, ಹೋಟೆಲ್‍ಗಳಲ್ಲಿ, ಎತ್ತರದ ಕಟ್ಟಡಗಳ ತುತ್ತತುದಿಯಲ್ಲಿ ಬರ್ತ್ ಡೇ ಸಂಭ್ರಮಾಚರಣೆ ಕಂಡಿರುತ್ತೀರಿ. ಆದರೆ ಅಂತರಿಕ್ಷದಲ್ಲಿ ಗುರುತ್ವಾಕರ್ಷಣ ಶಕ್ತಿಯ ಗೋಜಿಲ್ಲದೆಯೇ ತೇಲಾಡುತ್ತಾ ಕೇಕ್, ಚಾಕೊಲೆಟ್ ಕ್ಯಾಂಡಲ್ಸ್, ಐಸ್‍ಕ್ರೀಂಗಳ ಎದುರು ಕೂತು ಬರ್ತ್ ಡೇ ಸಂಭ್ರಮಾಚರಣೆ ಮಾಡಿಕೊಳ್ಳುವ ಭಾಗ್ಯ ಎಲ್ಲರಿಗೂ ಇರಲ್ಲ.

ಬಾಹ್ಯಾಕಾಶ ನಿಲ್ದಾಣಕ್ಕೂ ತಟ್ಟಿದ ಒಲಂಪಿಕ್ಸ್‌ ಜ್ವರ; ನಿಬ್ಬೆರಗಾಗಿಸುತ್ತೆ ಆಟದ ವಿಡಿಯೋ

ಅದು ಮೆಗಾನ್ ಮ್ಯಾಕ್ ಆರ್ಥುರ್‍ಗೆ ಲಭಿಸಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ತನ್ನ ಎಕ್ಸ್ ಪಿಡೀಷನ್ 65 ತಂಡದ ಜತೆಗೆ ಮೆಗಾನ್ ಜನ್ಮದಿನದ ಸಂಭ್ರಮಾಚರಣೆ ಮಾಡಿದ್ದಾರೆ. ಮಲಗುತ್ತಾ, ತೇಲುತ್ತಾ, ಸಂಗಡಿಗರನ್ನು ಒಬ್ಬರನ್ನೊಬ್ಬರು ಹಿಡಿದುಕೊಂಡು ಫೋಟೊಗಳಿಗೆ ಪೋಸ್ ಕೂಡ ಕೊಟ್ಟಿದ್ದಾರೆ. ಈ ಫೋಟೊಗಳನ್ನು ಮೆಗಾನ್ ತಮ್ಮ ಟ್ವಿಟರ್‍ನಲ್ಲಿ ಹಂಚಿಕೊಂಡಿದ್ದು, ‘ ಅಂತರಿಕ್ಷದ ಯುವರಾಣಿಯ ಬರ್ತ್ ಡೇ’ ಎಂದು ಟ್ವೀಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...