alex Certify ಹುಡುಗಿ ಹಿಂದೆ ಬಿದ್ದವನಿಗೆ ಚಾಕು ಇರಿತ: ಪ್ರಿಯಕರ ಸೇರಿ ಇಬ್ಬರು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಡುಗಿ ಹಿಂದೆ ಬಿದ್ದವನಿಗೆ ಚಾಕು ಇರಿತ: ಪ್ರಿಯಕರ ಸೇರಿ ಇಬ್ಬರು ಅರೆಸ್ಟ್

ಬೆಂಗಳೂರು: ಯುವತಿ ವಿಚಾರಕ್ಕೆ ಯುವಕನಿಗೆ ಚಾಕುವಿನಿಂದ ಇರಿದ ಇಬ್ಬರು ಆರೋಪಿಗಳನ್ನು ಚಂದ್ರಾ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಾಯಂಡಹಳ್ಳಿಯ ಧನುಷ್(20) ಶಹಬುದ್ದೀನ್(22) ಬಂಧಿತರು. ಡಿಸೆಂಬರ್ 21ರಂದು ವಿನಾಯಕ ಲೇಔಟ್ ನಲ್ಲಿ ಕಾರ್ತಿಕ್ ನಿಗೆ ಚಾಕುವಿನಿಂದ ಇರಿದಿದ್ದರು. ಕೆಲವು ದಿನಗಳ ಹಿಂದೆ ಧನುಷ್ ಪ್ರೇಯಸಿ ನಂಬರ್ ಪಡೆದುಕೊಂಡಿದ್ದ ಕಾರ್ತಿಕ್ ಆಕೆಗೆ ಕರೆ ಮಾಡಿ ಮಾತನಾಡಿದ್ದ. ಪ್ರೀತಿಸುವಂತೆ ಪೀಡಿಸುತ್ತಿದ್ದ. ಈತನ ಕಾಟಕ್ಕೆ ಬೇಸತ್ತಿದ್ದ ಯುವತಿ ಪ್ರಿಯಕರ ಧನುಷ್ ಗೆ ವಿಷಯ ತಿಳಿಸಿದ್ದಾರೆ. ಆಕ್ರೋಶಗೊಂಡ ಧನುಷ್ ತನ್ನ ಸ್ನೇಹಿತ ಶಹಬುದ್ದೀನ್ ಗೆ ವಿಚಾರ ತಿಳಿಸಿ ಕಾರ್ತಿಕ್ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.

ಡಿಸೆಂಬರ್ 21ರಂದು ಸಂಜೆ ಕರೆ ಮಾಡಿ ಧನುಷ್ ಕರೆಸಿಕೊಂಡ ಆರೋಪಿಗಳು ಚಾಕು, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಕಾರ್ತಿಕ್ ತಾನೆ ಬೈಕ್ ಚಾಲನೆ ಮಾಡಿಕೊಂಡು ಹೋಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಕಾರ್ತಿಕ್ ಹೇಳಿಕೆ ಪಡೆದ ಚಂದ್ರಾ ಲೇಔಟ್ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...