ಡ್ರಗ್ ಸೇವನೆ ಪ್ರಕರಣದಲ್ಲಿ ಎನ್ಸಿಬಿ ಪೊಲೀಸರ ಬಲೆಗೆ ಸಿಲುಕಿರುವ ಆರ್ಯನ್ ಖಾನ್ ದಿನಕ್ಕೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದ್ದಾನೆ. ಆರ್ಯನ್ಗೆ ಜಾಮೀನು ದೊರಕಿಸಲು ವಕೀಲರು ಸತತ ಪ್ರಯತ್ನ ಮುಂದುವರಿಸಿದ್ದಾರೆ. ಪುತ್ರನಿಗೆ ಜಾಮೀನು ಸಿಗದೇ ಇರೋದು ಪೋಷಕರಾದ ಶಾರೂಕ್ ಖಾನ್ ಹಾಗೂ ಗೌರಿ ಖಾನ್ ಆತಂಕಕ್ಕೆ ಕಾರಣವಾಗಿದೆ.
ಗಳಿಕೆಯಲ್ಲಿ ದಾಖಲೆ: ಗಲ್ಲಾಪೆಟ್ಟಿಗೆ ಲೂಟಿ ಮಾಡಿದ ‘ಕೋಟಿಗೊಬ್ಬ’, ನಾಲ್ಕೇ ದಿನದಲ್ಲಿ 40 ಕೋಟಿ ಕಲೆಕ್ಷನ್
ಉನ್ನತ ಮೂಲಗಳಿಂದ ದೊರಕಿರುವ ಮಾಹಿತಿಯ ಪ್ರಕಾರ, ಮನೆಯಲ್ಲಿ ಮಧ್ಯಾಹ್ನದ ಊಟದ ಜೊತೆಯಲ್ಲಿ ಅಡುಗೆ ಸಿಬ್ಬಂದಿ ಖೀರನ್ನು ತಯಾರಿಸುತ್ತಿರುವುದನ್ನು ಗಮನಿಸಿದ ಗೌರಿ ಖಾನ್ ಕೂಡಲೇ ಖೀರನ್ನು ತಯಾರಿಸದಂತೆ ಸೂಚನೆ ನೀಡಿದ್ದಾರೆ. ಅಲ್ಲದೇ ಆರ್ಯನ್ ಮನೆಗೆ ವಾಪಸ್ಸಾಗುವವರೆಗೂ ಯಾವುದೇ ರೀತಿಯ ಸಿಹಿ ಪದಾರ್ಥ ಮನೆಯಲ್ಲಿ ತಯಾರಿಸುವಂತಿಲ್ಲ ಎಂದು ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಮಗನ ಬಂಧನದಿಂದ ಗೌರಿ ಖಾನ್ ಆತಂಕಕ್ಕೆ ಸಿಲುಕಿದ್ದು ಮಗನಿಗೆ ಜಾಮೀನು ಸಿಗಲಿ ಎಂದು ಪ್ರತಿನಿತ್ಯ ಪ್ರಾರ್ಥನೆ ಸಲ್ಲಿಸುತ್ತಿದ್ದಾರಂತೆ.
10 ತಿಂಗಳಲ್ಲಿ 20 ಲಕ್ಷ ರೂ. ಉಳಿಸಿದ ಜೋಡಿ….!
ಇತ್ತ ಬಾಲಿವುಡ್ ನಟ ಶಾರೂಕ್ ಖಾನ್ ತಾವು ಈಗ ಜೀವನದ ಕಷ್ಟದ ಘಳಿಗೆಯಲ್ಲಿದ್ದು ಯಾರಿಗೂ ಮನೆಗೆ ಆಗಮಿಸದಂತೆ ಸ್ನೇಹಿತರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಫೋನ್ ಕಾಲ್ ಮೂಲಕವೇ ತಮ್ಮ ಸ್ನೇಹಿತರ ಜೊತೆ ಶಾರೂಕ್ ಸಂಪರ್ಕದಲ್ಲಿದ್ದಾರೆ. ಆರ್ಯನ್ ಖಾನ್ ಬಂಧನದ ಬಳಿಕ ಪ್ರೀತಿ ಜಿಂಟಾ ಹಾಗೂ ಸಲ್ಮಾನ್ ಖಾನ್ ಶಾರೂಕ್ ನಿವಾಸದ ಬಳಿ ಕಾಣಿಸಿಕೊಂಡಿದ್ದರು.
ಆರ್ಯನ್ ಖಾನ್ ಕ್ಯಾಂಟೀನ್ ಖರ್ಚಿಗೆಂದು ಅರ್ತೂರ್ ಜೈಲು ಆಡಳಿತ ಮಂಡಳಿಗೆ ಶಾರೂಕ್ 4500 ರೂಪಾಯಿ ಮನಿ ಆರ್ಡರ್ ಮಾಡಿದ್ದಾರೆ. ಕೋವಿಡ್ 19 ಹಿನ್ನೆಲೆಯಲ್ಲಿ ಜೈಲಿಗೆ ಪ್ರವೇಶಿಸಲು ಗೌರಿ ಹಾಗೂ ಶಾರೂಕ್ ಖಾನ್ಗೆ ಅನುಮತಿ ಇಲ್ಲದ ಹಿನ್ನೆಲೆಯಲ್ಲಿ ಆರ್ಯನ್ ಜೊತೆ ವಿಡಿಯೋ ಕಾಲ್ ಮೂಲಕ 10 ನಿಮಿಷಗಳ ಕಾಲ ಮಾತನಾಡಿದ್ದಾರೆ ಎನ್ನಲಾಗಿದೆ.