alex Certify ಗೋವಾದಲ್ಲಿ ಅತ್ಯಾಚಾರ, ಗದಗದಲ್ಲಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೋವಾದಲ್ಲಿ ಅತ್ಯಾಚಾರ, ಗದಗದಲ್ಲಿ ಅರೆಸ್ಟ್

ಗದಗ: ಗೋವಾದಲ್ಲಿನ ಆರಂಭೋಳ್ ರೆಸಾರ್ಟ್ ನಲ್ಲಿ ರಷ್ಯಾ ಮೂಲದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಯನ್ನು ಗದಗ ಜಿಲ್ಲೆಯ ಮಜ್ಜೂರು ತಾಂಡಾದಲ್ಲಿ ಬಂಧಿಸಲಾಗಿದೆ.

ರವಿ ಬಂಧಿತ ಆರೋಪಿ ಎಂದು ಹೇಳಲಾಗಿದೆ. ಮೇ 6 ರಂದು 12 ವರ್ಷದ ಬಾಲಕಿಯ ತಾಯಿ ಮಾರುಕಟ್ಟೆಗೆ ತೆರಳಿದ್ದರು. ರೆಸಾರ್ಟ್ ನಲ್ಲಿ ರೂಮ್ ಅಟೆಂಡರ್ ಆಗಿದ್ದ ಆರೋಪಿ ರವಿ ರೂಮ್ ಗೆ ನುಗ್ಗಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ.

ಕೊಠಡಿ ಮತ್ತು ಈಜುಕೊಳದಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ನಂತರ ತವರೂರಿಗೆ ಪರಾರಿಯಾಗಿದ್ದ. ಮೇ 10 ರಂದು ಗೋವಾದ ಪರ್ನೇಮ್ ಪೊಲೀಸರು ಆರೋಪಿಯನ್ನು ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಮಜ್ಜೂರ ತಾಂಡಾದಲ್ಲಿ ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...