alex Certify ರೇವ್ ಪಾರ್ಟಿ ಎಂದರೇನು….? ಇಲ್ಲಿದೆ ಅದರ ಇತಿಹಾಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೇವ್ ಪಾರ್ಟಿ ಎಂದರೇನು….? ಇಲ್ಲಿದೆ ಅದರ ಇತಿಹಾಸ

ಬಾಲಿವುಡ್ ಬಾದ್ ಶಾ, ಶಾರುಖ್ ಖಾನ್ ಪುತ್ರ ಆರ್ಯನ್ ಬಂಧನವಾಗ್ತಿದ್ದಂತೆ ರೇವ್ ಪಾರ್ಟಿ ಬಗ್ಗೆ ದೇಶಾದ್ಯಂತ ತೀವ್ರವಾಗಿ ಚರ್ಚೆಯಾಗ್ತಿದೆ. ರೇವ್ ಪಾರ್ಟಿ ಏನು ಎಂಬ ಬಗ್ಗೆ ವಿವರ ಇಲ್ಲಿದೆ.

60 ರ ದಶಕದಲ್ಲಿ ಯುರೋಪಿಯನ್ ದೇಶಗಳಲ್ಲಿ ಪಾರ್ಟಿಗಳು ವೈನ್ ಮತ್ತು ಮದ್ಯಕ್ಕೆ ಸೀಮಿತವಾಗಿತ್ತು. ಆದರೆ 80 ರ ದಶಕದಲ್ಲಿ ಅದು ಬದಲಾಗಲಾರಂಭಿಸಿತು. ರೇವ್ ಪಾರ್ಟಿಯ ರೂಪವನ್ನು ಪಡೆಯಿತು. 90 ರ ದಶಕದ ಆರಂಭದಲ್ಲಿ ಅನೇಕ ದೇಶಗಳಲ್ಲಿ ರೇವ್ ಪಾರ್ಟಿಗಳು ಶುರುವಾದವು. ವಿನೋದದಿಂದ ತುಂಬಿದ ಭಾವೋದ್ರಿಕ್ತ ಕೂಟಗಳನ್ನು ರೇವ್ ಎಂದು ಕರೆಯಲಾಗುತ್ತದೆ.

ಮಾಧ್ಯಮ ವರದಿಗಳ ಪ್ರಕಾರ, ಯುಎಸ್ ಕಾನೂನು ಇಲಾಖೆಯ ಒಂದು ಡಾಕ್ಯುಮೆಂಟ್ ನಲ್ಲಿ, ರೇವ್ ಪಾರ್ಟಿ, ನೃತ್ಯ ಪಾರ್ಟಿಗಳೊಂದಿಗೆ ಆರಂಭವಾಯಿತು ಎಂದಿದೆ. ಡ್ಯಾನ್ಸ್ ಪಾರ್ಟಿ ರೇವ್ ಪಾರ್ಟಿಯಾಗಿ ಬದಲಾಗತೊಡಗಿತು. ಸಂಗೀತ ತಂತ್ರಜ್ಞಾನ, ಹವ್ಯಾಸಗಳು ಮತ್ತು ಮಾದಕವಸ್ತುಗಳನ್ನು ಇದಕ್ಕೆ ಸೇರಿಸಲಾಯಿತು.

ಭಾರತದಲ್ಲಿ ರೇವ್ ಪಾರ್ಟಿಗಳ ಟ್ರೆಂಡ್ ಗೋವಾದಿಂದ ಆರಂಭವಾಯಿತು. ಹಿಪ್ಪಿಗಳು ಅದನ್ನು ಗೋವಾದಲ್ಲಿ ಆರಂಭಿಸಿದರು. ಕಳೆದ ಕೆಲವು ವರ್ಷಗಳಲ್ಲಿ ಹಿಮಾಚಲದ ಕುಲ್ಲು ಕಣಿವೆ, ಬೆಂಗಳೂರು, ಪುಣೆ, ಮುಂಬೈ, ಹೈದರಾಬಾದ್, ಕೋಲ್ಕತಾ, ಚೆನ್ನೈ ಸೇರಿದಂತೆ ಹಲವು ನಗರಗಳು ರೇವ್ ಪಾರ್ಟಿ ರೋಮಾಂಚನಕಾರಿ ತಾಣಗಳಾಗಿವೆ.

ರೇವ್ ಪಾರ್ಟಿಗಳಲ್ಲಿ ನೃತ್ಯ, ವಿನೋದ, ಮದ್ಯ ಎಲ್ಲವೂ ಉಚಿತ. ಈ ಪಾರ್ಟಿಗಳು ರಾತ್ರಿಯಿಡೀ ನಡೆಯುತ್ತವೆ. ಈ ಪಾರ್ಟಿಗಳಿಗೆ ಹೋಗುವ ಜನರಿಗೆ ಶುಲ್ಕವಾಗಿ ಅಧಿಕ ಹಣವನ್ನು ವಿಧಿಸಲಾಗುತ್ತದೆ.ಈ ಪಾರ್ಟಿಗಳಲ್ಲಿ ಸೇರುವ ಜನ ಡಿಜೆ, ಡ್ಯಾನ್ಸ್, ಹಾಡಿನ ಮೂಲಕ ನೆರೆದ ಜನರನ್ನು ರಂಜಿಸುತ್ತಾರೆ. ಯುವಕ ಯುವತಿಯರು ಮೋಜಿನಲ್ಲಿ ಮುಳುಗಿರುತ್ತಾರೆ. ಆಹಾರ ಮತ್ತು ಪಾನೀಯ, ಆಲ್ಕೋಹಾಲ್, ಸಿಗರೇಟ್ ಇತ್ಯಾದಿಗಳನ್ನು ಹೊರತುಪಡಿಸಿ, ಇಲ್ಲಿ ಕೊಕೇನ್, ಹಶಿಶ್, ಚರಸ್, ಎಲ್ಎಸ್ಡಿ, ಮೆಫೆಡ್ರೋನ್, ಮಾದಕ ದ್ರವ್ಯಕ್ಕೆ ಅವಕಾಶವಿರುತ್ತದೆ.

ಇನ್ನೂ ಕೆಲವು ರೇವ್ ಪಾರ್ಟಿಗಳು ಲೈಂಗಿಕತೆಗಾಗಿ ‘ಚಿಲ್ ರೂಂ’ಗಳನ್ನು ಹೊಂದಿರುತ್ತವೆ. ಹಾಗಂತ ಇಲ್ಲಿ ಎಲ್ಲರಿಗೆ ಅವಕಾಶ ಇರುವುದಿಲ್ಲ. ಎನ್ಸಿಬಿ ಅಧಿಕಾರಿಗಳ ಪ್ರಕಾರ, ರೇವ್ ಪಾರ್ಟಿಗಳನ್ನು ಆಯ್ದ ಕೆಲವರಿಗೆ ಮಾತ್ರ ಆಯೋಜಿಸಲಾಗುತ್ತದೆ. ಹೊಸಬರಿಗೆ ಈ ಪಾರ್ಟಿಗಳಿಗೆ ಬರಲು ಅವಕಾಶವಿರುವುದಿಲ್ಲ. ಗೌಪ್ಯತೆಯನ್ನು ಸಂಪೂರ್ಣವಾಗಿ ಕಾಪಾಡಲಾಗುತ್ತದೆ. ಮಾದಕ ದ್ರವ್ಯ ಸೇವಿಸುವವರಿಗೆ ಮತ್ತು ಮಾರಾಟಗಾರರಿಗೆ ಇದು ಸುರಕ್ಷಿತ ಸ್ಥಳವಾಗಿದೆ. ದೊಡ್ಡ ವ್ಯಕ್ತಿಗಳು, ಅವರ ಮಕ್ಕಳು, ಸ್ಟಾರ್ ನಟ-ನಟಿಯರು ಈ ಪಾರ್ಟಿಯಲ್ಲಿ ಭಾಗಿಯಾಗಿ ಎಂಜಾಯ್ ಮಾಡುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...