alex Certify ಹಾವಿನ ಜೊತೆ ನೃತ್ಯ ಮಾಡಲು ಹೋಗಿದ್ದು ಯಡವಟ್ಟಾಯ್ತು…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾವಿನ ಜೊತೆ ನೃತ್ಯ ಮಾಡಲು ಹೋಗಿದ್ದು ಯಡವಟ್ಟಾಯ್ತು…..!

ಹಾವು ಕಂಡ್ರೆ ಜನರು ಓಡಿ ಹೋಗ್ತಾರೆ. ಹಾವಿನ ಹೆಸರು ಕೇಳಿದ್ರೆ ಬೆಚ್ಚಿ ಬೀಳುವವರಿದ್ದಾರೆ. ಹಾವು ಎಂದಿಗೂ ಅಪಾಯಕಾರಿ. ಹಾವಿನ ಜೊತೆ ಸರಸ ಸಲ್ಲದು. ಆದ್ರೆ 60 ವರ್ಷದ ವೃದ್ಧನೊಬ್ಬ ಹಾವನ್ನು ಕೈನಲ್ಲಿ ಹಿಡಿದು ಡಾನ್ಸ್ ಮಾಡಿದ್ದಾನೆ. ಆತನ ಹುಚ್ಚಾಟ, ಆತನ ಸಾವಿಗೆ ಕಾರಣವಾಗಿದೆ.

BIG NEWS: ನೋಟಿನ ಮೇಲಿರುವ ಗಾಂಧಿ ಫೋಟೋ ತೆಗೆಯಲು ಕಾಂಗ್ರೆಸ್ ಶಾಸಕರ ಒತ್ತಾಯ..! ಇದರ ಹಿಂದಿದೆ ಈ ಕಾರಣ

ಘಟನೆ ಅಸ್ಸಾಂನಲ್ಲಿ ನಡೆದಿದೆ. ಇಲ್ಲಿನ ಗ್ರಾಮವೊಂದರಲ್ಲಿ ಹಾವಿನ ಜೊತೆ ಡಾನ್ಸ್ ಮಾಡಲು ಹೋಗಿ ವೃದ್ಧ ಬಲಿಯಾಗಿದ್ದಾನೆ. ಆತನ ಹೆಸರು ರಘುನಂದನ್. ಭತ್ತದ ಗದ್ದೆಯಲ್ಲಿ ಕೆಲಸ ಮಾಡ್ತಿದ್ದ ವೇಳೆ 14 ಅಡಿಗಳ ಹಾವು ಕಾಣಿಸಿದೆ. ವಿಷಕಾರಿ ಹಾವನ್ನು ರಘುನಂದನ್ ಕೈನಲ್ಲಿ ಹಿಡಿದಿದ್ದಾನೆ.

ಅಷ್ಟೇ ಅಲ್ಲ, ಅದನ್ನು ಗ್ರಾಮಕ್ಕೆ ತಂದು, ಸುತ್ತಾಡಿದ್ದಾನೆ. ಅದನ್ನು ಹೆಗಲಿಗೆ ಹಾಕಿಕೊಂಡು ಡಾನ್ಸ್ ಮಾಡಿದ್ದಾನೆ. ರಘುನಂದನ್ ಹಾವನ್ನು ಸರಿಯಾಗಿ ಹಿಡಿದಿರಲಿಲ್ಲ. ಹಾವಿಗೆ ಕಚ್ಚುವಂತೆ ಪ್ರಚೋದನೆ ಮಾಡ್ತಿದ್ದ ಎನ್ನಲಾಗಿದೆ. ಆತನ ವಿಡಿಯೋವನ್ನು ಗ್ರಾಮಸ್ಥರು ಸೆರೆ ಹಿಡಿದಿದ್ದಾರೆ. ನೃತ್ಯ ಮಾಡುವಾಗ ಹಾವು ಕಚ್ಚಿದೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ರಘುನಂದನ್ ಈಗಾಗ್ಲೇ ಸಾವನ್ನಪ್ಪಿದ್ದಾನೆಂದು ವೈದ್ಯರು ಹೇಳಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು, ಹಾವನ್ನು ರಕ್ಷಿಸಿ, ಕಾಡಿಗೆ ಬಿಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...