alex Certify ಬೈಕ್​ ಇಂಜಿನ್​ ಬಳಕೆಯಿಂದ ತಯಾರಾಯ್ತು ಸೀ ಪ್ಲೇನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೈಕ್​ ಇಂಜಿನ್​ ಬಳಕೆಯಿಂದ ತಯಾರಾಯ್ತು ಸೀ ಪ್ಲೇನ್

ಕೆಲ ದಿನಗಳ ಹಿಂದಷ್ಟೇ ಆಸ್ಸಾಂನ ಮೆಕ್ಯಾನಿಕ್​ ಒಬ್ಬ ಹಳೆಯ ಮಾರುತಿ ಸ್ವಿಫ್ಟ್​​ ಕಾರನ್ನ ಲ್ಯಾಂಬರ್ಗಿನಿ ಸ್ಪೋರ್ಟ್ಸ್​ ಕಾರನ್ನಾಗಿ ಮಾರ್ಪಡಿಸುವ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿದ್ದರು. ಅಲ್ಲದೇ ಈ ಸಾಧನೆಯ ಮೂಲಕ ಸ್ಥಳೀಯ ಮಟ್ಟದಲ್ಲಿ ಸೆಲೆಬ್ರಿಟಿ ಎನಿಸಿಕೊಂಡಿದ್ದರು.

ಅದೇ ರೀತಿ ಆಸ್ಸಾಂನ ಇನ್ನೊಬ್ಬ ವ್ಯಕ್ತಿ ಇದೀಗ ಮತ್ತೊಂದು ಸಾಧನೆ ಮಾಡುವ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದ್ದಾರೆ. ಚೋರೈಪಾನಿ ಗ್ರಾಮದ ನಿವಾಸಿಯಾದ ಬುಬುಲ್​ ಸೈಕಿಯಾ ಎಂಬವರು ಮೊಟಾರ್​ ಸೈಕಲ್​ ಎಂಜಿನ್​​ನ್ನು ಬಳಕೆ ಮಾಡಿ ಸೀಪ್ಲೇನ್​ನ್ನು ಕಂಡು ಹಿಡಿದಿದ್ದಾರೆ. ಅಂದ ಹಾಗೆ ಯಾವುದೇ ತಾಂತ್ರಿಕ ತರಬೇತಿಯನ್ನ ಪಡೆಯದೇ ಬುಬುಲ್​ ಈ ಸಾಧನೆಯನ್ನ ಮಾಡಿ ತೋರಿಸಿದ್ದಾರೆ.

ವಿಮಾನದಲ್ಲಿ ಹಾರಾಡಬೇಕೆಂಬ ಕನಸನ್ನ ಹೊಂದಿದ್ದ ಬುಬಲ್​ ಇದೀಗ ಸೀ ಪ್ಲೇನ್​ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಅಂದಹಾಗೆ ಈ ವಿಮಾನವನ್ನ ಕಂಡುಹಿಡಿಯಲು ಬೇಕಾದ ಎಲ್ಲಾ ಸಾಮಗ್ರಿಗಳನ್ನ ಬುಬುಲ್​​ ತಮ್ಮ ಸ್ವಂತ ಖರ್ಚಿನಲ್ಲೇ ಹೊಂದಿಸಿದ್ದಾರೆ. ಈ ವಿಮಾನಕ್ಕೆ ಬಜಾಜ್​ ಪಲ್ಸರ್​ 220ಯ ಇಂಜಿನ್​​ನ್ನು ಹಾಕಲಾಗಿದೆ.

ಎಲ್ಲರಂತೆ ನಾನೂ ಸಹ ಆಕಾಶದಲ್ಲಿ ಹಾರಾಡುವ ಕನಸನ್ನ ಕಂಡಿದ್ದೆ. ಆಕಾಶದಲ್ಲಿ ಹಾರಾಡಲು ನಾನೇ ಸ್ವಂತ ಒಂದು ಆವಿಷ್ಕಾರ ಮಾಡಬೇಕು ಎಂಬ ಹೆಬ್ಬಯಕೆ ನನಗಿತ್ತು. ಈ ಸಾಧನದ ಮೂಲಕ ನಾನು ಎಷ್ಟು ಮೇಲೆ ಹಾರಾಡುತ್ತೇನೆ ಎಂದು ನೋಡುತ್ತೇನೆ ಎಂದು ಬುಬುಲ್​ ಹೇಳಿದ್ದಾರೆ. ಈ ಸಾಧನ ಕಂಡುಹಿಡಿಯಲು ಬುಬುಲ್​ 2 ಲಕ್ಷ ರೂಪಾಯಿಗಳನ್ನ ವ್ಯಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...